ಬೆಂಗಳೂರು: ನಿಷೇಧಿತ ಪಿಎಫ್‌ಐ ಸಂಘಟನೆ ಉಗ್ರ ಚಟುವಟಿಕೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಐದು ರಾಜ್ಯಗಳ 14 ಕಡೆ ಏಕಕಾಲಕ್ಕೆ ದಾಳಿ (NIA Raid) ನಡೆಸಿ ಪರಿಶೀಲನೆ ನಡೆಸಿದ್ದಾರೆ.
ನಿಷೇಧಿತ ಮೂಲಭೂತವಾಡಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಭಾರತವನ್ನು 2047ರ ಹೊತ್ತಿಗೆ ಇಸ್ಲಾಮಿಕ್ ರಾಷ್ಟ್ರವಾಗಿ ಬದಲಿಸಲು ಪಣತೊಟ್ಟಿತ್ತು ಎಂಬ ಅಂಶ ತನಿಖೆ ವೇಳೆ ಬಂದಿತ್ತು. ಈ ನಿಟ್ಟಿನಲ್ಲಿ ಪಿಎಫ್‌ಐ ಆರ್ಮಿ ಸ್ಥಾಪಿಸಲು ಯುವಕರಿಗೆ ಪ್ರೋತ್ಸಾಹ ನೀಡಿ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿದ್ದರಿಂದ ಎನ್‌ಐಎ ದಾಳಿ ನಡೆಸಿದೆ.
ಈ ಹಿಂದೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಕೆಲ ಪಿಎಫ್‌ಐ ಏಜೆಂಟರನ್ನು ಎನ್‌ಐಎ ಬಂಧಿಸಿತ್ತು. ಕರ್ನಾಟಕ ದಕ್ಷಿಣ ಕನ್ನಡ ಸೇರಿ ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ ಹಾಗೂ ಇತರ ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು. ಈ ಹಿಂದೆ ಪಿಎಫ್‌ಐನ 19 ಜನರ ವಿರುದ್ಧ ಎನ್‌ಐಎ ಚಾರ್ಚ್ ಶೀಟ್ ಸಲ್ಲಿಕೆ ಮಾಡಿತ್ತು.
ಇದನ್ನೂ ಓದಿ | Krishna river : ಪುಣ್ಯ ಸ್ನಾನ ಮಾಡಲು ಹೋದ ಯುವಕ ನೀರುಪಾಲು
ಪುಟ್ಟ ಮಗನನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ; ಅವಳಿಗಿತ್ತು ಅದೊಂದು ನೋವು
ಆನೇಕಲ್: ತಾಯಿಯೊಬ್ಬಳು ತನ್ನ ಪುಟ್ಟ ಮಗನನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಪ್ರಾಣ (mother and son death) ಕಳೆದುಕೊಂಡ ದಾರುಣ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯಲಕ್ಷ್ಮಿ (35) ಎಂಬವರೇ ತನ್ನ ಏಳು ವರ್ಷದ ಮಗ ಹರಿಹರನ್‌ನ್ನು ಸೊಂಟಕ್ಕೆ ಕಟ್ಟಿಕೊಂಡು ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಸಕಲವಾರ ಕೆರೆಗೆ (sakalavara pond) ಹಾರಿ ಪ್ರಾಣ ಕಳೆದುಕೊಂಡವರು. ಇವರು ಸಿ.ಕೆ. ಪಾಳ್ಯದ ನಿವಾಸಿಗಳು.
ವಿಜಯಲಕ್ಷ್ಮಿ ಅವರ ಕುಟುಂಬ ಮೂಲತಃ ಆಂಧ್ರ ಮೂಲದ್ದು. ಈ ಕುಟುಂಬ ಕೆಲವು ವರ್ಷಗಳಿಂದ ಸಿಕೆ ಪಾಳ್ಯದಲ್ಲಿ ವಾಸವಗಿತ್ತು. ಎರಡು ವರ್ಷದ ಹಿಂದೆ ವಿಜಯಲಕ್ಷ್ಮಿ ಅವರ ಪತಿ ಅಪಘಾತದಲ್ಲಿ ಮೃತಪಟ್ಟಿದ್ದರು. ಗಂಡನ ಸಾವಿನ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯ ಬದುಕಿನಲ್ಲಿ ಸಂಕಷ್ಟಗಳ ಸರಮಾಲೆಯೇ ಎದುರಾಗಿತ್ತು.
