Site icon Vistara News

Online Scam | ಕಡಿಮೆ ಹಣ ಹೂಡಿ ದುಪ್ಪಟ್ಟು ಲಾಭ ಪಡೆಯಿರಿ ಎಂದು ಟೋಪಿ ಹಾಕಿದ ಸೂಪರ್‌ ಲೈಕ್‌ ಆ್ಯಪ್!

online scam

ಬೆಂಗಳೂರು: ಕುಳಿತ ಜಾಗದಲ್ಲೇ ಸುಲಭವಾಗಿ ಹಣ ಸಂಪಾದಿಸಬಹುದು. ಕಡಿಮೆ ಹಣ ಹೂಡಿ ದುಪ್ಪಟ್ಟು ಲಾಭ ಪಡೆಯಿರಿ ಎಂದೆಲ್ಲ ಆಕರ್ಷಕ ಜಾಹೀರಾತು ನೀಡಿ ವಂಚಿಸುತ್ತಿದ್ದ (online scam) ಮತ್ತೊಂದು ಕಂಪನಿಯ ವಂಚನೆ ಬೆಳಕಿಗೆ ಬಂದಿದೆ.

ಸೂಪರ್ ಲೈಕ್ ಆನ್ ಲೈನ್ ಅರ್ನಿಂಗ್ಸ್ ಅಪ್ಲಿಕೇಷನ್ ಕಂಪನಿಯಿಂದ ಭಾರಿ ಪ್ರಮಾಣದಲ್ಲಿ ವಂಚನೆ ಮಾಡಿದ ಆರೋಪ ಎದುರಿಸುತ್ತಿದೆ. ಈ ಕಂಪನಿ ವಿರುದ್ಧ ಜಾರಿ ನಿರ್ದೇಶನಾಲಯ ಪಿಎಂಎಲ್‌ಎ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಲ್ಲದೆ, ನವೆಂಬರ್‌ ೧೪ ಮತ್ತು ೧೫ರಂದು ಬೆಂಗಳೂರಿನ ೧೬ ಕಡೆ ದಾಳಿ ಮಾಡಿದೆ.

ಜಾರಿ ನಿರ್ದೇಶನಾಲಯವು ಕಂಪೆನಿಯ 80 ಬ್ಯಾಂಕ್ ಅಕೌಂಟ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಒಂದು ಕೋಟಿ ರೂ. ನಗದನ್ನು ಸೀಜ್‌ ಮಾಡಿದೆ.

ಕಾರ್ಯಾಚರಣೆ ಹೇಗಿತ್ತು?
ಸೂಪರ್ ಲೈಕ್ ಆನ್ ಲೈನ್ ಅರ್ನಿಂಗ್ಸ್ ಅಪ್ಲಿಕೇಷನ್ ಬಣ್ಣ ಬಣ್ಣದ ಸ್ಲೋಗನ್‌ ಮತ್ತು ಸೆಲೆಬ್ರಿಟಿಗಳು ಹಾಗೂ ಗಣ್ಯರಿಂದ ವಿಡಿಯೊ ಮಾಡಿಸಿ ಜನರನ್ನು ಯಾಮಾರಿಸುತ್ತಿತ್ತು. ಕಂಪನಿಯ ಮಾತನ್ನು ನಂಬಿ ಜನರು ಫೋನ್‌ ಪೇ, ಗೂಗಲ್ ಪೇ ಹಾಗೂ ವಿವಿಧ ಬ್ಯಾಂಕ್ ಖಾತೆಗಳ ಹಣ ವರ್ಗಾವಣೆ ಮಾಡುತ್ತಿದ್ದರು. ಈ ಸಂಬಂಧ ಸೌತ್ ಸಿಇಎನ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ೫೦ ಮಂದಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

ಇದನ್ನೂ ಓದಿ | Online scam | ಓಲಾ ಸ್ಕೂಟರ್ ಬುಕಿಂಗ್‌ ನೆಪದಲ್ಲಿ ಸಾವಿರಾರು ಜನರಿಗೆ ವಂಚನೆ‌, ಬೆಂಗಳೂರಲ್ಲೇ ನಕಲಿ ವೆಬ್‌ಸೈಟ್

Exit mobile version