Site icon Vistara News

ಹೆಸರಾಂತ ಸಾವಯವ ಕೃಷಿಕ, ಬಿಜೆಪಿ ಗ್ರಾಪಂ ಸದಸ್ಯ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Bhaskar hegde

ಕಾರ್ಕಳ: ತಾಲೂಕಿನ ಹೆಸರಾಂತ ಸಾವಯವ ಕೃಷಿಕರೊಬ್ಬರು ಬುಧವಾರ ಮುಂಜಾನೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರ್ಕಳದ ದುರ್ಗಾ ಗ್ರಾಮದ ನಿಲೆಬೆಟ್ಟು ಗುತ್ತು ಮನೆಯ ಸಾವಯವ ಕೃಷಿಕ, ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಭಾಸ್ಕರ್ ಹೆಗ್ಡೆ ಗುಂಡು ಹಾರಿಸಿಕೊಂಡವರು.

ಸಾವಯವ ಕೃಷಿ ಮೂಲಕ ಹೆಸರುಗಳಿಸಿದ್ದ ಇವರು, ದುರ್ಗಾ ಪಂಚಾಯತ್ ನ ಸದಸ್ಯರಾಗಿದ್ದು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.

ಪತ್ನಿ ಅಡುಗೆ ಕೋಣೆಯಲ್ಲಿರುವಾಗ ಭಾಸ್ಕರ್ ಹೆಗ್ಡೆ, ತಮ್ಮ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆತ್ಮಹತ್ಯೆ ಮಾಡ್ಕೊಬೇಕು ಅನ್ನೋ ಯೋಚನೆ ಇದ್ದರೆ ಅದಕ್ಕಿಂತ ಮೊದಲು ಒಮ್ಮೆ ಇದನ್ನು ಓದಿ!

Exit mobile version