ಪತಿಯ ಸಾವೇ ಇವರಿಗೆ ಮುಳುವಾಯಿತು
ನಿಜವೆಂದರೆ ಅವರ ಪತಿ ತೀರಿಕೊಂಡು ಆಗಸ್ಟ್ 13ಕ್ಕೆ ಸರಿಯಾಗಿ ಎರಡು ವರ್ಷ ಆಗುತ್ತಿದೆ. ಪತಿ ತೀರಿಕೊಂಡ ದಿನವೇ ಮಗುವಿನ ಜೊತೆಗೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅವರು ಯಾವ ಮಟ್ಟದ ಸಮಸ್ಯೆಯಲ್ಲಿ ಇದ್ದರು ಎನ್ನುವುದನ್ನು ತೋರಿಸುತ್ತದೆ. ಆರ್ಥಿಕ ಮತ್ತು ಮಾನಸಿಕವಾಗಿ ಕುಗ್ಗಿದ್ದ ಅವರು ಏಳು ವರ್ಷದ ಮಗನನ್ನು ಮುಂದೆ ಸಾಕುವುದು ಹೇಗೆ ಎಂಬ ನೋವಿನಲ್ಲೇ ಇದ್ದು ಅದರಿಂದ ಮುಕ್ತಿ ಹೊಂದಲು ಸಾವಿನ ದಾರಿ ಹಿಡಿದರೇ ಎಂಬ ಸಂಶಯ ಎದುರಾಗಿದೆ.
ಸ್ಥಳಕ್ಕೆ ಬನ್ನೇರುಘಟ್ಟ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತ ದೇಹವನ್ನ ಹೊರತೆಗೆಯುವ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ | Students Drown: ಗೋ ಕಟ್ಟೆಯಲ್ಲಿ ಮುಳುಗಿ ನಾಲ್ವರ ಸಾವು; ರೀಲ್ಸ್ ಹುಚ್ಚಿಗೆ ನಡೆಯಿತು ದುರಂತ
ಮಗು ಬದುಕಿ ಉಳಿದರೆ ಎಂಬ ಭಯದಿಂದ ಕಟ್ಟಿಕೊಂಡಿದ್ದರು
ಇತ್ತೀಚಿನ ಕೆಲವು ಆತ್ಮಹತ್ಯೆ ಪ್ರಕರಣಗಳಲ್ಲಿ ತಾಯಿ ಮತ್ತು ಮಕ್ಕಳು ಜತೆಯಾಗಿ ನೀರಿಗೆ ಹಾರಿದಾಗ ಏನೂ ಅರಿಯದ ಮಕ್ಕಳು ನೀರಿನಲ್ಲಿ ಮುಳುಗೇಳುತ್ತಾ ಕೊನೆಗೆ ಕೆರೆಯಿಂದ ಮೇಲೆದ್ದು ಬಂದ ಉದಾಹರಣೆಗಳಿವೆ. ಆದರೆ ಇಲ್ಲಿ ಮಗು ತನ್ನ ಜತೆಗೇ ಸಾಯಬೇಕು, ಒಂದು ವೇಳೆ ಬದುಕುಳಿದರೆ ಅವನಿಗೆ ಯಾರು ದಿಕ್ಕು ಎಂದು ಯೋಚಿಸಿದ ಈ ತಾಯಿ ಅವನನ್ನು ಸೊಂಟಕ್ಕೆ ಕಟ್ಟಿಕೊಂಡೇ ಹಾರಿದ್ದಾಳೆ. ತಾನು ಹೇಗಿದ್ದರೂ ಮುಳುಗುತ್ತೇನೆ, ಎಷ್ಟೇ ಕಷ್ಟವಾದರೂ ಮರಳಿ ಬದುಕುವ ಪ್ರಯತ್ನ ಮಾಡುವುದಿಲ್ಲ. ಹೀಗಾಗಿ ಮಗುವೂ ತನ್ನೊಂದಿಗೆ ಸತ್ತು ಹೋಗಲೇಬೇಕು ಎಂದು ಆಕೆ ತೀರ್ಮಾನಿಸಿದಂತಿದೆ.