Site icon Vistara News

Opposition Meet: ಬೆಂಗಳೂರಲ್ಲಿ ಪ್ರತಿಪಕ್ಷಗಳ ಸಭೆಗೆ ಚಾಲನೆ, ನಾಯಕರಿಗೆ ಔತಣಕೂಟ

Opposition Parties Meet

ಬೆಂಗಳೂರು, ಕರ್ನಾಟಕ: 2024ರ ಲೋಕಸಭೆ ಚುನಾವಣೆಗಾಗಿ (Lok Sabha Election 2024) ಪ್ರತಿಪಕ್ಷಗಳು ಬೆಂಗಳೂರಲ್ಲಿ ಎರಡು ದಿನಗಳ ಕಾಲ ಸಭೆಯನ್ನು ಆಯೋಜಿಸಿವೆ(opposition Meet). ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ನಾನಾ ಪಕ್ಷಗಳ ನಾಯಕರಿಗೆ (Leaders of Opposition) ಔತಣಕೂಟ ಏರ್ಪಡಿಸಿದ್ದರು.

ಔತಣಕೂಟಕ್ಕೂ ಮುನ್ನ ಔಪಚಾರಿಕ ಸಭೆ ನಡೆಯಿತು. ಈ ಸಭೆಯಲ್ಲಿ ಪ್ರತಿಪಕ್ಷಗಳ ಎಲ್ಲ ನಾಯಕರು ಭಾಗಿಯಾದರು. ಸಭೆಗೆ ಬಂದ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಾಗತಕೋರಿದರು. ಬಳಿಕ ನಾಳೆ ಬೆಳಿಗ್ಗೆ ನಡೆಯುವ ಸಭೆಯಲ್ಲಿ ಚರ್ಚಿಸುವ ವಿಷಯಗಳು ಪ್ರಸ್ತಾಪ ಮಾಡಲಾಯಿತು. ಈ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರು ಚರ್ಚಿಸಿದರು. ಬಳಿಕ ಎಲ್ಲ ನಾಯಕರಿಗೆ ಸಿದ್ದರಾಮಯ್ಯ ಅವರು ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಔತಣಕೂಟ ಏರ್ಪಡಿಸಿದರು.

ಎಐಸಿಸಿ ನಾಯಕರ ಭೇಟಿಗೆ ದಂಡು

ವಿರೋಧ ಪಕ್ಷಗಳ ನಾಯಕರ ಔತಣಕೂಟ ಮುಗಿಯುತ್ತಿದ್ದಂತೆ ರಾಜ್ಯದ ಅನೇಕ ನಾಯಕರುಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ನಾಯಕರ ಭೇಟಿಗೆ ಆಗಮಿಸಿದರು. ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರು, ಸಚಿವರು ಸೇರಿದಂತೆ ಅನೇಕರು ಹಾಜರಿದ್ದರು. ಸಚಿವ ಜಿ.ಪರಮೇಶ್ವರ್, ಕೆ.ಹೆಚ್‌ ಮುನಿಯಪ್ಪ,‌ ಎಂ.ಬಿ ಪಾಟೀಲ್, ಹೆಚ್.ಕೆ ಪಾಟೀಲ್, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಬಿ.ಕೆ‌ ಹರಿಪ್ರಸಾದ್ ಸೇರಿದಂತೆ ಹಲವರು ಆಗಮಿಸಿದ್ದರು.

ಈ ಸುದ್ದಿಯನ್ನೂ ಓದಿ: Opposition Meet: ದೇಶದಲ್ಲಿ ತ್ರಿಶಂಕು ರಾಜಕಾರಣ ಖತಮ್; JDSಗೆ ದಮ್‌ ಇದ್ದರೆ ಸಭೆಗೆ ಬರುತ್ತದೆ ಎಂದ ಕಾಂಗ್ರೆಸ್‌‌

ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರಿನಲ್ಲಿ ಎನ್‌ಡಿಎಯೇತರ ಪಕ್ಷಗಳ ನಾಯಕರಿಗೆ ಸಿಎಂ ಔತಣಕೂಟ ಆಯೋಜನೆಗೆ ಟೀಕೆ ಉತ್ತರಿಸಿರುವ ಸಿಎಂ ಸಿದ್ದರಾಮಯ್ಯ ಅವರು ಶಿಷ್ಟಾಚಾರ ಪ್ರಕಾರ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಇಂದು ಬೆಂಗಳೂರಿಗೆ ಆಗಮಿಸಿದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರುಗಳನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಲಾಗಿತ್ತು. ಶಿಷ್ಟಾಚಾರದ ಪ್ರಕಾರ ಆ ಎಲ್ಲ ಗಣ್ಯರ ಸ್ವಾಗತಕ್ಕೆ ಮಾತ್ರ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇದರ ಹೊರತಾಗಿ ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಯಾವ ಪಾತ್ರವೂ ಇಲ್ಲ. ಈ ರೀತಿಯ ಶಿಷ್ಟಾಚಾರದ ಪಾಲನೆ ಹಿಂದಿನ ಎಲ್ಲ ಸರ್ಕಾರದ ಕಾಲದಲ್ಲಿಯೂ ನಡೆದಿತ್ತು ಎಂದು ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version