Site icon Vistara News

Panchamasali Reservation | ಬೊಮ್ಮಾಯಿ ಸರ್ಕಾರ 2A ಮೀಸಲಾತಿ ನೀಡುತ್ತದೆ ಎಂಬ ವಿಶ್ವಾಸವಿದೆ: ವಚನಾನಂದ ಸ್ವಾಮೀಜಿ

Panchamasali Reservation

ಗದಗ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ(Panchamasali Reservation) ನೀಡುವ ವಿಚಾರದಲ್ಲಿ ಕಾನೂನಾತ್ಮಕವಾಗಿ ಸರ್ಕಾರ ಸರಿಯಾದ ಹೆಜ್ಜೆ ಇಡುತ್ತಿದ್ದು, ಮುಂದಿನ ತಿಂಗಳು ಅಧ್ಯಯನ ವರದಿ ಸಲ್ಲಿಕೆಯಾದ ಕೂಡಲೆ ಮೀಸಲಾತಿ ಘೋಷಣೆ ಆಗುತ್ತದೆ ಎಂಬ ವಿಶ್ವಾಸ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಮೇಲೆ ಇದೆ ಎಂದು ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಆಯೋಜಿಸಿದ್ದ ಜನಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರರನ್ನು ಗುಂಡು ಹೊಡೆದು ಸಾಯಿಸಬೇಕು: ಗುಡುಗಿದ ಕೆ.ಎಸ್‌. ಈಶ್ವರಪ್ಪ

28 ವರ್ಷದಿಂದ ನಮ್ಮ ಸಮುದಾಯಕ್ಕೆ ಮೀಸಲಾತಿ ಬೇಕೆಂಬ ಹೋರಾಟ ನಡೆಯುತ್ತಿದೆ. ಸಮುದಾಯದ ಅನೇಕ ಮುಖಂಡರು ಬಿ.ಎಸ್‌. ಯಡಿಯೂರಪ್ಪ ಅವರ ಸರ್ಕಾರದಲ್ಲಿದ್ದುಕೊಂಡು 3B ಮೀಸಲಾತಿ ಕೊಟ್ಟರು. ಅದಕ್ಕಾಗಿ ನಮಗೆ ಇಂದು 2Aಗೆ ಹೋರಾಟ ಮಾಡಲು ಸಾಧ್ಯವಾಗುತ್ತಿದೆ. ಈಗಾಗಲೇ ಸರ್ಕಾರ ನಮಗೆ ಮೀಸಲಾತಿ ನೀಡುವ ಸಲುವಾಗಿಯೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಎಲ್ಲೆಡೆ ಸಮೀಕ್ಷೆ ಮಾಡುತ್ತಿದೆ. ಈಗಾಗಲೆ 22-23 ಜಿಲ್ಲೆ ಸಮೀಕ್ಷೆ ಮುಗಿಸಿದೆ. ಮುಂದಿನ ತಿಂಗಳಲ್ಲಿ ಸರ್ಕಾರಕ್ಕೆ ಅವರು ವರದಿ ನೀಡುವ ಸಾಧ್ಯತೆಯಿದೆ, ಅದರ ಆಧಾರದಲ್ಲಿ ಬೊಮ್ಮಾಯಿ ಸರ್ಕಾರ ಮೀಸಲಾತಿ ನೀಡುತ್ತದೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.

ಮೀಸಲಾತಿ ನೀಡಲು ಸರ್ಕಾರಕ್ಕೆ ತನ್ನದೇ ಮಾನದಂಡವಿದೆ. ಅದರ ಆಧಾರದಲ್ಲಿ ಮೀಸಲಾತಿ ಕೊಟ್ಟರೆ ಮಾತ್ರವೇ ಸಮುದಾಯಕ್ಕೆ ಉಪಯೋಗವಾಗುತ್ತದೆ. ಮಹಾರಾಷ್ಟ್ರದಲ್ಲಿ ಮಾಡಿದಂತೆ ಸರ್ಕಾರ ನಿರ್ಧಾರ ಕೈಗೊಂಡರೆ ನ್ಯಾಯಾಲಯದಲ್ಲಿ ರದ್ದಾಗುವ ಅಪಾಯ ಇರುತ್ತದೆ. ಏಕೆಂದರೆ ಅಲ್ಲಿನ ಸರ್ಕಾರ ಆಯೋಗದ ವರದಿಯನ್ನು ಪಡೆದುಕೊಂಡಿರಲಿಲ್ಲ. ಈಗ ಸರ್ಕಾರ ಅಂತಹ ಕಾರ್ಯವನ್ನು ಮಾಡುತ್ತಿದೆ. ಆಗ ಯಾರೇ ನ್ಯಾಯಾಲಯಕ್ಕೆ ಹೋದರೂ ನಮಗೆ ತೊಂದರೆ ಆಗುವುದಿಲ್ಲ ಎಂದರು.

ಇದನ್ನೂ ಓದಿ | JDS Pancharatna | ಜೆಡಿಎಸ್‌ ಅಧಿಕಾರಕ್ಕೆ ಬಂದರೆ ದಲಿತ ಸಮಾಜಕ್ಕೆ ಉಪ ಮುಖ್ಯಮಂತ್ರಿ ಸ್ಥಾನ: ಎಚ್‌ಡಿಕೆ

Exit mobile version