ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಭಟ್ಕಳದ ಮೊಹಮ್ಮದ್ ಮೀರಾನ್ ಸಾದಾ (77) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಖಾಝಿಯಾ ಸ್ಟ್ರೀಟ್ ನಿವಾಸಿ ಮೀರಾನ್ ಅವರು ಡೆಂಗ್ಯೂ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಸೋಮವಾರ ಬೆಳಗ್ಗೆಯಷ್ಟೇ ಯುವಕನೊಬ್ಬ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದ. ಇದೀಗ ಜಿಲ್ಲೆಯಲ್ಲಿ ಡೆಂಗ್ಯೂನಿಂದ ಎರಡನೇ ಸಾವು ಸಂಭವಿಸಿದೆ.
ಇದನ್ನೂ ಓದಿ | NIA Raid: ತಲೆಮರೆಸಿಕೊಂಡಿದ್ದ ಎಲ್‌ಟಿಟಿಇ ಶಂಕಿತ ಉಗ್ರನನ್ನು ಬಂಧಿಸಿದ ಎನ್‌ಐಎ
ಭಟ್ಕಳ ತಾಲೂಕಿನ ತಲಗೋಡು ನಿವಾಸಿಯಾದ ಪ್ರಜ್ವಲ್ ಗೋವಿಂದ ಖಾರ್ವಿ (24) ಬೆಳಗ್ಗೆ ಮೃತಪಟ್ಟಿದ್ದರು. ಈತ ಸಾಗರಶ್ರೀ ಬೋಟ್‌ನಲ್ಲಿ ಮೀನುಗಾರನಾಗಿ ಕೆಲಸ ಮಾಡುತ್ತಿದ್ದ.
ತಂದೆಯನ್ನೇ ಮಚ್ಚಿನಿಂದ ಹತ್ಯೆಗೈದ ಪಾಪಿ ಮಗ!
ತುಮಕೂರು: ಹಣದ ವಿಚಾರಕ್ಕೆ ಶುರುವಾದ ಗಲಾಟೆಯು ಹೆಣ ಬೀಳುವಂತೆ ಮಾಡಿದೆ. ತಂದೆ-ಮಗನ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಮಗನಿಂದಲೇ ತಂದೆಯೊಬ್ಬ ಬರ್ಬರವಾಗಿ ಹತ್ಯೆ ಆಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ಘಟನೆ ನಡೆದಿದೆ. ರೇಣುಕಯ್ಯ (65) ಕೊಲೆಯಾದ ದುರ್ದೈವಿ.
ರಮೇಶ (31) ಎಂಬಾತ ತನ್ನ ತಂದೆ ರೇಣುಕಯ್ಯನನ್ನು ಹತ್ಯೆ ಮಾಡಿದ್ದಾನೆ. ಅಡಿಕೆ ಎಲೆ ಮಾರಿದ್ದ ಒಂದೂವರೆ ಸಾವಿರ ಹಣದ ವಿಚಾರವಾಗಿ ತಂದೆಯ ಹೆಣವನ್ನೇ ರಮೇಶ್ ಕೆಡವಿದ್ದಾನೆ. ನಿನ್ನೆ ಭಾನುವಾರ ಬೆಳಗ್ಗೆ ರಮೇಶ್ ಅಡಿಕೆ ಎಲೆ ಮಾರಿ ಒಂದೂವರೆ ಸಾವಿರ ಹಣ ಇಟ್ಟುಕೊಂಡಿದ್ದ. ರಾತ್ರಿ ಮನೆಗೆ ಬಂದಿದ್ದ ರಮೇಶ್‌ನ ಬಳಿ ರೇಣುಕಯ್ಯ ಎಲೆ ಮಾರಿದ್ದ ಹಣವನ್ನು ಕೇಳಿದ್ದಾರೆ.
ಇದನ್ನೂ ಓದಿ: Street Dog Attack: ವಾಘ್ ಬಕ್ರಿ ಚಹಾ ಕಂಪನಿ ಮಾಲಿಕ ಬೀದಿ ನಾಯಿಗಳಿಗೆ ಬಲಿ!
ಈ ವೇಳೆ ಸಿಟ್ಟಿಗೆದ್ದ ರಮೇಶ್ ತಂದೆಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದ. ತಂದೆ- ಮಗನ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಕುಡಿದ ಮತ್ತಿನಲ್ಲಿದ್ದ ರಮೇಶ್ ಮನೆಯಲ್ಲಿದ್ದ ಮಚ್ಚಿನಿಂದ ತಂದೆ ರೇಣುಕಯ್ಯ ಮೇಲೆ ದಾಳಿ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ರಮೇಶನನ್ನು ಬಂಧಿಸಿದ್ದಾರೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