Site icon Vistara News

Shivanand math: ಗದಗದ ಶಿವಾನಂದ ಬ್ರಹನ್ಮಠದ ಹಿರಿಯ-ಕಿರಿಯ ಶ್ರೀಗಳ ಬೆಂಬಲಿಗರ ನಡುವೆ ದೊಣ್ಣೆಕಾಳಗ

open-fighting-errupts-between-desciples-of-shivanand-mutt swameejis

open-fighting-errupts-between-desciples-of-shivanand-mutt swameejis

ಗದಗ: ಗದಗದ ಶ್ರೀ ಶಿವಾನಂದ ಬ್ರಹನ್ಮಠ (Shivanand math) ಉತ್ತರಾಧಿಕಾರಿ ರಾದ್ಧಾಂತ ಮುಂದುವರಿದಿದ್ದು, ಈ ಬಾರಿ ಹಿರಿಯ ಮತ್ತು ಕಿರಿಯ ಶ್ರೀಗಳ ಸಮ್ಮುಖದಲ್ಲೇ ಅವರ ಬೆಂಬಲಿಗರು ದೊಣ್ಣೆ ಹಿಡಿದು (Fighting between desciples) ಬಡಿದಾಡಿಕೊಂಡಿದ್ದಾರೆ. ಈ ಮೂಲಕ ಇಬ್ಬರು ಮಠಾಧೀಶರ ಪ್ರತಿಷ್ಠೆಯ ನಡುವೆ ಮಠದ ಮಾನ ಹರಾಜು ಆಗುತ್ತಿದೆ.

ನಿಜವೆಂದರೆ, ಗದಗನ ಶ್ರೀ ಶಿವಾನಂದ ಬ್ರಹನ್ಮಠದ ಎನ್ನುವುದು ಉತ್ತರ ಕರ್ನಾಟಕದ ಐತಿಹಾಸಿಕ ಪ್ರಸಿದ್ಧ ಮಠಗಳಲ್ಲೊಂದು. ಆ ಮಠಕ್ಕೆ ಪ್ರತಿ ನಿತ್ಯ ನೂರಾರು ಭಕ್ತರು ಬರುತ್ತಾರೆ. ದಿನನಿತ್ಯ ಮಂತ್ರ ಮಂಗಳಾರತಿ ಭಜನೆ ನಡೆಯುವ ಭಕ್ತರಿಗೆ ನೆಮ್ಮದಿ ಕೊಡುವ ಸ್ಥಳ. ಆದರೆ ಇತ್ತೀಚೆಗೆ ಮಠದಲ್ಲಿ ಶಾಂತಿ ಕದಡುವ ವಾತಾವರಣ ನಿರ್ಮಾಣವಾಗಿದೆ. ನಿತ್ಯ ಭಜನೆ ಮಂತ್ರಘೋಷಗಳೊಂದಿಗೆ ಪೂಜೆ ಪುನಸ್ಕಾರ ನಡೆಯುವ ಜಾಗದಲ್ಲಿ ದೊಣ್ಣೆಗಳು ಹಾರಾಡಿವೆ.

ಮಠದ ಹಿರಿಯ ಶ್ರೀ ಅಭಿನವ ಶಿವಾನಂದ ಮಹಾಸ್ವಾಮಿಜಿ ಹಾಗೂ ಕಿರಿಯ ಶ್ರೀ ಕೈವಲ್ಯಾನಂದ ಭಾರತಿ ಶ್ರೀ ನಡುವೆ ಪೀಠಾಧಿಕಾರಕ್ಕಾಗಿ ಹಿಂದಿನಿಂದಲೂ ಜಟಾಪಟಿ ನಡೆದಿದೆ. ಸದ್ಯ ಈ ಪ್ರಕರಣ ಕೋರ್ಟ್‌ನಲ್ಲಿದೆ.ʼಕಿರಿಯ ಸ್ವಾಮೀಜಿ ತಮ್ಮ ಸಂಪ್ರದಾಯದಂತೆ ನಡೆದುಕೊಳ್ಳುತ್ತಿಲ್ಲ ಎಂದು ಹಿರಿಯ ಸ್ವಾಮೀಜಿ ಅಭಿನವ ಶಿವಾನಂದ ಸ್ವಾಮೀಜಿಯವರು ಕಿರಿಯ ಸ್ವಾಮೀಜಿ ಕೈವಲ್ಯಾನಂದ ಶ್ರೀಯನ್ನ ಉತ್ತರಾಧಿಕಾರಿ ಸ್ಥಾನದಿಂದ ಕೆಳಗಿಳಿಸಿದಾಗಿನಿಂದ ಈ ಗೊಂದಲಗಳು ನಡೆಯುತ್ತಿವೆ. ಹೀಗಾಗಿ ಮಠದಲ್ಲಿ ಎರಡು ಬಣಗಳಾಗಿ ಮಾರ್ಪಟ್ಟಿವೆ.

