Site icon Vistara News

Parliament Session: ಡಿ.ಕೆ ಸುರೇಶ್ ಸೇರಿ ಮತ್ತೆ ಮೂವರು ಸಂಸದರು ಸಸ್ಪೆಂಡ್

Parliament Session, Including D K Suresh three MP suspended from Lok Sabha

ನವದೆಹಲಿ: ಲೋಕಸಭೆಯಿಂದ (Lok Sabha) ಸಂಸದರನ್ನು ಅಮಾನತು(MP Suspended) ಮಾಡುವ ಪ್ರವೃತ್ತಿಯು ಗುರುವಾರವೂ ಮುಂದುವರಿದಿದೆ. ಕರ್ನಾಟಕದ (Karnataka MP) ಕಾಂಗ್ರೆಸ್‌ನ ಏಕೈಕ ಸಂಸದ ಡಿ.ಕೆ ಸುರೇಶ್ (DK Suresh) ಸೇರಿದಂತೆ ಮೂವರು ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಬುಧವಾರ ಕೂಡ ಇಬ್ಬರು ಸಂಸದರನ್ನು ಅಮಾನತು ಮಾಡಲಾಗಿದೆ. ಇದರೊಂದಿಗೆ ಒಟ್ಟಾರೆ ಅಮಾನತು ಗೊಂಡ ಸಂಸದರ ಸಂಖ್ಯೆ 146 ದಾಟಿದೆ(Parliament Session).

ಬುಧವಾರ ಕೂಡ ಲೋಕಸಭೆಯಿಂದ ಥಾಮಸ್ ಚಾಜಿಕಾಡನ್, ಕೆ ಸಿ ಮಣಿ ಮತ್ತು ಎ ಎಂ ಆರಿಫ್ ಅವರು ಸಸ್ಪೆಂಡ್ ಆದ ಸಂಸದರು. ಸಂಸತ್ತಿನ ಉಳಿದ ಅವಧಿಗೆ ಅವರನ್ನು ಅಮಾನತು ಮಾಡಲಾಗಿದೆ. ಸಂಸತ್ತಿನಲ್ಲಿ ನಡೆಯುತ್ತಿರುವ ಅಡೆತಡೆಗಳು ಮತ್ತು ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸ್ಪೀಕರ್ ಈ ನಿರ್ಧಾರ ಕೈಗೊಂಡಿದ್ದಾರೆ. ಅಧಿವೇಶನದ ಸುಗಮ ಕಾರ್ಯನಿರ್ವಹಣೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಅಮಾನತುಗೊಂಡ ಸಂಸದರುಚಳಿಗಾಲದ ಅಧಿವೇಶನದ ಉಳಿದ ಅವಧಿಯ ಕಲಾಪದಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ

ಇದಕ್ಕೂ49 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಸೋಮವಾರ ಉಭಯ ಸದನಗಳಿಂದ 78 ಪ್ರತಿಪಕ್ಷ ಸಂಸದರನ್ನು (ಲೋಕಸಭೆಯಿಂದ 33 ಮತ್ತು ರಾಜ್ಯಸಭೆಯಿಂದ 45) ಸಸ್ಪೆಂಡ್ ಮಾಡಲಾಗಿತ್ತು.

ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡುವಂತೆ ಒತ್ತಾಯಿಸಿ ಸದನದೊಳಗೆ ಸಂಸದರು ಪ್ಲೇಕಾರ್ಡ್‌ಗಳನ್ನು ತಂದರು ಮತ್ತು ಘೋಷಣೆಗಳನ್ನು ಕೂಗಿದರು. ಈ ಅಶಿಸ್ತಿನ ವರ್ತನೆ ಮತ್ತು ಕಲಾಪಕ್ಕೆ ಅಡ್ಡಿಪಡಿಸಿದ ಸಂಸದರನ್ನು ಅಮಾನತುಗೊಳಿಸಲಾಯಿತು. ಈ ಅಮಾನತುಗಳನ್ನು ವಿರೋಧಿಸಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಯನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಿವೆ.

ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯದಲ್ಲಿ ಪ್ರತಿಪಕ್ಷದ ಸದಸ್ಯರು ಸದನದಲ್ಲಿ ಗದ್ದಲವನ್ನು ಮುಂದುವರೆಸಿದ ಪರಿಣಾಮ ರಾಜ್ಯಸಭೆಯನ್ನು ಮಂಗಳವಾರದ ಊಟಕ್ಕೂ ಮೊದಲೆ ಎರಡು ಬಾರಿ ಮುಂದೂಡಲಾಯಿತು. ಸ್ಪೀಕರ್, ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರ ವರ್ತನೆಯನ್ನು ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಮಿಮಿಕ್ರಿ ಮಾಡಿದರು. ಇದನ್ನು ರಾಹುಲ್‌ ಗಾಂಧಿ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಳ್ಳುತ್ತಿದ್ದರು. ಇದನ್ನು ಪ್ರಸ್ತಾಪಿಸಿದ ಸಭಾಪತಿ, ಇದು ನಾಚಿಕೆಗೇಡಿನ ಸಂಗತಿಯಾಗಿದೆ, ಯಾವುದಕ್ಕೂ ಮಿತಿ ಇರಬೇಕು ಎಂದು ಟೀಕಿಸಿದ್ದರು.

ಈ ಸುದ್ದಿಯನ್ನೂ ಓದಿ: Congress Protest: ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ; ಸಂಸದರ ಅಮಾನತು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

Exit mobile version