Site icon Vistara News

Karnataka election 2023: ಟಿಬಿ ಡ್ಯಾಂ ನಿರ್ಮಾಣದ ಶ್ರಮಿಕರಿಗೆ ಪಟ್ಟಾ: ಕೇಂದ್ರ ಸಚಿವ ಶೇಖಾವತ್

Karnataka election 2023 Patta will be given to TB dam construction workers says Union Irrigation Minister Gajendra Singh Shekhawat

ಹೊಸಪೇಟೆ: ಕಳೆದ 60 – 70 ವರ್ಷಗಳ ಹಿಂದೆ ಸ್ಥಳೀಯ ತುಂಗಭದ್ರಾ ಜಲಾಶಯ (Tungabhadra dam) ನಿರ್ಮಾಣಕ್ಕೆ ಶ್ರಮಿಸಿ ಬೋಡ್೯ ವ್ಯಾಪ್ತಿಯಲ್ಲಿ ನೆಲೆಸಿರುವ ಶ್ರಮಿಕ ಕುಟುಂಬಗಳಿಗೆ ಪಟ್ಟಾ ನೀಡುವ ಮೂಲಕ ಅವರ ಅಂದಿನ ಶ್ರಮವನ್ನು ಗೌರವಿಸುತ್ತೇವೆ ಎಂದು ಕೇಂದ್ರ ನೀರಾವರಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಹೇಳಿದರು.

ನಗರದ ಟಿಬಿ ಡ್ಯಾಂ ರಸ್ತೆ ಬದಿಯ ಹೈಸ್ಕೂಲಿನ ಮೈದಾನದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಮತದಾರರ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಚಿವ ಆನಂದ ಸಿಂಗ್ ಅವರು ಹಿಡಿದ ಕೆಲಸ ಬಿಡದ ಛಲಗಾರ ಎನಿಸುತ್ತದೆ. ಇಲ್ಲಿನ ಜನರ ಈ ಸಮಸ್ಯೆಗಾಗಿ ಮೊದಲು ನನ್ನನ್ನು ಭೇಟಿಯಾದಾಗ ರಾತ್ರಿ ಒಂದು ಗಂಟೆ, ತದ ನಂತರದಲ್ಲಿ ಜಿಲ್ಲಾಧಿಕಾರಿ ಹಾಗೂ ಬೋಡ್೯ ನ ಅಧಿಕಾರಿಗಳೊಂದಿಗೆ ದೆಹಲಿಗೆ ಬಂದರು. ನಾನು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಬೋಡ್೯ ವ್ಯಾಪಿ ಪ್ರದೇಶದಲ್ಲಿ ವಾಸಿಸಿರುವ ಕುಟುಂಬಗಳಿಗೆ ಪಟ್ಟಾ ಕೊಡುವುದು ನ್ಯಾಯವೆನಿಸಿತು. ಅಲ್ಲದೇ, ಈ ವಿಷಯ ಕುರಿತು ಪದೇ ಪದೆ ನನ್ನ ಬಳಿಗೆ ಬಂದು ಒತ್ತಾಯಿಸುತಿದ್ದ ಸಚಿವ ಆನಂದ್ ಸಿಂಗ್ ರ ಜನಪರ ಕಾಳಜಿ ನನಗೆ ಮೆಚ್ಚುಗೆಯಾಯಿತು. ಇದಕ್ಕಾಗಿ ಇಲ್ಲಿಗೆ ಬಂದು ಈ ಸಂತಸದ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ ಎಂದರು.

ಇದನ್ನೂ ಓದಿ: IPL 2023: ಬ್ಯಾಟಲ್‌ ಆಫ್ ಬ್ರದರ್ಸ್ ಚಾಲೆಂಜ್​ ಗೆದ್ದ ಹಾರ್ದಿಕ್​ ಪಾಂಡ್ಯ; ಪ್ಲೇ ಆಫ್​ ಸನಿಹಕ್ಕೆ ಗುಜರಾತ್​

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸದಾ ಬಡವರು, ಶ್ರಮಿಕರ ಪರವಾಗಿದೆ. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರವಿದ್ದರೆ ಅಭಿವೃದ್ಧಿ ಕಾರ್ಯಗಳು ಸುಗಮವಾಗುತ್ತವೆ ಎಂದರು. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ಬಳಿಕ ಇಲ್ಲಿನ ನೆಲಕ್ಕೆ, ಈ ದೇಶಕ್ಕೆ, ಈ ದೇಶದ ಜನತೆಗೆ ವಿಶ್ವಾದ್ಯಂತ ಮಾನ್ಯತೆ ಸಿಗುತ್ತಿದೆ ಎಂದರು.

