Site icon Vistara News

ಪದವಿ, ಸ್ನಾತಕೋತ್ತರ ಕೋರ್ಸ್ ಗಳಿಗೆ ಆನ್‌ಲೈನ್‌ ಮೂಲಕ ಪ್ರವೇಶ

Rakshit Shetty Richard Anthony Produce By Hombale

ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ (2022-23) ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಸೇರಿಕೊಳ್ಳುವ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಯು ಶುರುವಾಗಲಿದೆ. ಪ್ರವೇಶ ಪಡೆಯಲು ಆನ್‌ಲೈನ್‌ ವಿಧಾನದ ಮೂಲಕವೇ ನಡೆಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಇದನ್ನೂ ಓದಿ |ಹಿಜಾಬ್ ಕಳಚಿ ತರಗತಿಗೆ ಹಾಜರಿ: ಪಟ್ಟು ಸಡಿಲಿಸಿದ ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿನಿಯರು

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವರು, ಕಾಲೇಜು ಶಿಕ್ಷಣ ಇಲಾಖೆ, ವಿ.ವಿ.ಗಳು ಮತ್ತು ವಿವಿ ಕಾಲೇಜುಗಳು ಇದಕ್ಕಾಗಿ www.uucms.karnataka.gov.in ವಿಳಾಸವನ್ನು ತಮ್ಮ ವೆಬ್ ಸೈಟ್‌ಗಳಲ್ಲಿ ಲಿಂಕ್ ಮಾಡಿ, ಲಭ್ಯವಾಗುವಂತೆ ಮಾಡಬೇಕು. ಜತೆಗೆ ಎಲ್ಲ ಕಾಲೇಜುಗಳೂ ಪ್ರವೇಶಾತಿಗೆ ಸಂಬಂಧಿಸಿದ ಮಾಹಿತಿಯನ್ನು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು ಎಂದು ಸೂಚಿಸಿದ್ದಾರೆ.

ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯು ಡಿಜಿಲಿಟೀಕರಣ ವ್ಯವಸ್ಥೆಯನ್ನು ಬಳಕೆಗೆ ತರಲಾಗುತ್ತಿದೆ. ಕೋವಿಡ್‌ ಕಾರಣದಿಂದಾಗಿ ಬಹುತೇಕ ಎಲ್ಲ ಕ್ಷೇತ್ರವೂ ತತ್ತರಿಸಿದ್ದು, ಶಿಕ್ಷಣ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಕೋವಿಡ್‌ ಬಳಿಕ ಇದೀಗ ಶಾಲಾ-ಕಾಲೇಜುಗಳು ಯಥಾಸ್ಥಿತಿಯತ್ತ ಮರಳುತ್ತಿದ್ದು, ನಾಲ್ಕನೇ ಅಲೆಯ ಭೀತಿ ಹಿನ್ನೆಲೆ ಇದೀಗ ಆನ್‌ಲೈನ್‌ ಮೂಲಕವೇ ಪ್ರವೇಶವನ್ನು ನೀಡುತ್ತಿದೆ.

ಇದನ್ನೂ ಓದಿ | ಪಿಯು ಕಾಲೇಜು ಪ್ರವೇಶ ಮಿತಿ ಹೆಚ್ಚಳ: ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ

Exit mobile version