ದೇವನಹಳ್ಳಿ: ಪರ್ಸ್ ಹುಡುಕಲು ಸಹಕರಿಸಲಿಲ್ಲ ಎಂದು ಪ್ರಯಾಣಿಕನೊಬ್ಬ ಏರ್‌ಪೋರ್ಟ್ ಕಾಲ್ ಸೆಂಟರ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿ, ಜೈಲುಪಾಲಾಗಿರುವುದು ನಡೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ.26ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಶ್ರೇಯಸ್ ಚಾರ್ಮಿಯಾ ಬಂಧಿತ ಆರೋಪಿ. ಈತನ ಪರ್ಸ್ ಹುಡುಕಲು ಸಿಬ್ಬಂದಿ ಸಹಕರಿಸಲಿಲ್ಲ ಎಂದು ಕೋಪಗೊಂಡು ವಿಮಾನಯಾನ ಕಂಪನಿಯ ಕಾಲ್ ಸೆಂಟರ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾನೆ. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ನಂತರ SG 8536 ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Mysterious Death: 41 ಕೋಟಿಯ ಬಂಗಲೆಯಲ್ಲಿ ದಂಪತಿ, ಮಗಳ ನಿಗೂಢ ಸಾವು
ಹೊಸ ವರ್ಷದ ಪಾರ್ಟಿಗೆ ರೈಲಿನಲ್ಲಿ ಬಂತು ಗಾಂಜಾ!
ಬೆಂಗಳೂರು: ಹೊಸ ವರ್ಷಕ್ಕೆ (New Year 2024) ದಿನಗಣನೆ (Drugs Siezed) ಶುರುವಾಗಿದೆ. ಸಂಭ್ರಮದ ಕಾವು ಜೋರಾಗಿದ್ದು, ಈ ಸಮಯದಲ್ಲಿ ಮಾದಕ ವಸ್ತುಗಳಿಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. ಆದರೆ ಮಾದಕ ವಸ್ತುಗಳನ್ನು ಸರಬರಾಜು ಮಾಡುವುದು ಪೆಡ್ಲರ್‌ಗಳಿಗೆ ದೊಡ್ಡ ತಲೆನೋವಾಗಿದೆ. ಹೆಜ್ಜೆ ಹೆಜ್ಜೆಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಪೆಡ್ಲರ್‌ಗಳು ಮಾದಕ ವಸ್ತುಗಳ ಸರಬರಾಜು ಮಾಡಲು ಆಗುತ್ತಿಲ್ಲ. ಸದ್ಯ ಪೊಲೀಸರ ಕಣ್ತಪ್ಪಿಸಿ ಗಾಂಜಾ ಸಾಗಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿಗರಿಗೆ ನಶೆ ಏರಿಸಲು ರೈಲುಗಳಲ್ಲಿ ಡ್ರಗ್ ಸಪ್ಲೈ ಮಾಡಲಾಗುತ್ತಿತ್ತು. ಆದರೆ ಖಚಿತ ಮಾಹಿತಿ ಮೇರೆಗೆ ರೈಲ್ವೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ ಹತ್ತು ದಿನಗಳಿಂದ ಕಾರ್ಯಾಚರಣೆ ನಡೆಸಿರುವ ರೈಲ್ವೆ ಪೊಲೀಸರು ಐದು ಪ್ರಕರಣಗಳನ್ನು ಭೇದಿಸಿ ಒಟ್ಟು 7 ಮಂದಿಯನ್ನು ಬಂಧಿಸಿದ್ದಾರೆ.
ಒಡಿಸ್ಸಾ ಮೂಲದ ನಿತ್ಯಾನಾನದ್ ದಾಸ್, ನಿಕೇಶ್ ರಾಣಾ, ಜಲಂಧರ್ ಕನ್ಹರ್, ಬೈಕುಂಟಾ ಕನ್ಹರ್, ಸಾಗರ್ ಕನ್ಹರ್, ತ್ರಿಪುರಾ ಮೂಲದ ರಾಜೇಶ್ ದಾಸ್ ಹಾಗೂ ಬಿಹಾರ ಮೂಲದ ಅಮರ್‌ಜಿತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ | ಅಸ್ಥಿಪಂಜರ ಪತ್ತೆ ಕೇಸ್; ಪಾಳು ಬಿದ್ದ ಮನೆಯಲ್ಲಿ ಮೊದಲು ಬುರುಡೆ ನೋಡಿದ್ದೇ ವಿದ್ಯಾರ್ಥಿಗಳು
ಈ ಆರೋಪಿಗಳು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಗಾಂಜಾವನ್ನು ರೈಲುಗಳ ಮೂಲಕ ಸಾಗಾಟ ಮಾಡುತ್ತಿದ್ದರು. ಮುಖ್ಯವಾಗಿ ಒಡಿಸ್ಸಾ, ಬಿಹಾರ, ಪಶ್ಚಿಮ ಬಂಗಾಳದಿಂದ ಬರುವ ರೈಲುಗಳ ಮೂಲಕ ಗಾಂಜಾ ಹಾಗೂ ವಿವಿಧ ಮಾದರಿಯ ಡ್ರಗ್ಸ್‌ಗಳನ್ನು ಸರಬರಾಜು ಮಾಡುತ್ತಿದ್ದರು. ಹೀಗೆ ನಗರಕ್ಕೆ ಬಂದ ಡ್ರಗ್ಸ್‌ಗಳನ್ನು ನಿತ್ಯಾನಂದ ಮತ್ತು ರಾಜೇಶ್ ಎಂಬುವವರು ಸ್ವಿಗ್ಗಿ, ಜೋಮೋಟೊ ಮೂಲಕ ಗ್ರಾಹಕರಿಗೆ ಸಪ್ಲೇ ಮಾಡುತ್ತಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