ಮಂಗಳೂರು: ಇಲ್ಲಿನ ಮಂಗಳೂರು ಏರ್‌ಪೋರ್ಟ್‌ನಲ್ಲಿ ಎನ್‌ಐಎ ಅಧಿಕಾರಿಗಳು ನಿಷೇಧಿತ ಪಿಎಫ್‌ಐ ಸಂಘಟನೆಯ ಮುಖಂಡನನ್ನು ವಶಕ್ಕೆ (PFI BANNED) ಪಡೆದಿದ್ದಾರೆ. ಕಳೆದ ಅಕ್ಟೋಬರ್ 27ರಂದು ಬಂಧಿತನಾಗಿದ್ದ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು ನಿವಾಸಿ ಷರತ್ತುಬದ್ಧ ಜಾಮೀನು ಪಡೆದಿದ್ದರು.
ಈ ಮಧ್ಯೆ ಭಾನುವಾರ (ನ.20) ದುಬೈಗೆ ಹಾರಲು ಯತ್ನಿಸಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್‌ಐಎ ತಂಡ ಮಂಗಳೂರು ಏರ್‌ಪೋರ್ಟ್‌ನಲ್ಲೇ ಪಿಎಫ್‌ಐ ಮುಖಂಡನನ್ನು ವಶಕ್ಕೆ ಪಡೆದುಕೊಂಡಿದೆ. ಪಿಎಫ್ಐ ಬ್ಯಾನ್ ವೇಳೆ ಜಿಲ್ಲೆಯಲ್ಲಿ ಹಲವು ಪಿಎಫ್ಐ ಮುಖಂಡರು ಬಂಧಿತರಾಗಿದ್ದರು. ಹತ್ತು ದಿನಗಳ ಬಳಿಕ ಜಾಮೀನಿನ ಮೇಲೆ ರಿಲೀಸ್ ಆಗಿದ್ದರು.
ಪಿಎಫ್‌ಐ ಸಂಘಟನೆಯನ್ನು ನಿಷೇಧ (PFI BANNED) ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿತ್ತು. ಹೀಗಾಗಿ ದೇಶಾದ್ಯಂತ ಎನ್‌ಐಎ ಹಾಗೂ ಸ್ಥಳೀಯ ಪೊಲೀಸರು ಪಿಎಫ್‌ಐ ಸಂಘಟನೆಯ ಅಧ್ಯಕ್ಷರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು. ಇದೀಗ ಈಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ವ್ಯಕ್ತಿ ದುಬೈಗೆ ಹೋಗಲು ಯತ್ನಿಸಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | ಕೆ.ಜಿ ಹಳ್ಳಿ ಪ್ರಕರಣ | ತಿಂಗಳು ಕಳೆದರೂ ಪತ್ತೆಯಾಗದ ನಾಲ್ವರು ಪಿಎಫ್‌ಐ ಆರೋಪಿಗಳು