ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2023ನೇ ಸಾಲಿನ ಸ್ನಾತಕೋತ್ತರ ಸಾಮಾನ್ಯ ಪರೀಕ್ಷೆ (PGCET)ಯ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿದೆ. ಎಂಟೆಕ್, ಎಂಬಿಎ ಮತ್ತು ಎಂಸಿಎ ಕೋರ್ಸ್ಗಳ ಕೀ ಉತ್ತರ ಪ್ರತ್ಯೇಕವಾಗಿ ಪಿಡಿಎಫ್ (PDF) ರೂಪದಲ್ಲಿ ಲಭ್ಯ.
ಸೆಪ್ಟಂಬರ್ 23 ಮತ್ತು 24ರಂದು ಕೆಪಿಸಿಎ ಪರೀಕ್ಷೆ ಆಯೋಜಿಸಲಾಗಿತ್ತು. ಸುಮಾರು 40 ಸಾವಿರ ಮಂದಿ ಪರೀಕ್ಷೆ ಎದುರಿಸಿದ್ದರು. ಪರೀಕ್ಷೆಯ ಫಲಿತಾಂಶ ಈ ತಿಂಗಳ ಕೊನೆಯಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ಅರ್ಹ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸೆಲಿಂಗ್ ನಡೆಸಲಿದೆ. ಕರ್ನಾಟಕ ಪಿಜಿಸಿಇಟಿ ಅಂತಿಮ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಯಾವುದೇ ಲಾಗಿನ್ ರುಜುವಾತುಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಅಂತಿಮ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ವಿಧಾನ
- ಕೆಇಎ ಅಧಿಕೃತ ಪೋರ್ಟಲ್ kea.kar.nic.in, cetonline.karnataka.gov.inಗೆ ಭೇಟಿ ನೀಡಿ
- ಪಿಜಿಸಿಇಟಿ 2023 ಅಂತಿಮ ಕೀ ಉತ್ತರ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಉತ್ತರ ಕೀ ಪುಟ ತೆರೆದುಕೊಳ್ಳುತ್ತದೆ
- ಈಗ ಎಂಬಿಎ/ಎಂಸಿಎ/ಎಂಟೆಕ್ ಕೋರ್ಸ್ಗಳ ಪಿಡಿಎಫ್ ಪ್ರತಿ ಕಾಣಿಸಿಕೊಳ್ಳುತ್ತದೆ
- ಬೇಕಾದ ಕೋರ್ಸ್ ಮೇಲೆ ಕ್ಲಿಕ್ ಮಾಡಿದರೆ ಪುಟ ತೆರೆದುಕೊಳ್ಳುತ್ತದೆ
- ಈ ಉತ್ತರ ಕೀಯನ್ನು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ
ಇದನ್ನೂ ಓದಿ: KEA Exam: ಮುಸ್ಲಿಂ ಮುಖಂಡರ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ಸರ್ಕಾರ, ಹಿಜಾಬ್ ಧರಿಸಿ ಪರೀಕ್ಷೆ ಬರೆಯಬಹುದು!