Site icon Vistara News

ಕರ್ತವ್ಯ ಲೋಪ, ಹಣ ದುರ್ಬಳಕೆ ಹಿನ್ನೆಲೆ ಚಿಲಕನಹಟ್ಟಿ ಪಿಡಿಒ ಸಸ್ಪೆಂಡ್

ಪಿಡಿಒ

ವಿಜಯನಗರ: ಕರ್ತವ್ಯ ಲೋಪ ಹಾಗೂ‌ ಸರ್ಕಾರದ ಹಣ ದುರ್ಬಳಕೆ ಹಣ ಆರೋಪ ಹಿನ್ನೆಲೆಯಲ್ಲಿ ಜಿಲ್ಲೆಯ ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಯ್ಯದ್ ಮನ್ಸೂರ್ ಹುಸೇನ್‌ರನ್ನು ಅಮಾನತು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಆಗಸ್ಟ್ 1ರಂದು ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರಿಂದ ಪಂಚಾಯಿತಿಯ 9 ಲಕ್ಷ ರೂಪಾಯಿಯನ್ನು ಚಿಲಕನಕಟ್ಟಿ ಪಿಡಿಒ ಸಯ್ಯದ್ ಮನ್ಸೂರ್ ಹುಸೇನ್ ದುರುಪಯೋಗ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್, ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಬೋಯರ್‌ ದೂರು ಸಲ್ಲಿಸಿದ್ದರು. ಇದಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ ಅವ್ಯವಹಾರ ಕುರಿತು ಪಿಡಿಒ ವಿರುದ್ಧ ಆರೋಪಗಳು ಬಂದಿದ್ದವು. ಈ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಿದಾಗ ಮೇಲ್ನೋಟಕ್ಕೆ ಹಣ ದುರ್ಬಳಕೆ ಆರೋಪ ಸಾಬೀತಾಗಿದ್ದರಿಂದ ಪಿಡಿಒ ಅಮಾನತುಗೊಂಡಿದ್ದಾರೆ.

ಇದನ್ನೂ ಓದಿ | Sexual Harassment | ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಆರೋಪಿಗಳನ್ನು ಹಿಡಿದು ಥಳಿಸಿದ ಪೋಷಕರು

ಹಲವು ಅವ್ಯವಹಾರ ಆರೋಪ
ಚಿಲನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಕೆಲಸಗಳಿಗೆ ಅಧ್ಯಕ್ಷರ ಸಹಿ ಇಲ್ಲದೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಗುತ್ತಿಗೆದಾರರಿಗೆ ಹಣ ಪಾವತಿ, ಫಾಗಿಂಗ್ ಮಷೀನ್ ಖರೀದಿ, ಕೋವಿಡ್ ನಿಯಂತ್ರಣಕ್ಕೆ 15ನೇ ಹಣಕಾಸಿನ ಹಣ ದುರುಪಯೋಗ, ಗ್ರಾಮಗಳಲ್ಲಿ ವಿದ್ಯುತ್ ಲೈಟ್‌ ಖರೀದಿ ದರದಲ್ಲಿ ಗೋಲ್ ಮಾಲ್‌, 14ನೇ ಹಣಕಾಸು ಯೋಜನೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಭೌತಿಕ ಸಾಮರ್ಥ್ಯ ಹೆಚ್ಚಿಸುವ ಚಿತ್ರಗಳ ಯೋಜನೆಯಲ್ಲಿ ಹಣ ದುರುಪಯೋಗ ಸೇರಿ ಹಲವು ಯೋಜನೆಯಲ್ಲಿ ಹಣ ದುರುಪಯೋಗ ಸೇರಿ ಹಲವು ದೂರುಗಳು ಪಿಡಿಒ ವಿರುದ್ಧ ಕೇಳಿಬಂದಿವೆ. ಹೀಗಾಗಿ ಅಧಿಕಾರಿಯನ್ನು ಅಮನಾತು ಮಾಡಲಾಗಿದೆ.

ಇದನ್ನೂ ಓದಿ | ಚೂರಿ ಇರಿತದ ಆರೋಪದಲ್ಲಿ ವಿಚಾರಣೆಗೆ ಕರೆತಂದ ವ್ಯಕ್ತಿ ಪೊಲೀಸ್‌ ಠಾಣೆಯಿಂದಲೇ ಎಸ್ಕೇಪ್‌

Exit mobile version