ಬೆಂಗಳೂರು: ರಾಜ್ಯ ಸರ್ಕಾರ ಫೋನ್ ಟ್ಯಾಪಿಂಗ್ (Phone Tapping) ಮಾಡುತ್ತಿದೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಪೋನ್ ಕದ್ದಾಲಿಕೆ ಸರ್ಕಾರ ಮಾಡಿಲ್ಲ. ಅಂಥ ಮುಟ್ಟಾಳ್ ಕೆಲಸ ನಮ್ಮ ಸರ್ಕಾರ ಮಾಡಲ್ಲ. ಫೋನ್ ಕದ್ದಾಲಿಸಲು ಅವರೇನು ಭಯೋತ್ಪಾದಕರಾ? ಅವರು ನಮ್ಮ ನಾಯಕರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರೇವಣ್ಣ-ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಸರ್ಕಾರ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ನಗರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ಸಿಡಿ ಶಿವು ಎಂಬ ಎಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೂ ಅದಕ್ಕೂ ಯಾವುದೇ ತರಹದ ಸಂಬಂಧವಿಲ್ಲ. ಅದಕ್ಕೆ ಉತ್ತರ ಕೊಡುವ ಸಂದರ್ಭ ಇಲ್ಲ. ನನ್ನ ಹೆಸರು ಹೇಳಲಿಲ್ಲ ಅಂದ್ರೆ ಎಂದರೆ ಅವರಿಗೆ ನಿದ್ದೆ ಬರುವುದಿಲ್ಲ. ಮಾಧ್ಯಮಗಳು ಎಥಿಕ್ಸ್ ಬಿಟ್ಟು ಅನೇಕ ವಿಚಾರಗಳು ಚರ್ಚೆ ಮಾಡುತ್ತೀದ್ದೀರಿ, ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಅವರು ಹೇಳಿದ್ದಾರೆ. ಕಾನೂನು ಇದೆ, ಕಾನೂನು ಪ್ರಕಾರ ನಡೆಯುತ್ತದೆ. ಅವರು ಏನು ಬೇಕಾದರೂ ಹೇಳಲಿ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Prajwal Revanna Case: ನಾನು ಸೇರಿ ಸುಮಾರು 30 ಜನರ ಫೋನ್ ಟ್ಯಾಪ್: ಸರ್ಕಾರದ ವಿರುದ್ಧ ಎಚ್‌ಡಿಕೆ ಬಾಂಬ್!
ದೇವರಾಜೇಗೌಡ- ಶಿವರಾಮೇಗೌಡ ಆಡಿಯೊ ಲೀಕ್ ವಿಚಾರಕ್ಕೆ ಸ್ಪಂದಿಸಿ, ನಮಗೆ ಸಂಬಂಧವಿಲ್ಲ, ನೀವು ಉಂಟು ಅವರುಂಟು. ನೀವು ಮಾತನಾಡಬಹುದು, ನಾನು ಯಾರ ಬಳಿಯೂ ಮಾತನಾಡಿಲ್ಲ. ನಾನು ಯಾರಿಗೂ ಜಿಪಿಎ ಕೊಟ್ಟಿಲ್ಲ. ನಾನು ರಾಜಕಾರಣಿ, ನೂರಾರು ಜನ ಬಿಜೆಪಿ, ದಳ, ಸಾರ್ವಜನಿಕರು, ಅಧಿಕಾರಿಗಳು ಭೇಟಿ ಮಾಡಲು ಬರುತ್ತಾರೆ. ಏನೇನು ಮಾಹಿತಿ ಕೊಡಬೇಕು ಎಂದು ಬರುತ್ತಾರೆ. ಅವರು ಬಿಜೆಪಿಯವರು (ದೇವರಾಜೇಗೌಡ) ಭೇಟಿ ಮಾಡಲು ಸಮಯ ಕೇಳಿದ್ದರು. ನಾನು ಸಮಯ ಕೊಡಲಿಲ್ಲ, ಬಂದರೂ ಒಂದು ನಿಮಿಷ ಯಾರದೋ ಹತ್ತಿರ ಮಾತನಾಡಿದ್ರು, ನಾನು ಒಂದು ನಿಮಿಷವೂ ಮಾತನಾಡಿಲ್ಲ. ನನಗೂ ರಾಜಕೀಯ, ವ್ಯವಹಾರಿಕ ಪ್ರಜ್ಞೆ ಇದೆ. ಅದನ್ನು ಇನ್ನೊಂದು ಸಾರಿ ಆ ಸುದ್ದಿನ ನನ್ನ ಬಳಿ ಕೇಳಬೇಡಿ ಎಂದು ಹೇಳಿದರು.
