ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಇಡೀ ದೇಶವೇ ಕಷ್ಟದ ಪರಿಸ್ಥಿತಿಯನ್ನು ಅನುಭವಿಸಿತ್ತು. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಲಾಕ್‌ಡೌನ್ ಘೋಷಿಸಲಾಗಿತ್ತು. ಆ ಸಂದರ್ಭದಲ್ಲಿ ನೆರೆ ರಾಜ್ಯದವರಿಗೆ ಮತ್ತು ವಿದೇಶಿಗರಿಗೆ ತಾವು ಇದ್ದಲ್ಲಿಯೇ ನೆಲೆಸುವ ಅನಿವಾರ್ಯ ಆಯಿತು. ಆ ಸಮಯದಲ್ಲಿ ಬೆಂಗಳೂರಿನಲ್ಲೇ ಸಿಲುಕಿದ್ದ ಅರುಣಾಚಲದ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದ ಹಿನ್ನೆಲೆಯಲ್ಲಿ ಈಗ ಅಲ್ಲಿನ ಮುಖ್ಯಮಂತ್ರಿ ಖುದ್ದು ಧನ್ಯವಾದವನ್ನು ಅರ್ಪಿಸಿದ್ದಾರೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು (Pema Khandu) ಬೆಂಗಳೂರಿನ ಕನ್ನಡಿಗರಿಗೆ ಧನ್ಯವಾದ ಹೇಳುವ ಮೂಲಕ ತಮ್ಮ ಕೃತಜ್ಞತೆ ಸಮರ್ಪಿಸಿದ್ದಾರೆ.
ಇದನ್ನೂ ಓದಿ | Modi 8 years: ಎಂಟು ವರ್ಷಗಳಲ್ಲಿ ಭಾರತ ಹೇಗೆ ಬದಲಾಯ್ತು, ಇಲ್ಲಿದೆ ಹತ್ತು ಪಾಯಿಂಟು!
2021ರಲ್ಲಿ ಕೊರೊನಾದಿಂದಾಗಿ ಲಾಕ್‌ಡೌನ್ ಆಗಿದ್ದ ಹಿನ್ನೆಲೆಯಲ್ಲಿ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಊರಿಗೆ ತೆರಳಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟವನ್ನು ಎದುರಿಸಿದ್ದರು. ಬೆಂಗಳೂರಿನಲ್ಲಿ ಉಪನ್ಯಾಸಕ, ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಪದ್ಮಾರ್ ಅವರು ಆಹಾರ ಪೊಟ್ಟಣವನ್ನು ಅರುಣಾಚಲ ಪ್ರದೇಶದ ವಿದ್ಯಾರ್ಥಿಗಳಿಗೆ ನೀಡಿ ಮಾನವೀಯತೆ ಮೆರೆದಿದ್ದರು. ಇದನ್ನು ಗಮನಿಸಿದ್ದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು (Pema Khandu) ಕರ್ನಾಟಕ ಸರ್ಕಾರಕ್ಕೆ ಮತ್ತು ಸಹಾಯ ಮಾಡಿದವರಿಗೆ ಟ್ವೀಟ್ ಮೂಲಕ ಧನ್ಯವಾದ ಸೂಚಿಸಿದ್ದರು.
ಖುದ್ದು ಕಂಡು ಧನ್ಯವಾದ ತಿಳಿಸಿದ ಖಂಡು
ಆಂಧ್ರಪ್ರದೇಶದಲ್ಲಿ ನಡೆದ 1 1ನೇ ಯಂಗ್ ಥಿಂಕರ್ಸ್ ಮೀಟ್‌ನಲ್ಲಿ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಕನ್ನಡಿಗರಾದ ರಾಜೇಶ್ ಪದ್ಮಾರ್ ಹಾಗೂ ಅವರ ಸ್ನೇಹಿತರನ್ನು ಭೇಟಿ ಮಾಡಿದ್ದಾರೆ. ʻʻಕೋವಿಡ್ ೧೯ರ ಆರಂಭಿಕ ಹಂತದಲ್ಲಿ ರಾಜೇಶ್ ಪದ್ಮಾರ್ ಮತ್ತು ಅವರ ಸ್ನೇಹಿತರು ಸಮಸ್ಯೆಗೆ ಒಳಗಾದ ಅರುಣಾಚಲ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದರು. ಆ ಕಷ್ಟದ ಸಮಯದಲ್ಲಿ ಅವರ ಜತೆಯಾಗಿದ್ದ ದರ್ಶನ್ ದೇಸಾಯಿ ಮತ್ತು ಮಂಚಾಲ್ ಮಹೇಶ್ ಅವರಿಗೂ ವೈಯಕ್ತಿಕವಾಗಿ ಧನ್ಯವಾದ ಹೇಳುವ ಅವಕಾಶ ಇಂದು ಆಂಧ್ರದಲ್ಲಿ ಸಿಕ್ಕಿದೆʼʼ ಎಂದು ಖಂಡು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಪ್ರವಾಸಿ ತಾಣ: ಕೊರೊನಾ ನಂತರ ಈ ದೇಶ ಪ್ರವಾಸಿಗರ ಅಚ್ಚುಮೆಚ್ಚು ಆಗಿದೆಯಂತೆ!