Site icon Vistara News

Pratap Simha: ಮುಸ್ಲಿಮರಲ್ಲೂ ದೇಶಪ್ರೇಮಿಗಳಿದ್ದಾರೆ; ಅವರಿಗೆ ಕಾಂಗ್ರೆಸ್‌ ಗನ್‌ ಕೊಟ್ಟರೆ, ಮೋದಿ ಧ್ವಜ ಕೊಟ್ಟರು: ಪ್ರತಾಪ್‌ ಸಿಂಹ

patriots even among Muslims Congress gave them gun and Modi gave them flag says Pratap Simha

ಬೆಳಗಾವಿ: ನಮ್ಮ ದೇಶದಲ್ಲಿ ಮುಸ್ಲಿಂ ಸಮುದಾಯದವರಲ್ಲೂ ದೇಶಪ್ರೇಮಿಗಳು ಇದ್ದಾರೆ. ಕಾಂಗ್ರೆಸ್‌ನವರು ಅವರ ಕೈಗೆ ಗನ್‌ ಕೊಟ್ಟರು. ಆದರೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಅವರ ಕೈಗೆ ಧ್ವಜ ಕೊಟ್ಟರು ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ಹೇಳಿದರು.

ಗೋಕಾಕ್‌ನಲ್ಲಿ ಶುಕ್ರವಾರ (ಮಾ. 24) ಏರ್ಪಡಿಸಿದ್ದ ಬಿಜೆಪಿ ಯುವ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆ ಮಾಡಿದರು. ಆದರೆ, ಯಾವುದೇ ಜೋಡೋ ಆಗಲಿಲ್ಲ. ಅವರು ಕಾಶ್ಮೀರಕ್ಕೆ ಹೋದಾಗ ತಂಗಿ ಪ್ರಿಯಾಂಕಾ ವಾದ್ರಾ ಜತೆ ಬರಫ್ ಮೇಲೆ ಆಟ ಆಡಿದರು. ಇದು ಹೇಗೆ ಸಾಧ್ಯವಾಯಿತು? ಈ ಮೊದಲು ಅಲ್ಲಿ ಆ ಪರಿಸ್ಥಿತಿ ಇತ್ತೇ? ಎಂದು ಪ್ರಶ್ನೆ ಮಾಡಿದರು.

ಆದರೆ, ಈಗ ಕಾಶ್ಮೀರದಲ್ಲಿ ಪರಿಸ್ಥಿತಿ ಬದಲಾಗಿದೆ. ಆಗ ಕಾಂಗ್ರೆಸ್‌ನವರು ಗನ್‌ ಕೊಟ್ಟಿದ್ದರೆ, ಪ್ರಧಾನಿ ಮೋದಿ ಅವರು ದೇಶದ ಧ್ವಜ ಕೊಟ್ಟಿದ್ದಾರೆ. ಈ ಮೂಲಕ ಅಲ್ಲಿ ನಾವು ಬದಲಾವಣೆಯನ್ನು ಕಾಣಬಹುದಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Rahul disqualification : ರಾಹುಲ್‌ ಅನರ್ಹತೆ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್‌ ಕರೆ, ಹೃದಯದಿಂದ ಕಿತ್ತು ಹಾಕಲಾರಿರಿ ಎಂದ ಡಿಕೆಶಿ

