Site icon Vistara News

ಅಕ್ಷರ ಸಂತನಿಗೆ ಸಂದ ಗೌರವ; ಹರೇಕಳ ಗ್ರಾಮ ಪಂಚಾಯಿತಿ ಕಟ್ಟಡದ ಗೋಡೆಗೆ ಪದ್ಮಶ್ರೀ ಪುರಸ್ಕೃತ ಹಾಜಬ್ಬ ಚಿತ್ರ

manglore hajabba

ಉಳ್ಳಾಲ: ಹರೇಕಳ ಗ್ರಾಮಕ್ಕೆ ನಿರ್ಮಾಣವಾಗುತ್ತಿರುವ ನೂತನ ಪಂಚಾಯಿತಿ ಕಟ್ಟಡದ ಗೋಡೆ ಪೂರ್ತಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಚಿತ್ರವನ್ನು ರಚಿಸುವ ಮೂಲಕ ಗ್ರಾಮದ ಹೆಸರನ್ನು ಜಗತ್ತಿಗೆ ಪಸರಿಸಿದ ಅಕ್ಷರ ಸಂತನಿಗೆ ಗೌರವ ನೀಡಲಾಗಿದೆ.

ಶಾಸಕರ ವಿಶೇಷ ಹಾಗೂ ವಿವಿಧ ಅನುದಾನದಡಿ ಹರೇಕಳ ಗ್ರಾಮಕ್ಕೆ ಬಾವಲಿಗುರಿ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಒಂದೂವರೆ ವರ್ಷದಿಂದ ನಡೆಯುತ್ತಿದ್ದ ಕಾಮಗಾರಿ ಇದೀಗ ಸಮಾರೋಪಾದಿಯಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆ ಹಂತಕ್ಕೆ ತಲುಪಲಿದೆ. ಕಟ್ಟಡದ ಒಂದು ಅಂತಸ್ತಿನ ಗೋಡೆ ಪೂರ್ತಿ ಹರೇಕಳ ಹಾಜಬ್ಬ ಅವರ ಚಿತ್ರವನ್ನು ರಚಿಸಲಾಗಿದೆ.

ಹರೇಕಳ ಗ್ರಾಮದ ಹೆಸರನ್ನು ಇಡೀ ಜಗತ್ತಿಗೆ ಪಸರಿಸಿದ ಕೀರ್ತಿ ಹಾಜಬ್ಬ ಅವರಿಗೆ ಸಲ್ಲುತ್ತದೆ. ಅವರು ಕಿತ್ತಳೆ ಹಣ್ಣು ಮಾರಿ ಕೂಡಿಟ್ಟ ಹಣವನ್ನು ತಂದು ತನ್ನೂರಿನಲ್ಲಿ ಶಾಲೆ ಕಟ್ಟಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ ಶ್ರೇಷ್ಠ ವ್ಯಕ್ತಿ ಹಾಜಬ್ಬ ಆಗಿದ್ದಾರೆ. ಈ ಗ್ರಾಮಕ್ಕೆ ಅವರಿಂದಲೇ ವಿಶೇಷ ಗೌರವ ಬಂದಿದೆ. ದೇಶದ ಅತ್ಯುನ್ನತ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಗ್ರಾಮದಿಂದ ಅವರಿಗೆ ಎಂತಹ ಗೌರವ ಕೊಟ್ಟರೂ ಸಾಲದು. ಆದ್ದರಿಂದ ಗ್ರಾಮದ ಸರ್ವ ಸದಸ್ಯರ ನಿರ್ಣಯದಂತೆ ಕಟ್ಟಡದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ ಅವರ ಚಿತ್ರ ರಚಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ತಿಳಿಸಿದರು.

ಇದನ್ನೂ ಓದಿ | ಕೊರಗಜ್ಜನ ಪವಾಡ | 6 ವರ್ಷದ ಮಗುವಿನ ಸಕ್ಕರೆ ಕಾಯಿಲೆ ಗುಣಪಡಿಸಿದ ಕೊರಗಜ್ಜ; ಹರಕೆ ತೀರಿಸಿದ ಉಕ್ರೇನ್‌ ದಂಪತಿ

Exit mobile version