ಸಚಿವ ಆನಂದ್ ಸಿಂಗ್ ಮಾತನಾಡಿ, ನಾನು 2008ರಲ್ಲಿ ಟಿ ಡ್ಯಾಂ ಬೋಡ್೯ ವ್ಯಾಪ್ತಿಯ ನಿವಾಸಿಗಳಿಗೆ ಕೊಟ್ಟ ಮಾತನ್ನು ಈ ಮೂಲಕ ಉಳಿಸಿಕೊಂಡಿರುವೆ. ತಾವು ಸಿದ್ದಾರ್ಥಸಿಂಗ್ ಗೆ ಬೆಂಬಲಿಸಿ ಇನ್ನಷ್ಟು ಅಭಿವೃದ್ಧಿಗೆ ಸಹಕರಿಸಿ ಎಂದರು.

ಈ ವೇಳೆ ಅಭ್ಯರ್ಥಿ ಸಿದ್ಧಾರ್ಥಸಿಂಗ್, ತೆಲಂಗಾಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಧವಿ ಕೊಲ್ಲಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ಕಾಸಟಿ ಉಮಾಪತಿ, ಮುಖಂಡರಾದ ಗೋಪಾಲಕೃಷ್ಣ, ಬುಜ್ಜಿ, ನಗರಸಭೆ ಸದಸ್ಯರಾದ ನಿಂಗಪ್ಪ, ಸತೀಶ್, ಸ್ಟೈಲ್ ರಾಜಾ ಇತರರಿದ್ದರು.

ಇದನ್ನೂ ಓದಿ: Maoists killed: ಪೊಲೀಸರ ಮೇಲೆ ದಾಳಿಗೆ ಹೊಂಚು ಹಾಕಿದ್ದ ಇಬ್ಬರು ನಕ್ಸಲರ ಹತ್ಯೆ

ಆತಂಕ ಬೇಡ, ಪಟ್ಟಾ ಕೊಡುವುದು ನಿಶ್ಚಿತ

ತುಂಗಭದ್ರಾ ಬೋಡ್೯ ವ್ಯಾಪ್ತಿಯಲ್ಲಿ ಆರೇಳು ದಶಗಳಿಂದ ಆಶ್ರಯ ಪಡೆದ ಯಾರೂ ಆತಂಕ ಪಡುವ ಅಗತ್ಯವಿಲ್ಲ. ವಿರೋಧ ಪಕ್ಷದವರ ಸುಳ್ಳು ಮಾತುಗಳಿಗೆ ಕಿವಿಕೊಡಬೇಡಿ. ಖುದ್ದು ಕೇಂದ್ರ ನೀರಾವರಿ ಸಚಿವರನ್ನೇ ಕರೆಯಿಸಿ ಮಾತನಾಡಿಸುತ್ತಿದ್ದೇನೆ ಎಂದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಈಗಾಗಲೇ ಶೇ. 99 ಕೆಲಸ ಆಗಿದೆ. ಚುನಾವಣೆ ಬಳಿಕ ಟಿಬಿ ಡ್ಯಾಂ ವ್ಯಾಪ್ತಿಯ ನಗರ ಹಾಗೂ ಕಮಲಾಪುರದಲ್ಲಿ ಮನೆ ಕಟ್ಟಿಕೊಂಡ ಶ್ರಮಿಕ ಕುಟುಂಬಕ್ಕೆ ಪಟ್ಟಾ ವಿತರಿಸುತ್ತೇವೆ ಎಂದರು. ಇದು ನಿಜವಾಗಿಯೂ ಅಸಾಧ್ಯದ ಕೆಲಸವಾಗಿತ್ತು. ಆದರೂ ಸಾಧ್ಯವಾಗಿದ್ದು, ನಮ್ಮೆಲ್ಲರ ಸೌಭಾಗ್ಯ ಎಂದರು.

Exit mobile version