Site icon Vistara News

Jeevan Pramaan : ಮನೆಯಲ್ಲೇ ಜೀವನ್‌ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರು ಹೀಗೆ ಮಾಡಿದರೆ ಸಾಕು!

Pension scheme Jeevan praman

ಬೆಂಗಳೂರು: ಪಿಂಚಣಿದಾರರು (Pensioners) ಜೀವನ್‌ ಪ್ರಮಾಣ (Jeevan Pramaan) ಪತ್ರ ಸಲ್ಲಿಸಲು ಬ್ಯಾಂಕ್‌ ಅಥವಾ ಅಂಚೆ ಕಚೇರಿಗೆ (Bank or Post Office) ತೆರಳಬೇಕಿಲ್ಲ. ಬದಲಾಗಿ ಮನೆಯಿಂದಲೇ ಸಲ್ಲಿಸುವ ಅವಕಾಶವನ್ನು ಈಗಾಗಲೇ ನೀಡಲಾಗಿದೆ. ಆದರೆ, ಇದು ಬಹಳಷ್ಟು ಮಂದಿಗೆ ಇನ್ನೂ ತಿಳಿದಿಲ್ಲ. ಈ ಸೇವೆಯನ್ನು ಒಟ್ಟು 12 ಸಾರ್ವಜನಿಕ ಬ್ಯಾಂಕ್‌ಗಳ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಬ್ಯಾಂಕ್‌ಗಳ ಮೂಲಕ ಡೋರ್‌ಸ್ಟೆಪ್‌ ಬ್ಯಾಂಕಿಂಗ್‌ ಅಲೆಯನ್ಸ್‌ ಸೇವೆಯನ್ನು (Doorstep Banking Alliance Service) ಬಳಸಿಕೊಂಡು ನೀವು ಮನೆಯಲ್ಲಿಯೇ ಜೀವನ್‌ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಇಲ್ಲವೇ ಅಂಚೆ ಇಲಾಖೆ ಕೂಡ ಇದೇ ಮಾದರಿಯ ಸೇವೆಯನ್ನು ನೀಡುತ್ತಿದ್ದು, ಆ ಮೂಲಕವೂ ನೀವು ಸೇವೆಯನ್ನು ಪಡೆಯಬಹುದಾಗಿದೆ.

ಹೀಗಾಗಿ ಪಿಂಚಣಿದಾರರಿಗೆ ಮನೆಯಿಂದಲೇ ಅವರ ವಾರ್ಷಿಕ ಜೀವನ್‌ ಪ್ರಮಾಣ ಪತ್ರ (ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್ -ಡಿಎಲ್‌ಸಿ)ವನ್ನು ಸಲ್ಲಿಸಲು ಅವಕಾಶ ಸಿಕ್ಕಿದಂತಾಗಿದೆ. ಈ ಸೇವೆ ಲಭ್ಯವಾಗಿ 2 ವರ್ಷಗಳಾಗಿವೆ.

ಇದನ್ನೂ ಓದಿ: NPS Cancellation : ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ರದ್ದು? ಆರ್ಥಿಕ ಇಲಾಖೆ ಜತೆ ಶೀಘ್ರ ಸಿದ್ದರಾಮಯ್ಯ ಸಭೆ

ಸೇವೆ ನೀಡುವ 12 ಬ್ಯಾಂಕ್‌ಗಳಾವುವು?

ಡೋರ್‌ಸ್ಟೆಪ್‌ ಬ್ಯಾಂಕಿಂಗ್‌ ಅಲೈಯನ್ಸ್‌ ಸೌಲಭ್ಯ ನೀಡಲು 12 ಬ್ಯಾಂಕ್‌ಗಳು ಒಪ್ಪಂದ ಮಾಡಿಕೊಂಡಿವೆ. ಈ ಬ್ಯಾಂಕ್‌ಗಳ ವಿವರ ಇಂತಿದೆ.