ಈಗ ಕಿರಿಯ ಶ್ರೀಗಳ ಬೆಂಬಲಿಗರನ್ನು ಮಠದಿಂದ ಹೊರಗಟ್ಟಲು ಗಲಾಟೆ ನಡೆದಿದೆ‌‌. ಕಿರಿಯ ಶ್ರೀ ಬೆಂಬಲಿಗ ಮಲ್ಲರೆಡ್ಡಿ ಮತ್ತು ಹನಮಂತಪ್ಪ ದೊಡ್ಡಮನಿ ಎಂಬ ಯುವಕರನ್ನು ಹಿರಿಯ ಶ್ರೀ ಸ್ವಾಮೀಜಿ ಬೆಂಬಲಿಗರು ಮಠ ಬಿಟ್ಟು ಹೋಗಿ ಅಂತ ತಕರಾರು ತೆಗೆದಿದ್ದರು. ಆದರೆ ಇದಕ್ಕೆ ಒಪ್ಪದ ಯುವಕರು ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ದೊಣ್ಣೆಯಿಂದ ಷಡಕ್ಷರಿ ಹಿರೇಮಠ ಎಂಬವರಿಗೆ ಯುವಕರು ಥಳಿಸಲಾಗಿದೆ. ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಹಿರಿಯ ಹಾಗೂ ಕಿರಿಯ ಸ್ವಾಮೀಜಿಗಳ ಬೆಂಬಲಿಗರ ನಡುವೆ ಮಠದ ಆವರಣದಲ್ಲಿಯೇ ಇಬ್ಬರು ಸ್ವಾಮೀಜಿಗಳ ಮುಂದೆಯೇ ದೊಣ್ಣೆ ಕಾಳಗ ನಡೆದಿದೆ.

ದೊಣ್ಣೆ ಕಾಳಗದ ಹಿಂದಿನ ಕಾರಣವೇನು?

ಹನುಮಂತಪ್ಪ ಹಾಗೂ ಮಲ್ಲರೆಡ್ಡಿ ಕಿರಿಯ ಶ್ರೀ ಕೈವಲ್ಯಾನಂದ ಶ್ರೀಗಳ ಕಟ್ಟಾ ಶಿಷ್ಯರು. ಮಠದಲ್ಲಿನ ಆಗುಹೋಗುಗಳ ಬಗ್ಗೆ ಹಿರಿಯ ಶ್ರೀಗಳ ಬಗ್ಗೆ ಇಲ್ಲಸಲ್ಲದ ಚಾಡಿ ಹೇಳಿ ಅಪಪ್ರಚಾರ ಮಾಡ್ತಿದ್ದಾರೆ ಅಂತ ಹಿರಿಯ ಶ್ರೀಗಳ ಬೆಂಬಲಿಗರು ಆರೋಪ ಮಾಡಿದ್ದಾರೆ.

ಅಲ್ಲದೆ ಅವರು ಖಾಸಗಿ ಕಡೆಯಲ್ಲಿ ಕೆಲಸ ಮಾಡ್ತಿದ್ದು ಮಠದಲ್ಲಿ ಕೇವಲ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಅವಕಾಶ ಇದೆ. ಹೀಗಾಗಿ ಅವರು ಕೆಲಸ ಇದ್ದು ಆರ್ಥಿಕವಾಗಿ ಸಬಲರಾಗಿದ್ದರೂ ಕೂಡ ಮಠ ಬಿಟ್ಟು ಹೋಗುತ್ತಿಲ್ಲ. ಅಂತ ಇವರ ಆರೋಪ ಆಗಿದೆ. ಇನ್ನು ಈ ಗಲಾಟೆ ವೇಳೆ ಯುವಕರು ಹಿರಿಯ ಶ್ರೀಗಳಿಗೆ ಎದುರುತ್ತರ ಕೊಟ್ಟಿದ್ದಕ್ಕೆ ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳು ಮಲ್ಲರೆಡ್ಡಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಈ ಎಲ್ಲಾ ಘಟನೆಗಳನ್ನ ಸ್ವತಃ ಇಬ್ಬರು ಬೆಂಬಲಿಗರು ವಿಡಿಯೊ ಮಾಡಿಕೊಂಡು ಸಾಕ್ಷಿಗಾಗಿ ಬಳಸಿಕೊಳ್ತಿದ್ದಾರೆ. ಆದ್ರೆ ಈ ಶಿಷ್ಯಂದಿರ ಘಟನೆ ಶಿವಾನಂದ ಮಠದ ಭಕ್ತರನ್ನ ಕೆರಳಿಸಿದೆ. ಮಠದಲ್ಲಿ ಏನೆಲ್ಲ ಅವಘಡಗಳು ನಡೆದು ಮಠದ ಗೌರವವನ್ನ ಹಾಳುಗೆಡುವುತ್ತಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗಬೇಕು ಅಂತ ಒತ್ತಾಯ ಮಾಡ್ತಿದ್ದಾರೆ

ಯುವಕರು ಕಿರಿಯ ಶ್ರೀಗಳ ಪ್ರಚೋದನೆಯಿಂದ ಮಠದಲ್ಲಿ ಗುಂಡಾಗಿರಿ ನಡೆಸುತ್ತಿದ್ದಾರೆ ಎಂದು ಹಿರಿಯ ಶ್ರೀಗಳ ಪರವಾಗಿ ಇರುವವರು ಆರೋಪಿಸಿದ್ದಾರೆ‌. ಸದ್ಯ ಘಟನೆ ಕುರಿತಂತೆ ಗದಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಿರಿಯ ಶ್ರೀ ಕೈವಲ್ಯಾನಂದ ಶ್ರೀಗಳ ವಿರುದ್ಧವೂ ದೂರಿನಲ್ಲಿ ಉಲ್ಲೇಖ ಇದೆ.

ಇದನ್ನೂ ಓದಿ: Murder case: ಡಾನ್‌ ಆಗೋ ಗೀಳಿನಿಂದ ಅಮಾಯಕನನ್ನು ಇರಿದು ಕೊಂದ ಮಾಜಿ ಶಾಸಕನ ಪುತ್ರ!

Exit mobile version