Site icon Vistara News

PFI BANNED | ನವರಾತ್ರಿ ಟೈಮಲ್ಲೇ ಬ್ಯಾನ್‌ ಮಾಡಿದ್ದು ಹೆಚ್ಚು ಖುಷಿ, ಮುಸ್ಲಿಮರು ಇನ್ನಾದರೂ ಪಾಠ ಕಲಿಯಲಿ ಎಂದ ಮುತಾಲಿಕ್‌

pramod muthalik

ಧಾರವಾಡ: ಪಿಎಫ್‌ಐ ಸಂಘಟನೆಯನ್ನು ಬ್ಯಾನ್‌ ಮಾಡಿದ್ದು ಖುಷಿಯಾಗಿದೆ. ನವರಾತ್ರಿಯ ಸಂದರ್ಭದಲ್ಲೇ ಬ್ಯಾನ್‌ ಮಾಡಿದ್ದು ಇನ್ನೂ ಹೆಚ್ಚು ಖುಷಿಯಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಪಿಎಫ್‌ಐ ಬ್ಯಾನ್‌ಗೆ ಪ್ರತಿಕ್ರಿಯಿಸಿದ ಅವರು, ʻʻದೇಶದ ಸುರಕ್ಷತೆ ದೃಷ್ಟಿಯಿಂದ ಬ್ಯಾನ್ ಮಾಡಲಾಗಿದೆ. ಕಳೆದ 15 ವರ್ಷಗಳಿಂದಲೇ ನಾವು ನಿಷೇಧಕ್ಕೆ ಬೇಡಿಕೆ ಮುಂದಿಡುತ್ತಿದ್ದೆವು. ಇವತ್ತು ಅದು ಈಡೇರಿದೆ. ದೇಶಕ್ಕೆ ಆತಂಕಕಾರಿಯಾಗಿರುವ ಪಿಎಫ್ಐನ್ನು ಮೊದಲೇ ಬ್ಯಾನ್ ಮಾಡಬೇಕಿತ್ತು. ಆದ್ರೂ ಕೂಡ ತಡವಾದರೂ ಬ್ಯಾನ್ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಆಗುವ ಅನಾಹುತ ಹಾಗೂ ಗಂಡಾಂತರ ತಪ್ಪಿದೆʼʼ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ʻʻಮುಸ್ಲಿಂ ಸಮಾಜ ಇದರಿಂದ ಪಾಠ ಕಲಿಯಬೇಕಾಗಿದೆ. ಮುಸ್ಲಿಂನ ಹಿರಿಯರು ತಮ್ಮ ತಮ್ಮ ಯುವಕರು ಯಾವ ರೀತಿ ತಪ್ಪು ದಾರಿ ಹಿಡಿದಿದ್ದಾರೆ ಅನ್ನುವುದನ್ನು ಗಮನಿಸಬೇಕು.. ತಪ್ಪು ದಾರಿಯಲ್ಲಿ ಹೊರಟರೆ ಅಂತವರನ್ನ ಕೂಡಲೇ ಪೊಲೀಸ್ ಗಮನಕ್ಕೆ ತರಬೇಕು. ಇನ್ನಾದರೂ ಅವರು ಪಾಠ ಕಲಿಯಬೇಕುʼʼ ಎಂದ ಮುತಾಲಿಕ್‌, ʻʻಈ ದೇಶದಲ್ಲಿ ಹುಟ್ಟಿ ಈ ದೇಶದ ಅನ್ನ ತಿಂದು ಈ ದೇಶಕ್ಕೆ ಬದ್ಧವಾಗಿರಬೇಕು ವಿನಃ ಪಾಕಿಸ್ತಾನಕ್ಕೆ ಬದ್ಧತೆಯನ್ನು ತೋರಿಸುವುದು, ಇಸ್ಲಾಂ ರಾಷ್ಟ್ರ ಮಾಡುವ ಕನಸು ಕಾಣಬಾರದು. ಈ ರೀತಿಯ ವಿಕೃತಿ ಮನಸ್ಥಿತಿ ಹೊಂದಿದ ಯುವಕರನ್ನು ತಡೆಯುವ ಪ್ರಕ್ರಿಯೆ ಮುಸ್ಲಿಂ ಸಮಾಜದ ಮುಖಂಡರೆ ಮಾಡಬೇಕುʼʼ ಎಂದು ಹೇಳಿದರು.

ʻʻಬದಲಾವಣೆ ಮಾಡುವ ಪ್ರಕ್ರಿಯೆ ಮದರಸಾಗಳಲ್ಲೂ ಆಗಬೇಕುʼʼ ಎಂದು ಅವರು ಹೇಳಿದರು.

PFI BANNED | ದೇಶ ವಿಭಜಕ ಶಕ್ತಿಗಳ ನಿಷೇಧದಲ್ಲಿ ರಾಜಕಾರಣ ಬೇಡ; ಸಿ.ಟಿ ರವಿ

Exit mobile version