Site icon Vistara News

PFI BANNED | ಮಂಗಳೂರು, ಹಾಸನದಲ್ಲಿ ಪಿಎಫ್‌ಐ ಕಚೇರಿಗಳಿಗೆ ಬೀಗ, ಉಳಿದ ಕಡೆಯಲ್ಲೂ ಸೀಜ್‌ಗೆ ಪ್ಲ್ಯಾನ್‌

Hasan PFI office

ಹಾಸನ/ಮಂಗಳೂರು: ಪಾಪ್ಯುಲರ್‌ ಫ್ರಂಟ್‌ ಸಂಘಟನೆಯ ನಿಷೇಧದ ಹಿನ್ನೆಲೆಯಲ್ಲಿ ಹಾಸನ ಮತ್ತು ಮಂಗಳೂರಿನಲ್ಲಿ ಪಿಎಫ್‌ಐ ಕಚೇರಿಗಳಿಗೆ ಬೀಗ ಜಡಿಯಲಾಗಿದೆ. ಪೊಲೀಸರು ಸ್ಥಳೀಯ ಅಧಿಕಾರಿಗಳ ಸಮ್ಮುಖದಲ್ಲಿ ಕಚೇರಿಗಳಲ್ಲಿ ತಪಾಸಣೆ ನಡೆಸಿ, ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ಬಳಿಕ ಬಾಗಿಲಿಗೆ ಬೀಗ ಜಡಿದು ಸೀಲು ಮಾಡಿದರು. ಬಳಿಕ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಬಾಗಿಲಿಗೆ ಬೀ ಹಾಕಿದರು.

ಮಂಗಳೂರಿನಲ್ಲಿ ಬಿಗಿ ಭದ್ರತೆಯಡಿ ಕಾರ್ಯಾಚರಣೆ
ಮಂಗಳೂರಿನ ಸ್ಟೇಟ್‌ ಬ್ಯಾಂಕ್‌ ಸಮೀಪದ ನೆಲ್ಲಿಕಾಯಿ ಮಠ ರಸ್ತೆಯಲ್ಲಿರುವ ಪಿಎಫ್‌ಐ ಕಚೇರಿ ಸುತ್ತ ಮುತ್ತ ಬೆಳಗಿನಿಂದಲೇ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದರ ನಡುವೆಯೇ ಕಚೇರಿಗೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಪರಿಶೀಲನೆ ನಡೆಸಿದರು.

ನಿಜವೆಂದರೆ, ಕಳೆದ ಎರಡು ದಿನಗಳಿಂದಲೇ ಇಲ್ಲಿನ ಪಿಎಫ್‌ಐ ಕಚೇರಿಗೆ ಬೀಗ ಹಾಕಲಾಗಿದೆ. ಪೊಲೀಸರು ಬೀಗ ಒಡೆದು ಒಳ ಪ್ರವೇಶಿಸಿ ತಪಾಸಣೆ ನಡೆಸಿದರು. ಅಲ್ಲಿನ ಕೆಲವು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಬೀಗ ಹಾಕಿದರು.

ಕೇಂದ್ರ ಸರ್ಕಾರ ಪಿಎಫ್ಐ ಹಾಗೂ ಸಹ ಸಂಘಟನೆಗಳನ್ನು ಬ್ಯಾನ್ ಮಾಡಿದೆಸರ್ಕಾರ ಬ್ಯಾನ್ ಮಾಡಿರುವ ಸಂಘಟನೆಗಳ ಕಚೇರಿಗಳಿಗೆ ಬೀಗ ಹಾಕಿ ಸೀಲ್‌ ಮಾಡಲು ಸೂಚನೆ ನೀಡಿದ್ದರಿಂದ ಮಂಗಳೂರು ನಗರದ ಮೂರು ಉಪವಿಭಾಗದಲ್ಲಿ ಕಾರ್ಯಾಚರಣೆ ನಡೆಯಿತು. ಸಂಘಟನೆ ಮತ್ತು ಸಹ ಸಂಘಟನೆಗಳ ಕಚೇರಿಗಳಿಗೂ ಬೀಗ ಹಾಕಲಾಗಿದೆ.

ಈ ನಡುವೆ ರಾಜ್ಯದ ಇತರ ಭಾಗಗಳಲ್ಲಿರುವ ಪಿಎಫ್‌ಐ ಮತ್ತು ಸಹ ಸಂಘಟನೆಗಳ ಕಚೇರಿಗಳಿಗೂ ಪೊಲೀಸರು ಭೇಟಿ ನೀಡಿ ಬೀಗ ಜಡಿಯಲಿದ್ದಾರೆ.

ಕಚೇರಿಗಳನ್ನು ಮುಚ್ಚುವುದು ನಿಷೇಧ ಪ್ರಕ್ರಿಯೆಯ ಒಂದು ಭಾಗವಾಗಿದ್ದು, ಮುಂದೆ ಪಿಎಫ್‌ಐ ಮತ್ತು ಸಹ ಸಂಘಟನೆಗಳ ಅಕೌಂಟ್‌ಗಳನ್ನು ಸೀಜ್‌ ಮಾಡುವ ಪ್ರಕ್ರಿಯೆ ನಡೆಯಲಿದೆ. ಅಗತ್ಯಬಿದ್ದರೆ ಕೆಲವರ ಬಂಧನವೂ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ | PFI Banned | ಉಗ್ರ ಸಂಘಟನೆಗಳನ್ನು ಬ್ಯಾನ್‌ ಮಾಡಿದರೆ ಸಾಲದು, ಪಕ್ಷಗಳು ರಾಜಕೀಯ ಲೆಕ್ಕಾಚಾರ ಬಿಡಬೇಕು

Exit mobile version