Site icon Vistara News

Pavithra Gowda: ಬಂಧನದ ಭಯವಿಲ್ಲದೇ ನಗುತ್ತಾ ಸಾಂತ್ವನ ಕೇಂದ್ರಕ್ಕೆ ಹೋದ ಪವಿತ್ರಾ ಗೌಡ!

Pavithra Gowda

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ (Pavithra Gowda) ಸೇರಿ 13 ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಲು ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಎ1 ಪವಿತ್ರಾ ಗೌಡಳನ್ನು ಮಂಗಳವಾರ ರಾತ್ರಿ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಜೀಪ್‌ನಿಂದ ಇಳಿಯುವಾಗ ಯಾವುದೇ ರೀತಿಯ ಭಯವಿಲ್ಲದೇ ಪವಿತ್ರಾ ಗೌಡ ನಗುನಗುತ್ತಾ ಸಾಂತ್ವನ ಕೇಂದ್ರದ ಒಳ ಹೋಗಿದ್ದು ಕಂಡುಬಂದಿದೆ.

ಆರೋಪಿಗಳಿಗೆ 6 ದಿನಗಳ ಕಾಲ ಕಸ್ಟಡಿ ವಿಧಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನಿಸಲಾಯಿತು. ಈ ವೇಳೆ ಕ್ಯಾಮೆರಾಗಳ ಕಣ್ಣಿಗೆ ಬೀಳದಂತೆ ಮುಖಕ್ಕೆ ಅಡ್ಡಲಾಗಿ ವಾಟರ್‌ ಬಾಟಲ್‌ ಹಿಡಿದು ಕಾರಿನಲ್ಲಿ ಪವಿತ್ರಾ ಗೌಡ ನಗುತ್ತಿದ್ದದ್ದು ಕಂಡುಬಂದಿದೆ. ನಂತರ ಯಾವುದೇ ಭಯವೇ ಇಲ್ಲದಂತೆ ನಗುತ್ತಾ ಸಾಂತ್ವನ ಕೇಂದ್ರದ ಒಳ ಹೋಗಿದ್ದಾಳೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಬಂಧನವಾದರೂ ಇವರಿಗೆ ಯಾವುದೇ ಆತಂಕ, ಭಯ ಇಲ್ಲ ಎಂದು ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

ಇದನ್ನೂ ಓದಿ | Renuka Swamy Murder Case: ರೇಣುಕಾಸ್ವಾಮಿ ಕೊಲೆ ಕೇಸ್‌ ಖಂಡಿಸಿ ನಾಳೆ ಚಿತ್ರದುರ್ಗದಲ್ಲಿ ಬೃಹತ್‌ ಪ್ರತಿಭಟನೆ

ಪತಿ ಅರೆಸ್ಟ್​ ಆದರೂ ಪ್ರತಿಕ್ರಿಯೆ ನೀಡದ ದರ್ಶನ್​ ಪತ್ನಿ ವಿಜಯಲಕ್ಷ್ಮಿ!

Actor Darshan Arrested

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಅರೆಸ್ಟ್ (Actor Darshan Arrested) ಆಗಿದ್ದರೂ ಅವರ ಪತ್ನಿ ವಿಜಯಲಕ್ಷ್ಮಿ ಇದುವರೆಗೆ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಪವಿತ್ರಾ ಗೌಡ ವಿಚಾರದಲ್ಲಿ ಆಗಾಗ ಸೋಶಿಯಲ್ ಮೀಡಿಯಾಗಳ ಮೂಲಕ ಯುದ್ಧ ಸಾರುತ್ತಿದ್ದ ವಿಜಯಲಕ್ಷ್ಮಿ ಅವರು ಈ ಬಾರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಪ್ರಕರಣದಲ್ಲಿ ಬಗ್ಗೆ ಅವರ ಅಭಿಪ್ರಾಯ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಂಗಳವಾರ ಬೆಳಗ್ಗಿನಿಂದ ಪ್ರಕರಣ ರಾಜ್ಯಾದ್ಯಂತ ಹವಾ ಎಬ್ಬಿಸಿದ್ದು ಒಬ್ಬೊಬ್ಬರು ಒಂದೊಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ದರ್ಶನ್​ ಅಭಿಮಾನಿಗಳಂತೂ ಈ ವಿಚಾರದಲ್ಲಿ ಭಾವುಕರಾಗಿದ್ದಾರೆ. ಆದರೆ ಪತಿ ಜೈಲಿಗೆ ಹೋಗುವ ಸ್ಥಿತಿ ತಂದುಕೊಂಡಿದ್ದರೂ ವಿಜಯಲಕ್ಷ್ಮೀ ಈ ಕುರಿತು ಏನೂ ಹೇಳಿಕೆಗಳನ್ನು ನೀಡಿಲ್ಲ.

