ಹಾಸನ: ಅಪಘಾತವೊಂದರಲ್ಲಿ ಪಿಯು ವಿದ್ಯಾರ್ಥಿಯೊಬ್ಬನ ಮೆದುಳು ನಿಷ್ಕ್ರಿಯಗೊಂಡಿದ್ದು, ಕುಟುಂಬಸ್ಥರು ಮಗನ ಅಗಲಿಕೆಯ ನೋವಿನಲ್ಲೂ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ (Organ Donation) ಮೆರೆದಿದ್ದಾರೆ.
ಇಲ್ಲಿನ ಆಲೂರು ತಾಲೂಕಿನ ಹೊಲ್ಲಹಳ್ಳಿ ಗ್ರಾಮದ ಚಂದ್ರು (17) ಎಂಬಾತ ಜನವರಿ 8ರಂದು ಬೈಕ್‌ನಲ್ಲಿ ತೆರಳುತ್ತಿದ್ದಾಗ, ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ತೀವ್ರ ರಕ್ತಸ್ರಾವಗೊಂಡು ಗಂಭೀರ ಗಾಯಗೊಂಡಿದ್ದರು. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ವೈದ್ಯರು ತಿಳಿಸಿದ್ದರು.
ವೈದ್ಯಕೀಯ ಪರೀಕ್ಷೆ ಬಳಿಕ ಅಂಗಾಂಗ ದಾನ ನಡೆಸುವ ಕುರಿತು ಚಂದ್ರು ತಂದೆ ಸೋಮಶೇಖರ್, ತಾಯಿ ಮೀನಾಕ್ಷಿ ಒಪ್ಪಿಗೆ ಸೂಚಿಸಿದರು. ಶುಕ್ರವಾರ ಬೆಂಗಳೂರಿನಲ್ಲಿ ಅಂಗಾಂಗ ದಾನ ಪ್ರಕ್ರಿಯೆ ಎಲ್ಲವೂ ಮುಗಿದಿದ್ದು, ಶನಿವಾರ ಆಲೂರಿನ ತಾಲೂಕಿನ ಕ್ರೀಡಾಂಗಣ ಮೈದಾನದಲ್ಲಿ ಅಗಲಿದ ವಿದ್ಯಾರ್ಥಿಗೆ ಅಂತಿಮ ನಮನ ಸಲ್ಲಿಸಲಾಗುತ್ತಿದೆ.
ಇದನ್ನೂ ಓದಿ | Panchamasali Reservation | ಪದೇಪದೆ ಗಡುವು ನೀಡುವ ಸ್ವಾಮೀಜಿ, ಯತ್ನಾಳ್ ವಿರುದ್ಧ ಸಿ.ಸಿ ಪಾಟೀಲ್, ನಿರಾಣಿ ಆಕ್ರೋಶ