Site icon Vistara News

Karnataka election 2023: ಸುಳ್ಳು ಭರವಸೆ ನೀಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಬೊಮ್ಮಾಯಿ

People will teach Congress a lesson in this election for giving false promises just for votes CM Basavaraja Bommai Karnataka election 2023 updates

ಸಿರುಗುಪ್ಪ: ಮೀಸಲಾತಿ (Reservation) ಪ್ರಮಾಣ ಹೆಚ್ಚಳ ಮತ್ತು ಒಳ ಮೀಸಲಾತಿ ಕಲ್ಪಿಸುವ ವೇಳೆಯಲ್ಲಿ ಕಾಂಗ್ರೆಸ್‌ನ ಮುಖಂಡರು ಜೇನುಗೂಡಿಗೆ ಕೈಹಾಕಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಬಿಜೆಪಿ ಸರ್ಕಾರದ ಎಲ್ಲರ ಸಹಕಾರದೊಂದಿಗೆ ನಾನು ಜೇನು ಹುಳು ಕಡಿದರೂ ಪರವಾಗಿಲ್ಲ, ದೀನ ದಲಿತರಿಗೆ ಜೇನು ತುಪ್ಪ ನೀಡುವ ನಿಟ್ಟಿನಲ್ಲಿ ಯಶಸ್ವಿಯಾಗಿರುವುದು ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಶನಿವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಸ್.ಸೋಮಲಿಂಗಪ್ಪ ಪರ ರೋಡ್ ಶೋ ನಡೆಸಿ ನಂತರ ಗಾಂಧಿ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಸಾಮಾಜಿಕ ನ್ಯಾಯದ ಸುಳ್ಳು ಭರವಸೆಯ ಮೂಲಕ ದಿನ ದಲಿತರನ್ನು ಮತಬ್ಯಾಂಕ್‌ನ್ನಾಗಿ ಮಾಡಿಕೊಂಡಿದ್ದ ಸಮಾಜಕ್ಕೆ ಒಳಮೀಸಲಾತಿ ಹಾಗೂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹಾಗೂ ದಿನ ದಲಿತರರಿಗೆ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ ಬಿಜೆಪಿಯನ್ನು ಬೆಂಬಲಿಸಿ. ಕೇವಲ ಮತಕ್ಕಾಗಿ ಸುಳ್ಳು ಭರವಸೆಯನ್ನು ನೀಡುವ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Modi In Karnataka: ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಅಬ್ಬರ; ಇಲ್ಲಿವೆ ಫೋಟೊಗಳು

ಶಾಸಕರ ಶ್ರಮ ಸ್ಮರಣೀಯ

ಕ್ಷೇತ್ರದ ಸಮಗ್ರ ಪ್ರಗತಿಗೆ ಶಾಸಕ ಎಂ.ಎಸ್.ಸೋಮಲಿಂಗಪ್ಪರ ಶ್ರಮ ನಿಜಕ್ಕೂ ಸ್ಮರಣಿಯವಾಗಿದೆ, ಶೈಕ್ಷಣಿಕ ಕ್ಷೇತ್ರ, ಕೃಷಿ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆಗಳಿಗೆ ಶಾಸಕರಿಗೆ ಸದಾ ಬೆಂಬಲ ನೀಡಲಾಗಿದ್ದು, ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಎಂ.ಎಸ್.ಸೋಮಲಿಂಗಪ್ಪರನ್ನು ಪ್ರಚಂಡ ಬಹುಮತದ ಗೆಲುವು ಸಾಧಿಸಲು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, ಈಗಾಗಲೇ ಕ್ಷೇತ್ರದಲ್ಲಿ ಹತ್ತು ಹಲವು ಅಭಿವೃದ್ಧಿಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತಮ್ಮೆಲ್ಲರ ಸಹಕಾರದೊಂದಿಗೆ ಗೆಲುವು ಸಾಧಿಸುವ ಮೂಲಕ ತುಂಗಭದ್ರಾ ಮತ್ತು ವೇದಾವತಿ ಹಗರಿ ನದಿಗಳಿಗೆ ಚೆಕ್ ಡ್ಯಾಂಗಳ ನಿರ್ಮಾಣ, ಸಿರುಗುಪ್ಪ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಾಣ, ನಗರದ ಅಭಿವೃದ್ಧಿಗೆ ಸಂಪೂರ್ಣ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಒಳ ಚರಂಡಿ ವ್ಯವಸ್ಥೆ, ನಿಟ್ಟೂರು ಸಿಂಗಾಪುರ ಗ್ರಾಮದ ಮಧ್ಯೆ ತುಂಗಭದ್ರಾ ನದಿಗೆ 150 ಕೋಟಿ ರೂ. ವೆಚ್ಚದ ಬ್ರೀಡ್ಜ್ ನಿರ್ಮಾಣ ಮಾಡಲಾಗುವುದು, ರೈತರ ಜಮೀನುಗಳಿಗೆ ಸಂಪೂರ್ಣ ನೀರಾವರಿ ವ್ಯವಸ್ಥೆ ಕಲ್ಪಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka Election : ವಿಷದ ಹಾವು ಹೇಳಿಕೆ ನಿಮಗೆ ಶೋಭೆಯಲ್ಲ ಖರ್ಗೆಯವರೇ ಎಂದ ಬಿ.ಎಸ್‌ ಯಡಿಯೂರಪ್ಪ

ರೋಡ್ ಶೋ

ಇದಕ್ಕೂ ಮುನ್ನ ನಗರದ ದೇವಲಾಪುರ ರಸ್ತೆಯಲ್ಲಿರುವ ಬಸವೇಶ್ವರರ ಪುತ್ತಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಳಿಕ ನಗರದ ತಾಲೂಕು ಕ್ರೀಡಾಂಗಣದಿಂದ ಸಾವಿರಾರು ಕಾರ್ಯಕರ್ತರ ಮಧ್ಯೆ ರೋಡ್ ಶೋ ನಡೆಯಿತು.

ಈ ವೇಳೆ ತಾಲೂಕು ಅಧ್ಯಕ್ಷ ಆರ್.ಸಿ.ಪಂಪನಗೌಡ, ಹಿರಿಯ ನ್ಯಾಯವಾದಿ ಗುರುಸಿದ್ದಯ್ಯಸ್ವಾಮಿ, ಮುಖಂಡರಾದ ಕುಂಟ್ನಾಳ್ ಮಲ್ಲಿಕಾರ್ಜುನಸ್ವಾಮಿ, ಮಂಜುಳಾ ಸೇರಿದಂತೆ ಇತರರು ಇದ್ದರು.

Exit mobile version