Site icon Vistara News

Online gambling : ಲುಡೋ ಆಡಿ ಲಕ್ಷ ಕಳೆದಳು; ಮಕ್ಕಳೊಂದಿಗೆ ಮನೆ ಬಿಟ್ಟು ಓಡಿಹೋದಳು!

Online gambling

ಬೆಂಗಳೂರು: ಮೊಬೈಲ್‌ ಅಡಿಕ್ಷನ್‌ (Mobile Addiction) ಒಂದು ಕಡೆಯಾದರೆ, ಅದೇ ಮೊಬೈಲ್‌ನಲ್ಲಿ ಆನ್​ಲೈನ್ ಆಟದ (Online gambling) ಗೀಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಬಿಡುತ್ತವೆ. ಆನ್​ಲೈನ್​ ಆಟಗಳ (Online Game) ಗೀಳಿಗೆ ಅದೆಷ್ಟೋ ಪ್ರಾಣಗಳು ಈಗಾಗಲೇ ಬಲಿಯಾಗಿವೆ. ಸದ್ಯ ಲುಡೋ ಆಟದಲ್ಲಿ (Ludo game) (ಚೌಕಾಬಾರ) ಸೋತು ಲಕ್ಷಾಂತರ ರೂ. ಕಳೆದುಕೊಂಡ ಮಹಿಳೆ ಮಕ್ಕಳ ಜತೆಗೆ ಮನೆ ಬಿಟ್ಟು ಹೋಗಿದ್ದಾಳೆ.

ಈಗಂತೂ ಮೊಬೈಲ್​ನಲ್ಲಿ ಹಲವು ಆನ್​ಲೈನ್ ಆಟಗಳು ಸಿಗುತ್ತಿವೆ. ಒಂದು ಭಾರಿ ಆಟಕ್ಕೆ ಪ್ರವೇಶ ಮಾಡಿದರೆ ಅಲ್ಲಿಂದ ಹೊರಬರಲು ಹರಸಾಹಸವೇ ಪಡಬೇಕು. ಆಟದಿಂದ ಲಾಭ ಬರಬಹುದೇನೋ, ಮುಂದಿನ ಆಟದಲ್ಲಿ ಗೆದ್ದು ದುಡ್ಡು ಸಿಗಬಹುದೇನೋ ಎಂಬ ಆಸೆಯಿಂದ ಒಂದಾದ ಮೇಲೊಂದು ಆಟವನ್ನು ಆಡುತ್ತಲೇ ಕುಳಿತುಕೊಳ್ಳುವವರು ಅನೇಕರು. ಹೀಗೆ ಬೆಂಗಳೂರಿನ 26ರ ಗೃಹಿಣಿಯೊಬ್ಬರು ಆನ್​ಲೈನ್​ ಗೇಮ್​ಗಳ ಹುಚ್ಚು ಹಿಡಿಸಿಕೊಂಡು, 4 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಪತ್ರ ಬರೆದಿಟ್ಟು, ಹಣದೊಂದಿಗೆ ಮನೆ ಬಿಟ್ಟಳು

ಆಟದಲ್ಲಿ 4 ಲಕ್ಷ ರೂ. ಸೋತು ಮಾರ್ಯಾದೆಗೆ ಅಂಜಿದ ಮಹಿಳೆ ಮನೆ ಬಿಟ್ಟು ಹೋಗುವ ಮುನ್ನ ಪತಿಗೆ ಪತ್ರವೊಂದನ್ನು ಬರೆದಿದ್ದಾಳೆ. ಪತ್ರದಲ್ಲಿ ಪತಿಗೆ ಕ್ಷಮೆಯಾಚಿಸಿ ಬಳಿಕ ಮನೆಯಲ್ಲಿಟ್ಟಿರುವ ಹಣವನ್ನು ತೆಗೆದುಕೊಂಡಿದ್ದೇನೆ. ಕ್ಷಮಿಸಿಬಿಡಿ ಎಂದು ಬರೆದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಹೆಂಡ್ತಿ ಮಕ್ಕಳನ್ನು ಹುಡುಕಿಕೊಡಿ ಎಂದು ಪತಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: Mobile Addiction : ಪೋಷಕರೇ ಹಾಕಿಕೊಳ್ಳಿ ಈ ಆ್ಯಪ್, ಮಕ್ಕಳು ಮುಟ್ಟಿದ ತಕ್ಷಣ ಮೊಬೈಲ್ ಆಫ್!

ಚಿನ್ನಾಭರಣವನ್ನು ಅಡಮಾನ ಇಟ್ಟಿದ್ದ ಮಹಿಳೆ

ಕಳೆದ ಒಂದು ವರ್ಷದ ಹಿಂದೆಯೇ ಮಹಿಳೆ ಆನ್‌ಲೈನ್‌ ಚಟಕ್ಕೆ ಬಿದ್ದು ಸುಮಾರು 50 ಸಾವಿರ ರೂ ಕಳೆದುಕೊಂಡಿದ್ದಳು. ಬಳಿಕ 1 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಅಡವಿಟ್ಟಿದ್ದರು. ಆಗಲೂ ಲುಡೋ ಆಟ ಆಡಿ ಸೋತು ಹಣವನ್ನು ಕಳೆದುಕೊಂಡಿದ್ದಳು. ಮತ್ತೆ ಸಂಬಂಧಿಕರಿಂದ ಸಾಲ ಪಡೆದುಕೊಂಡಿದ್ದಳು ಎಂದು ತಿಳಿದು ಬಂದಿದೆ.

ಈ ವಿಷಯ ತಿಳಿದು ಪತಿ ಬುದ್ಧಿವಾದ ಹೇಳಿದಾಗ ಬಿಟ್ಟು ಬಿಡುವುದಾಗಿ ಹೇಳಿದ್ದಳು ಎನ್ನಲಾಗಿದೆ. ಆದರೆ ಮತ್ತೆ ಜುಲೈ 19ರಂದು ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣವನ್ನು ಅಡವಿಟ್ಟು ಜೂಜಾಡಿ ಸೋತಿದ್ದಾಳೆ. ಇದು ತಿಳಿದು ಕಡೆಗೆ ಆಕೆಯ ಪೋಷಕರಿಗೂ ವಿಷಯ ಮುಟ್ಟಿಸಿದ್ದರು ಎನ್ನಲಾಗಿದೆ.

ಸತತ ಸೋಲಿಗೆ ಕಂಗಲಾದ ಮಹಿಳೆ ಕಳೆದ ಆಗಸ್ಟ್‌ 8ರಂದು ಹಿರಿಯ ಮಗ (6), ಕಿರಿಯ ಮಗ (1) ಜತೆಗೆ ಮನೆಬಿಟ್ಟು ಹೋಗಿದ್ದಾಳೆ. ಆಕೆ ನಂಬರ್‌ ಸ್ವಿಚ್ಡ್‌ ಆಫ್‌ ಆದಾಗ ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಸದ್ಯ ಪತಿ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version