ಮಂಡ್ಯ: ಇಲ್ಲಿನ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಬಳಿ ಚಿರತೆಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಚಿರತೆ ಸೆರೆಗೆ ನಾನಾ ಕಸರತ್ತು ನಡೆಸಿದ್ದ (Operation Leopard) ಅರಣ್ಯಾಧಿಕಾರಿಗಳು ಬೋನು ಇರಿಸಿದ್ದರು. ಸಾಕು ಪ್ರಾಣಿಗಳನ್ನು ತಿಂದು ತೆಗೆದಿದ್ದ ಎರಡು ಚಿರತೆಗಳು ಬೋನಿಗೆ ಬಿದ್ದಿವೆ.
ಕಳೆದ ಹಲವು ದಿನಗಳಿಂದ ಚಿರತೆಗಳು ಗ್ರಾಮದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದವು. ಜತೆಗೆ ಕುರಿ, ಮೇಕೆ, ಕರುಗಳ ತಿಂದು ಹಾಕುತ್ತಿದ್ದವು. ಗ್ರಾಮದ ಜನರು ಕೂಡ ಓಡಾಡಲು ಭಯ ಪಡುತ್ತಿದ್ದರು. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಭಾನುವಾರ ಚಿರತೆ ಬಿದ್ದಿದ್ದು, ಮಾರಸಿಂಗನಹಳ್ಳಿಯ ಸುತ್ತಮುತ್ತಲ ಗ್ರಾಮಗಳ ಜನತೆ ಈಗ ನಿಟ್ಟುಸಿರು ಬಿಡುವಂತಾಗಿದೆ.
ಚಿರತೆ ಮರಿ ನೋಡಲು ಮುಗಿ ಬಿದ್ದ ಗ್ರಾಮಸ್ಥರು
ಎರಡು ವರ್ಷ ಪ್ರಾಯದ ಎರಡು ಚಿರತೆಗಳು ಸೆರೆಯಾಗಿದ್ದು, ಬೋನಿಗೆ ಬಿದ್ದ ಚಿರತೆಗಳ ನೋಡಲು ಜನರು ಮುಗಿಬಿದ್ದರು. ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದ ಚಿತ್ರಣ ಕಂಡು ಬಂತು.
ಇದನ್ನೂ ಓದಿ | Snake Bite | ದುಸ್ವಪ್ನದಿಂದ ತಪ್ಪಿಸಿಕೊಳ್ಳಲು ಹೋಗಿ ನಿಜವಾದ ಹಾವಿನಿಂದ ಕಚ್ಚಿಸಿಕೊಂಡು ನಾಲಿಗೆ ಕಳೆದುಕೊಂಡ!