  1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)
  2. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)
  3. ಬ್ಯಾಂಕ್ ಆಫ್ ಬರೋಡಾ
  4. ಬ್ಯಾಂಕ್ ಆಫ್ ಇಂಡಿಯಾ
  5. ಕೆನರಾ ಬ್ಯಾಂಕ್
  6. ಬ್ಯಾಂಕ್ ಆಫ್ ಮಹಾರಾಷ್ಟ್ರ
  7. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  8. ಇಂಡಿಯನ್ ಬ್ಯಾಂಕ್
  9. ಇಂಡಿಯನ್ ಓವರ್‌ಸೀಸ್ ಬ್ಯಾಂಕ್
  10. ಪಂಜಾಬ್ ಮತ್ತು ಸಿಂಡ್ ಬ್ಯಾಂಕ್
  11. ಯುಕೋ ಬ್ಯಾಂಕ್
  12. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಈ ಬ್ಯಾಂಕ್‌ ಒಕ್ಕೂಟವು ನಿಮ್ಮ ಮನೆ ಬಾಗಿಲಿನ ಬ್ಯಾಂಕಿಂಗ್ ಸೇವೆಗಳ ಅಡಿಯಲ್ಲಿ ಜೀವನ ಪ್ರಮಾಣಪತ್ರಗಳನ್ನು ಸಂಗ್ರಹಿಸುವ ಸೇವೆಯನ್ನು ಪರಿಚಯಿಸಿವೆ.

ಸೇವೆ ಪಡೆಯುವುದು ಹೇಗೆ?

ಪಿಂಚಣಿದಾರರು ಮೊಬೈಲ್‌ ಆ್ಯಪ್‌, ವೆಬ್‌ಸೈಟ್‌ ಅಥವಾ ಟೋಲ್‌-ಫ್ರೀ ಸಂಖ್ಯೆಯ ಮೂಲಕ ಪಿಎಸ್‌ಬಿ ಅಲೈಯನ್ಸ್‌ನ ಈ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೇವೆಯನ್ನು ಪಡೆದುಕೊಳ್ಳಬಹುದು. ಒಮ್ಮೆ ಇಲ್ಲಿ ಬುಕ್‌ ಮಾಡಿದ ಬಳಿಕ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಲಾಗುತ್ತದೆ. ಆಗ, ಬ್ಯಾಂಕ್‌ನ ಏಜೆಂಟರು ಪಿಂಚಣಿದಾರರ ಮನೆಗೆ ನಿಗದಿತ ವೇಳೆಗೆ ಹಾಜರಾಗುತ್ತಾರೆ. ಅವರು ಪಿಂಚಣಿದಾರರ ಎದುರಿನಲ್ಲಿಯೇ ಜೀವನ್‌ ಪ್ರಮಾಣ ಆ್ಯಪ್‌ ಬಳಸಿ ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಅನ್ನು ನೀಡುತ್ತಾರೆ.

ಈ ಸೇವೆ ಪಡೆಯಲು ಗೂಗಲ್‌ ಪ್ಲೇಸ್ಟೋರ್‌ನಿಂದ ‘ಡೋರ್‌ಸ್ಟೆಪ್‌ ಬ್ಯಾಂಕಿಂಗ್‌’ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇನ್ನು ಇದಕ್ಕೆ ವೆಬ್‌ಸೈಟ್‌ ಅನ್ನೂ ನೀಡಲಾಗಿದೆ. ಇದಕ್ಕಾಗಿ ಇಲ್ಲಿ ಎರಡು ಲಿಂಕ್‌ ಅನ್ನು ನೀಡಲಾಗಿದೆ. ಮೊದಲ ಲಿಂಕ್ ಅಥವಾ ಎರಡನೇ ಲಿಂಕ್ ಮೇಲೆ ಕ್ಲಿಕ್‌ ಮಾಡಿ ಸೇವೆಯನ್ನು ಪಡೆಯಬಹುದು. ಇಲ್ಲವೇ ಟೋಲ್‌ ಫ್ರೀ ಸಂಖ್ಯೆ 18001213721 ಅಥವಾ 18001037188 ಅನ್ನು ಸಹ ಬಳಕೆ ಮಾಡಿಕೊಳ್ಳಬಹುದು. ಅಲೈಯನ್ಸ್‌ ವೆಬ್‌ಸೈಟ್‌ನಲ್ಲಿ ಇದಕ್ಕೆ ಸೇವಾ ಶುಲ್ಕ ನಿಗದಿಪಡಿಸಿಲ್ಲವಾದರೂ, ಎಸ್‌ಬಿಐ ವೆಬ್‌ಸೈಟ್‌ ಪ್ರಕಾರ 75 ರೂ. ಹಾಗೂ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