ಗೋಕಾಕದಲ್ಲಿ ಹುಲಿಯಂತೆ ಕಂಟ್ರೋಲ್‌ ಹೊಂದಿರುವ ಜಾರಕಿಹೊಳಿ

ದಕ್ಷಿಣ ಕರ್ನಾಟಕದವರು ಉತ್ತರ ಕರ್ನಾಟಕವನ್ನು ಹಿಂದುಳಿದ ಪ್ರದೇಶ ಎಂದು ಹೇಳುತ್ತಾರೆ. ಆದರೆ, ಗೋಕಾಕ್ ಕ್ಷೇತ್ರವನ್ನು ನೋಡಿದರೆ ಅಭಿವೃದ್ಧಿಯು ಕಾಣಿಸುತ್ತದೆ. ನಾನು ಬರಬೇಕಾದರೆ ಇಲ್ಲಿ ಹಾಕಲಾಗಿರುವ ಫ್ಲೆಕ್ಸ್‌ಗಳನ್ನು ಗಮನಿಸಿದೆ. ಅವುಗಳಲ್ಲಿ ಜಾರಕಿಹೊಳಿ ಫೋಟೊ ಬಿಟ್ಟರೆ ಬೇರೆ ಯಾರದ್ದೂ ಕಾಣಲಿಲ್ಲ. ಹುಲಿಯಂತೆ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಕಂಟ್ರೋಲ್ ಹೊಂದಿದ್ದಾರೆ. ಜನರ ಪ್ರೀತಿ, ವಿಶ್ವಾಸ ಗೆದ್ದಿರುವ ನಿಮಗೆ ಅಭಿನಂದನೆ ಎಂದು ಪ್ರತಾಪ್‌ ಸಿಂಹ ಹೇಳಿದರು.

ಮತ್ತೊಮ್ಮೆ ರಮೇಶ್‌ ಗೆದ್ದು ಮಂತ್ರಿಯಾಗಲಿ

2023ರಲ್ಲಿ ರಮೇಶ್ ಜಾರಕಿಹೊಳಿ ಗೆದ್ದು ಮಂತ್ರಿಯಾಗಿ ಕ್ಷೇತ್ರಕ್ಕೆ ಬರಬೇಕು. 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ರಮೇಶ್ ಜಾರಕಿಹೊಳಿ ಗೆಲ್ಲಬೇಕು. ಅವರು ಇಡೀ ಜಿಲ್ಲೆಯಲ್ಲಿ ಪ್ರಭಾವ ಹೊಂದಿದ್ದಾರೆ. ಕ್ವಾಟರ್, ಬಿರಿಯಾನಿ ಕೊಡಿಸಿ ನಾನೇ ಸಿಎಂ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಚಾರ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: Meena Sagar: ಎರಡನೇ ಮದುವೆ ವಂದತಿಗಳಿಗೆ ಕೊನೆಗೂ ಸ್ಪಷ್ಟನೆ ಕೊಟ್ಟ ನಟಿ ಮೀನಾ ಸಾಗರ್

ಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯ ಸಿಕ್ಕಿಲ್ಲ

ಸಿದ್ದರಾಮಯ್ಯ ಅವರು ಜನರಿಗೆ ಅನೇಕ ಭಾಗ್ಯ ಕೊಟ್ಟೆ ಎನ್ನುತ್ತಾರೆ. ಆದರೆ, ಅವರಿಗೆ ಕ್ಷೇತ್ರ ಭಾಗ್ಯ ಸಿಗುತ್ತಿಲ್ಲ. ಚುನಾವಣೆಗೆ ನಿಲ್ಲಲು ಒಂದು ಕ್ಷೇತ್ರ ಇಲ್ಲ. ವರುಣಾದಲ್ಲಿ ಸ್ಪರ್ಧೆಗೆ ಹೆಂಡತಿ ಮಕ್ಕಳನ್ನು ಕೇಳುವ ಸ್ಥಿತಿ ಬಂದಿದೆ. ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಚಿಂತೆ ಎದುರಾಗಿದೆ. ವರುಣಕ್ಕೆ ಬರಲು ಮನೆಯಲ್ಲಿ ವಿರೋಧವಿದೆ. ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಗ ನಿಖಿಲ್‌ ಚಿಂತೆಯಾಗಿದೆ. ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ಪತ್ನಿ ಭವಾನಿ ಚಿಂತೆಯಾಗಿದೆ. ಇಂತಹ ನಾಯಕರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಹೆಂಡತಿ ಮಕ್ಕಳ ಬಗ್ಗೆ ವಿಚಾರ ಮಾಡುವ ರಾಜಕಾರಣಿಗಳಿಗೆ ರಿಟೈರ್‌ಮೆಂಟ್ ಕೊಡಿ ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತು ಸೌಮ್ಯ. ವಿರೋಧ ಪಕ್ಷದವರು ಮಾತು ಎತ್ತಿದರೆ ಧಮ್ ಬಗ್ಗೆ ಮಾತನಾಡುತ್ತಾರೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಳಸಾ ಬಂಡೂರಿ ಯೋಜನೆ ಸಾಕಾರಗೊಳ್ಳುತ್ತಿದೆ. ಧಮ್ ಎಂದರೆ ಅದು. ಸಮಾಜ ಕಟ್ಟುವ ರೈತರಿಗೆ ಭವಿಷ್ಯ ಕಲ್ಪಿಸುತ್ತಿದ್ದಾರಲ್ಲವೇ ಅದು ಧಮ್. ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡುತ್ತಿದ್ದಾರಲ್ಲವಾ ಅದು ಧಮ್ ಎಂದು ಪ್ರತಾಪ್‌ ಸಿಂಹ ಹೇಳಿದರು.

