Site icon Vistara News

Pancharathna Yatra : ಇವರೆಲ್ಲ ದೇವೇ ಗೌಡರ ಧೂಳಿಗೂ ಸಮಾನವಲ್ಲ: ನಳಿನ್‌ ಚಪ್ಪಲಿ ಸ್ಟೋರಿಗೆ ಎಚ್‌ಡಿಕೆ ಗರಂ

hd-kumaraswamy-anger-against-bl-santosh

ವಿಜಯಪುರ: ಇವರೆಲ್ಲ ದೇವೇಗೌಡರ ಧೂಳಿಗೂ ಸಮಾನವಲ್ಲ: ಹೀಗೆಂದು ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮಾಜಿ ಸಿಎಂ, ಎಚ್‌.ಡಿ. ಕುಮಾರಸ್ವಾಮಿ (Pancharathna Yatra) ಅವರು.

ಬೆಂಗಳೂರಿನಲ್ಲಿ ಮಾತನಾಡಿದ ನಳಿನ್‌ ಕುಮಾರ್‌ ಕಟೀಲ್‌ ಅವರು, ಕಾಂಗ್ರೆಸ್‌ನವರಿಗೆ ಜನರು ಚಪ್ಪಲಿ ಎಸೀತಾರೆ, ಅಪ್ಪ ಮಕ್ಕಳು ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡ್ತಾರೆ ಎಂಬರ್ಥದ ಹೇಳಿಕೆಯನ್ನು ನೀಡಿದ್ದರು. ಇದು ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. ವಿಜಯಪುರದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಇದು ಬಿಜೆಪಿ ಸಂಸ್ಕೃತಿನಾ? ಎಂದು ಪ್ರಶ್ನಿಸಿದರು. ʻʻದೇವೇಗೌಡರು ಏನು ಅಂತ ಮೋದಿಯನ್ನು ಕೇಳಿʼʼ ಎಂದು ಹೇಳಿದರು ಕುಮಾರಸ್ವಾಮಿ.

ʻʻನಮ್ಮ ಕುಟುಂಬದ ಬಗ್ಗೆ ಚರ್ಚೆ ಮಾಡ್ತೀರಾ.. ನಮ್ಮ ಕುಟುಂಬ ಗೌರವದಿಂದ ಬದುಕುತ್ತಿದ್ದೇವೆ.. ನಮಗೆ ಅಧಿಕಾರ ಮುಖ್ಯವಲ್ಲ. ಅಧಿಕಾರಕ್ಕಾಗಿ ಯಾರ ಮನೆಗೆ ಹೋಗಿ ಕಾಲು ಹಿಡಿತೀರಿ‌ ಅಂತ ನೋಡ್ಕೊಳ್ಳಿ. ಯತ್ನಾಳ್, ಬಾಗಲಕೋಟೆಯ ಸಚಿವರು ಪರಸ್ಪರ ಮಾತಾಡಿದ ಭಾಷೆ ಚಪ್ಪಲಿಗಿಂತ ಕಡೆಯಾಗಿದೆ ಎಂಬುದನ್ನು ಗಮನಿಸಿʼʼ ಎಂದು ಹೇಳಿದರು.

ನಳಿನ್‌ ಕುಮಾರ್‌ ಹೇಳಿದ್ದೇನು?
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯೀಜಿಸಿದ್ದ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಕಟೀಲ್‌, ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ಟೀಕಿಸುತ್ತಾ ಅಪ್ಪ ಮಕ್ಕಳ ಪಾರ್ಟಿಯಲ್ಲಿ ಅಣ್ಣ ದೊಡ್ಡವನೋ ತಮ್ಮ ದೊಡ್ಡವನೋ ಎಂದು ಕಿತ್ತಾಟ ಶುರುವಾಗಿದೆ. ಇನ್ನೊಂದು ರಾಷ್ಟ್ರೀಯ ಪಾರ್ಟಿಯಲ್ಲಿ ಮುಖ್ಯಮಂತ್ರಿ ಯಾರೆಂಬ ಕಿತ್ತಾಟ ಆರಂಭವಾಗಿದೆ. ಈ ಚುನಾವಣೆಯಲ್ಲಿ ಬೇರೆಬೇರೆ ಪಾರ್ಟಿಯವರು ಶರ್ಟ್ ಹೊಲಿಸಿ ಕಾಯುತ್ತಿದ್ದಾರೆ. ಕೆಲವರು ಕೋಟ್ ಹೊಲಿಸಲು ಅಂಗಡಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಹೊಸ ಪ್ಯಾಂಟ್ ಶರ್ಟ್ ಖರೀದಿಸಿದ್ದಾರೆ. ಇನ್ನೂ ಕೆಲವರು ಅವರೊಳಗೇ ಪ್ಯಾಂಟ್, ಶರ್ಟ್ ಹರಿಯಲು ಶುರು ಮಾಡಿದ್ದಾರೆ. ನೋಡಿ 3 ಪಾರ್ಟಿಯಲ್ಲಿ ಮೂರು ವಿಭಿನ್ನತೆ. ರಾಷ್ಟ್ರೀಯ ಪಾರ್ಟಿ ಇನ್ನೊಂದಿದೆ. ಅವರ ಸಭೆ ಆದಾಗ ಚಪ್ಪಲಿಗಳು ಕೈಯಲ್ಲಿ ಇರುತ್ತದೆ ಎಂದಿದ್ದರು.

ಇನ್ನೊಂದು ಕುಟುಂಬದ ಪಕ್ಷವಿದೆ. ಅಪ್ಪ ಮಕ್ಕಳ ಪಾರ್ಟಿ ಅದು. ಅವರ ಪಾರ್ಟಿಯ ಮೀಟಿಂಗ್ ಆದಾಗ ಒಬ್ಬನ ಚಪ್ಪಲಿ ಇನ್ನೊಬ್ಬನ ದೇಹದೊಳಗೆ ಇರುತ್ತದೆ. ಬಿಜೆಪಿಯಲ್ಲಿ ಮಾತ್ರ ಚಪ್ಪಲಿ ನಮ್ಮಲ್ಲೇ ಇರುತ್ತದೆ. ಶಾಂತವಾಗಿ ಸಭೆ ನಡೆಯುತ್ತದೆ ಎಂದಿದ್ದರು.

ಇದನ್ನೂ ಓದಿ | BJP Karnataka : ಕಾಂಗ್ರೆಸ್‌-ಜೆಡಿಎಸ್‌ ಸಭೆ ಮಾಡಿದರೆ ಚಪ್ಪಲಿಗಳು ಕೈಯಲ್ಲಿರುತ್ತವೆ: ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ

Exit mobile version