ಪೋಸ್ಟ್‌ ಮ್ಯಾನ್‌ ಸಹ ಈ ಸೇವೆ ನೀಡಲಿದ್ದಾರೆ

ಡಿಜಿಟಲ್‌ ಜೀವನ್‌ ಪ್ರಮಾಣ ಪತ್ರ ವಿತರಣೆ ಸೇವೆಯನ್ನು ಅಂಚೆ ಇಲಾಖೆಯು 2020ರ ನವೆಂಬರ್‌ನಲ್ಲಿ ಪ್ರಾರಂಭ ಮಾಡಿದೆ. ಹೀಗಾಗಿ ಪೋಸ್ಟ್‌ ಮ್ಯಾನ್‌ ಮೂಲಕವೂ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇಂಡಿಯಾ ಪೋಸ್ಟ್‌ ಮೂಲಕ ಈ ಸೇವೆ ಪಡೆಯಲು ಪೋಸ್ಟ್‌ಇನ್ಫೋ (Postinfo) ಆ್ಯಪ್‌ ಅನ್ನು ಡೌನ್ಲೋಡ್‌ ಮಾಡಿಕೊಳ್ಳಬೇಕು.

ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ವೆಬ್‌ಸೈಟ್‌ ಅನುಸಾರ, ಈ ಸೇವೆಯನ್ನು ಖಾತೆದಾರರಲ್ಲದವರೂ ಪಡೆಯಬಹುದಾಗಿದೆ. ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್ (ಡಿಎಲ್‌ಸಿ) ಸೇವೆ ಪಡೆದುಕೊಳ್ಳಲು ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕು. ಇಲ್ಲವೇ ನಿಮ್ಮ ಮನೆಗೆ ಪೋಸ್ಟ್‌ ಮ್ಯಾನ್‌ ಭೇಟಿ ನೀಡಬೇಕೆಂದರೆ ಪೋಸ್ಟ್‌ಇನ್ಫೋ ಆ್ಯಪ್‌ ಮೂಲಕ ಮನವಿ ಮಾಡಬೇಕು. ಇಲ್ಲವೇ ಈ ವೆಬ್‌ಸೈಟ್‌ ಮೂಲಕವೂ ರಿಕ್ವೆಸ್ಟ್‌ ಕಳುಹಿಸಬಹುದು.

ಇದಾದ ಬಳಿಕ ಡಿಎಲ್‌ಸಿ ಸರ್ಟಿಫಿಕೇಟ್‌ ಅನ್ನು ರಚಿಸಬಹುದಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರಮಾಣ್‌ ಐಡಿ (Pramaan ID) ಜನರೇಟ್‌ ಆಗಲಿದೆ. ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ನೇರವಾಗಿ ಪಿಂಚಣಿದಾರರ ಜತೆ ಹಂಚಿಕೊಳ್ಳಲಿದೆ. ಪ್ರಮಾಣ್‌ ಐಡಿ ಲಭ್ಯವಾದ ಬಳಿಕ ಪಿಂಚಣಿದಾರರು ಈ ವೆಬ್‌ಸೈಟ್‌ ಮೂಲಕ ಡಿಎಲ್‌ಸಿಯನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು. ಪ್ರತಿ ಬಾರಿ ಡಿಎಲ್‌ಸಿ ಜನರೇಟ್‌ ಮಾಡಿದಾಗಲೂ 70 ರೂಪಾಯಿಗಳ ಸೇವಾ ಶುಲ್ಕ (ಜಿಎಸ್‌ಟಿ/ಸೆಸ್‌ ಸೇರಿ) ಪಡೆದುಕೊಳ್ಳಲಾಗುತ್ತದೆ. ಮನೆ ಬಾಗಿಲಿಗೆ ಡಿಎಲ್‌ಸಿ ನೀಡಲು ಯಾವುದೇ ಶುಲ್ಕ ಇಲ್ಲ.

ಇದನ್ನೂ ಓದಿ: Health Scheme : ಮನೆ ಮನೆಯತ್ತ ಡಾಕ್ಟರ್‌ – ಔಷಧ ಕಿಟ್;‌ ಜಾರಿಯಾಗಲಿದೆ ಗೃಹ ಆರೋಗ್ಯ ಯೋಜನೆ

ಮನೆ ಬಾಗಿಲಿನಲ್ಲಿ ಜೀವನ್‌ ಪ್ರಮಾಣ ಪತ್ರ ಬೇಕಿದ್ದವರ ಬಳಿ ಇರಲಿ ಈ ದಾಖಲೆ

ಇದರ ಜತೆಗೆ ಪಿಂಚಣಿದಾರರ ಆಧಾರ್‌ ಸಂಖ್ಯೆ ಬ್ಯಾಂಕ್‌ ಖಾತೆ/ಅಂಚೆ ಕಚೇರಿಯಲ್ಲಿ ನೋಂದಣಿ ಆಗಿರಬೇಕು.

Exit mobile version