Site icon Vistara News

Organ donation | ಮೆದುಳು ನಿಷ್ಕ್ರಿಯ: ಯುವಕನ ಅಂಗಾಂಗ ದಾನದಿಂದ 8 ಜನರಿಗೆ ಜೀವ ದಾನ

ವಿಜಯನಗರ: ಇಲ್ಲಿನ ಹೊಸಪೇಟೆ ತಾಲೂಕಿನ ಕಮಲಾಪುರದ ಜೈ ಭೀಮ್ ನಗರದ ಯಲ್ಲಪ್ಪ (31) ಅಂಗಾಂಗ ದಾನ (Organ donation) ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯಲ್ಲಪ್ಪ ಅವರನ್ನು ಕಳೆದ ಸೆಪ್ಟೆಂಬರ್ 25ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಗೆ ಸ್ಪಂದಿಸದ ಯಲ್ಲಪ್ಪ ಅವರ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ವೈದ್ಯರು ಖಚಿತಪಡಿಸಿದರು. ಬಳಿಕ ಅಂಗಾಂಗ ದಾನ ಮಾಡಲು ಯಲ್ಲಪ್ಪನ ಕುಟುಂಬಕ್ಕೆ ವೈದ್ಯರು ಮನವಿ ಮಾಡಿದಾಗ, ಮಗನ ಅಗಲಿಕೆಯ ನೋವಿನಲ್ಲೂ ಅಂಗಾಂಗ ದಾನಕ್ಕೆ ಒಪ್ಪಿದರು.

ಯಲ್ಲಪ್ಪನ ಕುಟುಂಬ ಸದಸ್ಯರು ಒಪ್ಪಿದ ಬಳಿಕ ಸೆಪ್ಟೆಂಬರ್ 27ಕ್ಕೆ ಶಸ್ತ್ರಚಿಕಿತ್ಸೆ ನಡೆಸಿ, ಅಂಗಾಂಗ ತೆಗೆದು, ತುರ್ತು ಅಗತ್ಯವಿರುವವರಿಗೆ ಬೇರೆ ಬೇರೆ ಆಸ್ಪತ್ರೆಗೆ ರವಾನೆ ಮಾಡಿದರು. ಯಲ್ಲಪ್ಪನ ಪಿತ್ತಜನಕಾಂಗ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ನೀಡಿದ್ದರೆ, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೃದಯ, ಧಾರವಾಡದ ಕಿಮ್ಸ್ ಆಸ್ಪತ್ರೆಗೆ ಕಿಡ್ನಿಗಳು, ಕಣ್ಣು ದಾನ ಮಾಡಿದ್ದಾರೆ. ಈ ಮೂಲಕ ಮೃತಪಟ್ಟ ಯಲ್ಲಪ್ಪ ಆರು ಜನರಿಗೆ ಆಸರೆಯಾಗಿದ್ದಾರೆ. ಯಲ್ಲಪ್ಪ ಕುಟುಂಬಸ್ಥರ ಮಾದರಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Organ Donation | ಏರ್‌ಲಿಫ್ಟ್‌ ಮಾಡಿ ಹೃದಯ ರವಾನೆ; 9 ಅಂಗಾಂಗ ದಾನ, ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ

Exit mobile version