ಜಲಜೀವನ್ ಮಿಷನ್ ಆಗಿರಬಹುದು, ಬೇರೆ ಯೋಜನೆ ಇರಬಹುದು ನಾವು ತಾರತಮ್ಯ ಮಾಡುತ್ತಿಲ್ಲ. ಕೇವಲ ಹಿಂದುಗಳು ಇರುವ ಬೀದಿಗಳಲ್ಲಿ ಮಾತ್ರ ಅಭಿವೃದ್ಧಿ ಮಾಡುತ್ತಿಲ್ಲ. ಮುಸಲ್ಮಾನರು ವಾಸವಿರುವ ಬೀದಿಗಳಲ್ಲಿಯೂ ಅಭಿವೃದ್ಧಿ ಮಾಡಲಾಗುತ್ತಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರವಿದ್ದು, ಜನಪರ ಆಡಳಿತವನ್ನು ನೀಡುತ್ತಿದ್ದಾರೆ. ಇಂತಹ ಡಬಲ್ ಇಂಜಿನ್ ಸರ್ಕಾರ ಮುಂದಿನ ದಿನಗಳಲ್ಲಿ ಬರಬೇಕು ಎಂದು ಹೇಳಿದರು.

ಇದನ್ನೂ ಓದಿ: Rahul Gandhi Disqualified: ರಾಹುಲ್‌ ಗಾಂಧಿ ಅನರ್ಹಕ್ಕೆ ಕನ್ನಡಿಗರೊಬ್ಬರೂ ಕಾರಣ, ಯಾರಿವರು?

ಅವಹೇಳನಕಾರಿ ಮಾತಿಗೆ ಕಡಿವಾಣಕ್ಕೆ ರಾಹುಲ್‌ ಉದಾಹರಣೆ

ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ ವಿಚಾರದ ಬಗ್ಗೆ ಮಾತನಾಡಿದ ಪ್ರತಾಪ್‌ ಸಿಂಹ, ಇನ್ನು ಮುಂದೆ ರಾಜಕೀಯ ಎದುರಾಳಿಗಳ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವಂತಿಲ್ಲ. ಅವಹೇಳನಕಾರಿಯಾಗಿ ಮಾತನಾಡಿದರೆ ಏನಾಗುತ್ತದೆ ಎಂಬುದಕ್ಕೆ ಈಗ ರಾಹುಲ್‌ ಗಾಂಧಿ ಸ್ಪಷ್ಟ ಉದಾಹರಣೆಯಾಗಿದ್ದಾರೆ. ಇಂತಹ ಘಟನೆಗೆ ಕಡಿವಾಣ ಹಾಕುವಲ್ಲಿ ಸ್ಪಷ್ಟ ಸಂದೇಶ ರವಾನೆಯಾಗಿದೆ. ರಾಜಕೀಯ ಏನೇ ಇರಲಿ, ತಂದೆ-ತಾಯಿ ಬಗ್ಗೆ ಮಾತನಾಡುವಂತಹ, ಅವಹೇಳನಕಾರಿಯಾಗಿ ಮಾತನಾಡುವಂತಹ ಕೆಲಸಕ್ಕೆ ಕಡಿವಾಣ ಬೀಳಬೇಕು. ನಾನು ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ವ್ಯಕ್ತಿಗತವಾಗಿ ನೋಡುತ್ತಿಲ್ಲ. ಈ ರೀತಿ ಮಾಡುವ ಎಲ್ಲರಿಗೂ ಎಚ್ಚರಿಕೆ ಗಂಟೆ ಎಂದು ಪ್ರತಾಪ್ ಸಿಂಹ ಹೇಳಿದರು.

Exit mobile version