ಪವಿತ್ರಾ ಗೌಡ ವಿಚಾರದಲ್ಲಿ ವಿಜಯಲಕ್ಷ್ಮೀ ಈ ಹಿಂದೆ ಸಾಕಷ್ಟು ಬಾರಿ ಸೋಶಿಯಲ್​ ಮೀಡಿಯಾ ವಾರ್ ನಡೆಸಿದ್ದರು. ಪವಿತ್ರಾ ವಿರುದ್ಧ ನಾನಾ ರೀತಿಯ ಹೇಳಿಕೆಗಳನ್ನು ನೀಡಿದ್ದರು. ದರ್ಶನ್​ ಕೊಲೆ ಅರೋಪದಲ್ಲಿ ಸಿಕ್ಕಿ ಹಾಕಿಕೊಂಡಿರುವುದ ಪವಿತ್ರಾ ಅವರ ವಿಚಾರದಲ್ಲಿ. ಹೀಗಾಗಿ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿರುತ್ತದೆ. ಆದಾಗ್ಯೂ ಅವರು ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ.

ದರ್ಶನ್​ಗೆ ಮರಣದಂಡನೆ ಶಿಕ್ಷೆಯಾಗಲಿ! ನಟಿ ರಮ್ಯಾ ಟ್ವೀಟ್‌

ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್​ಗೆ (Actor Darshan) ಮರಣದಂಡನೆಯಾಗಲಿ ಎಂಬ ಆಶಯವನ್ನು ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ವ್ಯಕ್ತಪಡಿಸಿದ್ದಾರೆ! ಕೊಲೆ ಪ್ರಕರಣದ ಕುರಿತು ಎಕ್ಸ್​ನಲ್ಲಿ ಪೋಸ್ಟ್​​ ಮಾಡಿರುವ ರಮ್ಯಾ ಐಪಿಸಿ ಸೆಕ್ಷನ್​ 302ರನ್ನು ಉಲ್ಲೇಖಿಸಿ ಅದರ ಅನ್ವಯ ದರ್ಶನ್​ಗೆ ಕಠಿಣ ಶಿಕ್ಷೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊಲೆಯಾಗಿರುವ ವ್ಯಕ್ತಿಯ ಪರವಾಗಿ ನಿಂತಿರುವ ರಮ್ಯಾ, ದರ್ಶನ್​ಗೆ ಇಂಡಿಯನ್ ಪಿನಲ್​ ಕೋಡ್​ 302ರ ಪ್ರಕಾರ ಯಾವ ಪ್ರಕಾರಣದ ಶಿಕ್ಷೆಯಾಗುತ್ತದೆ ಎಂಬ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಸೆಕ್ಷನ್​ 302ರಲ್ಲಿ ಕೊಲೆ ಆರೋಪ ಸಾಬೀತಾದರೆ ಅವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಮಾಹಿತಿ ಇರುವ ಪೋಸ್ಟ್‌ ಅನ್ನು ರಮ್ಯಾ ರೀಟ್ವೀಟ್‌ ಮಾಡಿದ್ದಾರೆ.

ಸೆಕ್ಷನ್ 302 ರ ಅಡಿಯಲ್ಲಿ ನಟ ದರ್ಶನ್​ಗೆ ಜೀವಾವಧಿ ಶಿಕ್ಷೆ ಅಥವಾ ಶಿಕ್ಷೆಯಾಗಬೇಕು. ಬೇರೆ ಯಾವುದೇ ಹಣದ ಪ್ರಭಾವ ಮತ್ತು ಭಾರತೀಯ ಕಾನೂನು ವ್ಯವಸ್ಥೆಯನ್ನು ಅಣಕಿಸುವಂತಾಗಬಾರದು. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಟ್ವೀಟ್‌ ಅನ್ನು ರಮ್ಯಾ ಮರು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ರಮ್ಯಾ ಈ ಹಿಂದೆಯೂ ಸ್ಟಾರ್ ನಟರ ನಡವಳಿಕೆಯ ಬಗ್ಗೆ ಆಕ್ಷೇಪ ಎತ್ತಿದ್ದರು. ಹಿಂದೆ ದರ್ಶನ್​ಗೆ ಚಪ್ಪಲಿ ಎಸೆತ ಪ್ರಕರಣ ನಡೆದಾಗ ಸ್ಪಂದಿಸಿದ್ದ ಅವರು, ಅಭಿಮಾನಿಗಳು ಹಾಗೂ ನಟರಿಗೆ ಬುದ್ಧಿ ಹೇಳಬೇಕಾಗಿದೆ ಎಂದು ಹೇಳಿದ್ದರು.

Exit mobile version