Site icon Vistara News

BBK Season 10: ಬಿಗ್ ಬಾಸ್ ಮನೆಯಿಂದ‌ ಮೂರೇ ವಾರಕ್ಕೆ ಹೊರ ಬಂದ ಪವಿ ಪೂವಪ್ಪ!

Pavi Poovappa

ಬೆಂಗಳೂರು: ಬಿಗ್​​ಬಾಸ್ ​ಕನ್ನಡ ಸೀಸನ್ 10 ರಿಯಾಲಿಟಿ ಶೋ (BBK Season 10) 10ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಬಿಗ್​​ಬಾಸ್ ಮನೆಯಿಂದ ಯಾರು ಹೊರ ಹೋಗುವರು ಎಂದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿತ್ತು. ನಟಿ ಸಿರಿ ಮತ್ತು ಮಾಡೆಲ್ ಪವಿ ಪೂವಪ್ಪ ಅವರಲ್ಲಿ ಒಬ್ಬರು ಮನೆಯಿಂದ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಇದೀಗ ಪವಿ ಪೂವಪ್ಪ (Pavi Poovappa) ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ ಎನ್ನಲಾಗಿದೆ.

ವೈಲ್ಡ್‌‌ ಕಾರ್ಡ್ ಮೂಲಕ ಮಾಡೆಲ್‌ಗಳಾದ ಪವಿ ಪೂವಪ್ಪ ಮತ್ತು ಅವಿನಾಶ್‌ ಶೆಟ್ಟಿ ಬಿಗ್‌ ಬಾಸ್‌ಗೆ ಎಂಟ್ರಿ ನೀಡಿದ್ದರು. ಆದರೆ, ಮೂರೇ ವಾರಕ್ಕೆ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಈ ಮೂರು ವಾರಗಳಲ್ಲಿ ಒಂದು ವಾರ ಬಿಟ್ಟು ಉಳಿದ ವಾರಗಳಲ್ಲಿ ಪವಿ ಪೂವಪ್ಪ ನಾಮಿನೇಟ್‌ ಆಗಿದ್ದರು. ಇನ್ನು ಪವಿ ಜತೆ ಬಿಗ್‌ ಬಾಸ್‌ ಹೌಸ್‌ಗೆ ಬಂದಿದ್ದ ಅವಿನಾಶ್‌ ಶೆಟ್ಟಿ ಸೇಫ್‌ ಆಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Aishwarya Rai: ಆರಾಧ್ಯಳನ್ನು ಹೊಗಳಿದ ಬೆನ್ನಲ್ಲೆ ಐಶ್ವರ್ಯಾ ರೈ ಮೆಚ್ಚಿದ ನೆಟ್ಟಿಗರು!

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಸಿರಿ, ಪವಿ ಪೂವಪ್ಪ, ಮೈಕಲ್‌, ವಿನಯ್‌ ಗೌಡ, ಸಂಗೀತಾ, ಹಾಗೂ ಡ್ರೋನ್‌ ಪ್ರತಾಪ್‌ ಸೇರಿ 6 ಮಂದಿ ನಾಮಿನೇಟ್‌ ಆಗಿದ್ದರು. ಟಾಸ್ಕ್‌ಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಸಿರಿ ಹಾಗೂ ಪವಿ ಪೂವಪ್ಪ ಬಿಗ್‌ ಬಾಸ್‌ ಮನೆಯಿಂದ ಹೊರಹೋಗುವ ಸಾಧ್ಯತೆ ಇತ್ತು. ಆದರೆ, ವೀಕ್ಷಕರು ಸಿರಿ ಅವರನ್ನು ಸೇವ್‌ ಮಾಡಿದ್ದಾರೆ.

ಬಿಗ್‌ ಬಾಸ್‌ನಲ್ಲಿ ಈ ವಾರ ಚೆನ್ನಾಗಿ ಆಡದ ಕಾರಣ ಪವಿ ಕಳಪೆ ಪಟ್ಟ ಪಡೆದಿದ್ದರು. ತುಕಾಲಿ ಸಂತೋಷ್‌ಗೆ ಉತ್ತಮ ಪಟ್ಟ ಸಿಕ್ಕಿತ್ತು. ಇನ್ನು ಈ ವಾರ ಈ ವಾರ ಮೈಕಲ್‌ ಕೂಡ ಈ ವಾರ ಬಹಳ ಅಗ್ರೆಸಿವ್‌ ಆಗಿ ಆಡಿದ ಕಾರಣ ಮನೆಯಿಂದ ಹೊರ ಹೋಗುತ್ತಾರೆ ಎನ್ನಲಾಗಿತ್ತು. ಅದರೆ, ಇತರರಿಗೆ ಹೋಲಿಸಿದರೆ ಪವಿ ಪೂವಪ್ಪಗೆ ಕಡಿಮೆ ವೋಟ್ಸ್ ಲಭಿಸಿದ್ದರಿಂದ ಪವಿ ಪೂವಪ್ಪ ದೊಡ್ಮನೆಯಿಂದ ಔಟ್‌ ಆಗಿದ್ದಾರೆ.

ಇದನ್ನೂ ಓದಿ | Triptii Dimri: ʻನ್ಯಾಶನಲ್‌ ಕ್ರಶ್‌ʼ ತೃಪ್ತಿ ಡಿಮ್ರಿಯ ಡ್ಯಾನ್ಸ್‌ ಫುಲ್‌ ವೈರಲ್‌!

ಪವಿ ಪೂವಪ್ಪ ಅವರು ಕೊಡಗು ಮೂಲದ ರೂಪದರ್ಶಿ ಆಗಿದ್ದು, ಬೋಲ್ಡ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದಾರೆ. ಇವರು ಬಿಗ್‌ ಬಾಸ್‌ಗೆ ಎಂಟ್ರಿ ನೀಡುತ್ತಲೇ ಅವರ ಬೋಲ್ಡ್‌ ಫೋಟೊಗಲು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಪಾನಿಕುಟ್ಟೀರ ಪವಿತ್ರ ಪೂವಪ್ಪ ಇವರ ಪೂರ್ತಿ ಹೆಸರು ಆಗಿದ್ದು, ಕಳೆದ 10 ವರ್ಷಗಳಿಂದ ಮಾಡೆಲಿಂಗ್ ಮಾಡುತ್ತಿದ್ದಾರೆ. ಉನ್ನತ ಬ್ರ್ಯಾಂಡ್‌ಗಳಿಗೆ ಮಾಡೆಲಿಂಗ್‌ ಮಾಡಿರುವ ಇವರು, ಸನ್‌ಲೈಫ್‌ನಲ್ಲಿ ಪ್ರಸಾರವಾಗುವ ದೂರದರ್ಶನ ರಿಯಾಲಿಟಿ ಶೋ “ಸೊಪ್ಪನ ಸುಂದರಿ” ಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version