Site icon Vistara News

Organ donation | ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ

ಹಾಸನ: ಇಲ್ಲಿನ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯ ನಿವಾಸಿ ನಾರಾಯಣಗೌಡ (17) ಅಂಗಾಂಗ ದಾನ (Organ donation) ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಡಿಸೆಂಬರ್‌ 6ರಂದು ನಾರಾಯಣಗೌಡ ಕಾಲೇಜಿಗೆ ತೆರಳುವಾಗ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ತಲೆಗೆ ಗಂಭೀರ ಗಾಯಗೊಂಡಿದ್ದ ನಾರಾಯಣಗೌಡ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ವೈದ್ಯರು ಖಚಿತಪಡಿಸಿದರು. ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಅಂಗಾಂಗ ದಾನದ ಬಗ್ಗೆ ನಾರಾಯಣಗೌಡ ಪೋಷಕರಿಗೆ ವೈದ್ಯರು ಮನವರಿಕೆ ಮಾಡಿಕೊಟ್ಟಿದ್ದರು. ಒಬ್ಬನೇ ಮಗನನ್ನು ಕಳೆದುಕೊಂಡ ನೋವಿನಲ್ಲೂ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿದ್ದಾರೆ.

ಹೀಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಂಗಾಂಗ ದಾನಕ್ಕೆ ತಯಾರಿ ನಡೆದಿದೆ. ಮನೆಗೆ ಬೆಳಕಾಗಿದ್ದ ಒಬ್ಬನೇ ಮಗನ ಅಗಲಿಕೆಯ ನೋವಿನಲ್ಲೂ ರಮೇಶ್ ಮತ್ತು ರಾಧಾ ದಂಪತಿ ಅಂಗಾಂಗ ದಾನಕ್ಕೆ ಒಪ್ಪಿ ಸಾರ್ಥಕತೆ ಮೆರೆದಿದ್ದಾರೆ. ಭಾನುವಾರ ಮಧ್ಯಾಹ್ನದ ವೇಳೆಗೆ ಅಂಗಾಂಗ ದಾನದ ಪ್ರಕ್ರಿಯೆ ಪೂರೈಸಿ, ಮೃತದೇಹವನ್ನು ಹಸ್ತಾಂತರ ಮಾಡಲಿದ್ದಾರೆ.

ಇದನ್ನೂ ಓದಿ | ಪುರುಷರನ್ನು ರಾತ್ರಿ 8ಗಂಟೆಗೇ ಮನೆಯೊಳಗೆ ಲಾಕ್​ ಮಾಡಿ, ಮಹಿಳೆಯರು ಓಡಾಡಿಕೊಂಡು ಇರಲು ಬಿಡಿ ಎಂದ ಕೇರಳ ಹೈಕೋರ್ಟ್

Exit mobile version