Site icon Vistara News

Opreation Samudragupta: ಆಪರೇಷನ್‌ ಸಮುದ್ರಗುಪ್ತ; 12 ಸಾವಿರ ಕೋಟಿ ಮೌಲ್ಯದ 2500 ಕೆಜಿ ಡ್ರಗ್ಸ್‌ ವಶ

Opreation Samudragupta

Opreation Samudragupta

ಬೆಂಗಳೂರು: ಭಾರತ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ, ಮಾಲ್ಡಿವ್ಸ್‌ಗೆ ಅಕ್ರಮವಾಗಿ ಮಾದಕ ವಸ್ತುಗಳನ್ನು (Drugs Case) ಸಾಗಾಣೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಭಾರತೀಯ ನೌಕಾಪಡೆ ಹಾಗೂ ಎನ್‌ಸಿಬಿ ಜಂಟಿಯಾಗಿ ಆಪರೇಷನ್‌ ಸಮುದ್ರಗುಪ್ತ (Opreation Samudragupta) ಹೆಸರಲ್ಲಿ ಕಾರ್ಯಾಚರಣೆ ನಡೆಸಿದೆ.

ಪತ್ತೆಯಾದ ಮಾದಕ ವಸ್ತುವಿನ ಚೀಲದಲ್ಲಿ ಪಾಕಿಸ್ತಾನದ ಹೆಸರು

ಮಾದಕ ವಸ್ತುಗಳನ್ನು ಇರಾಕ್‌ನಿಂದ ವಿವಿಧ ದೇಶಗಳಿಗೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ 15 ದಿನಗಳ ಹಿಂದೆಯೇ ಎನ್‌ಸಿಬಿಗೆ ಮಾಹಿತಿ ದೊರೆದಿತ್ತು. ಈ ಮಾಹಿತಿಯನ್ನು ಆಧರಿಸಿ ನೌಕಪಡೆಯೊಂದಿಗೆ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯಲ್ಲಿ 12 ಸಾವಿರ ಕೋಟಿ ರೂ. ಮೌಲ್ಯದ 2,500 ಕೆ.ಜಿ ಮಾದಕ ವಸ್ತುಗಳನ್ನು ಸೀಜ್‌ ಮಾಡಲಾಗಿದೆ. ಇನ್ನು ದೇಶದ ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣವಾಗಿದೆ ಎಂದು ಎನ್‌ಸಿಬಿ ಪ್ರಕಟಿಸಿದೆ.

ಇದನ್ನೂ ಓದಿ: Murder Case: ಹೊಸಕೋಟೆಯಲ್ಲಿ ಎಲೆಕ್ಷನ್‌ ಕಿರಿಕ್‌: ದೊಡ್ಡಪ್ಪನಿಗೆ ಕೊಡಲಿ ಬೀಸಿ ಹತ್ಯೆ

ಪಾಕಿಸ್ತಾನಿ ಪ್ರಜೆ ಬಂಧನ

ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದ್ದು, ಆರೋಪಿಗಳ ಗುರುತನ್ನು ಗೌಪ್ಯವಾಗಿಟ್ಟಿದ್ದು, ತನಿಖೆಯನ್ನು ಮುಂದುವರಿಸಿದೆ. ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ದಕ್ಷಿಣ ಸಮುದ್ರ ಮಾರ್ಗದಲ್ಲಿ ಎನ್‌ಸಿಪಿ ಡ್ರಗ್ಸ್ ವಶಪಡಿಸಿಕೊಂಡ ಮೂರನೇ ಪ್ರಮುಖ ಪ್ರಕರಣವಾಗಿದೆ. ಈವರೆಗೆ ಈ ಕಾರ್ಯಾಚರಣೆಯಲ್ಲಿ ಒಟ್ಟು 3,200 ಕೆ.ಜಿ. ಮೆಟಾಫೆಟಮೈನ್, 500 ಕೆಜಿ ಹೆರಾಯಿನ್ ಮತು 525 ಕಜಿ ಹಶೀಶ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಬಿ ಹೇಳಿದೆ.

Exit mobile version