Site icon Vistara News

PFI Banned | ಪಿಎಫ್‌ಐ ನಿಷೇಧ ನೆಮ್ಮದಿ ತಂದಿದೆ; ಮರುಹುಟ್ಟದಂತೆ ನೋಡಿಕೊಳ್ಳಿ: ಪೇಜಾವರ ಶ್ರೀ

pejawara seer

ಉಡುಪಿ: ಪಿಎಫ್‌ಐ ನಿಷೇಧಿಸಿರುವುದರಿಂದ (PFI Banned) ತುಂಬಾ ನೆಮ್ಮದಿಯಾಯಿತು. ಸಮಾಜ ವಿರೋಧಿ ಚಟುವಟಿಕೆ ನಡೆಸುವವರಿಗೆ ಇದೊಂದು ಪಾಠವಾಗಬೇಕು. ಸಮಾಜದಲ್ಲಿ ಯಾರೂ ವಿದ್ವಂಸಕ ಕೃತ್ಯ ಮಾಡಬಾರದು. ಸರ್ಕಾರವು ಕೂಡ ಕಾಲಕಾಲಕ್ಕೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕು‌ ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಇಂತಹ ಶಕ್ತಿಗಳು ಮರುಹುಟ್ಟು ಪಡೆಯದಂತೆ ನೋಡಿಕೊಳ್ಳಬೇಕು. ಸಮಾಜ ಮತ್ತು ರಾಜಕೀಯ ಪಕ್ಷಗಳು ಇಂತಹ ಸಂಘಟನೆಗಳಿಗೆ ಪ್ರೋತ್ಸಾಹ ನೀಡಬಾರದು. ಇಂತಹ ದುಷ್ಕೃತ್ಯ ಮಾಡುವವರನ್ನು ಆರಂಭದಲ್ಲೇ ಚಿವುಟಬೇಕು. ಆಗಷ್ಟೇ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಸ್ವಾಮೀಜಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | PFI Banned | ಪಿಎಫ್‌ಐ ಬ್ಯಾಂಕ್‌ ಖಾತೆ ತಡೆಹಿಡಿದ ಕೇಂದ್ರ ಸರ್ಕಾರ

Exit mobile version