ತಿಹಾರ್ ಜೈಲಿಗೆ ಹೋದಾಗ ತಾಯಿಗೆ ಸಾಂತ್ವನ ಹೇಳಿದ್ದೆ ಎಂಬ ಎಚ್‌ಡಿಕೆ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ಸಾರಿ ಅವರ ಪರಿಸ್ಥಿತಿ ನೋಡಿ ಅಯ್ಯೋ ಅನ್ನಿಸುತ್ತಿದೆ. ನಾನು ಅವತ್ತು ಹೇಳಿದ್ದೇನೆ, ಇವತ್ತೂ ಹೇಳ್ತೀನಿ, ಮುಂದಕ್ಕೂ ಹೇಳ್ತೀನಿ ಎಂದರು.
ಒಂದು ವರ್ಷ ಸರ್ಕಾರ ಐಸಿಯುನಲ್ಲಿತ್ತು ಎಂಬ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ಏನಾಯ್ತು ಅಂತ ಜನ ಹೇಳಬೇಕು, ನಾಯಕರು ಹೇಳೋದಲ್ಲ. ಹೆಣ್ಣು ಮಕ್ಕಳು ಬದುಕಿನಲ್ಲಿ ಬದಲಾವಣೆ ಯಾವ ಮಟ್ಟಕ್ಕೆ ಆಗಿದೆ ಅಂತ ತಾಯಂದಿರು ಹೇಳಬೇಕು. ಎಲೆಕ್ಷನ್‌ಗೂ ಮುಂಚೆ ಕುಮಾರಸ್ವಾಮಿಯವರೇ ನುಡಿಮುತ್ತು ಹೇಳಿದ್ರಲ್ಲ. ಅವರ ನುಡಿಮುತ್ತುಗಳು ಅವರ ಪಾರ್ಟಿಯ ನುಡಿಮುತ್ತುಗಳು ನಿಮ್ಮ ಹತ್ತಿರ ದಾಖಲೆ ಇದೆಯಲ್ಲ. ನಮ್ಮ ಬಗ್ಗೆ ಅವರು ಹೇಳಲೇಬೇಕು, ನಮ್ಮ ಬಗ್ಗೆ ಶಹಬ್ಬಾಷ್ ಗಿರಿ ಕೊಡಿ ಅಂತ ಕೇಳಕ್ಕಾಗಲ್ಲ, ಕೇಳೋದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | HD Revanna: ರೇವಣ್ಣಗೆ ಜಾಮೀನು ಸಿಕ್ಕರೂ ಸಿಗದ ರಿಲೀಫ್; ಎಸ್‌ಐಟಿಯಿಂದ ಹೈಕೋರ್ಟ್ ಮೊರೆ
ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ನಿಮ್ಮೆಲ್ಲರ ಸಹಕಾರ, ಜನರಿಗೆ ಬಹಳ ತೃಪ್ತಿಕರವಾಗಿ ಸರ್ಕಾರ ನಡೆಸಿದ್ದೇವೆ. ಬರೀ ಗ್ಯಾರಂಟಿ ಒಂದೇ ಅಲ್ಲ, ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡಿಗಲ್ಲು ಹಾಕಿದ್ದೇವೆ. ಎಲೆಕ್ಷನ್ ಮತ್ತೆ ಬಂತು, ಮುಂದೆ ಅವನ್ನು ಕಾರ್ಯರೂಪಕ್ಕೆ ತರಲು ಸಜ್ಜಾಗಿದ್ದೇವೆ. ಸಿಎಂ ಸಹ ಮೊನ್ನೆ ಸಭೆ ನಡೆಸಿ, ಟೆಂಡರ್ ಕರೆಯಲು ಹೇಳಿದ್ದಾರೆ ಎಂದು ತಿಳಿಸಿದರು.