Site icon Vistara News

B S Yediyurappa: ಬಿ.ಎಸ್‌.ಯಡಿಯೂರಪ್ಪ ಕೊನೇ ಅಧಿವೇಶನ; ವಿಧಾನಸೌಧದಲ್ಲಿ ಫೋಟೊ ಸೆಷನ್

Photo session with BS Yediyurappa at Vidhana Soudha

#image_title

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (B S Yediyurappa) ಅವರ ಕೊನೇ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧ ಆವರಣದಲ್ಲಿ ಸೋಮವಾರ, 15ನೇ ವಿಧಾನಸಭೆಯ 2018 ರಿಂದ 2023ರ ಅವಧಿಯ ಶಾಸಕರ ಗ್ರೂಪ್ ಫೋಟೊ ಸೆಷನ್ ನಡೆಸಲಾಯಿತು.‌ ಗ್ರೂಪ್‌ ಫೋಟೊ ಬಳಿಕ ಬಿ.ಎಸ್‌.ವೈ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಡಳಿತ ಹಾಗೂ ವಿರೋಧ ಪಕ್ಷಗಳ ಜನಪ್ರತಿನಿಧಿಗಳು ಶುಭ ಕೋರಿದರು.

ಗ್ರೂಪ್ ಫೋಟೊ ತೆಗೆಸಿಕೊಂಡ ಬಳಿಕ ಮಾತನಾಡಿದ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು, ಎಲ್ಲಾ ವಿಚಾರಗಳನ್ನು ಈ ಸದನದಲ್ಲಿ ಪ್ರಾಮಾಣಿಕವಾಗಿ ಚರ್ಚೆ ಮಾಡುವ ಪ್ರಯತ್ನ ಮಾಡಿದ್ದೇವೆ. ಸಿಎಂ ಬೊಮ್ಮಾಯಿ ಒಳ್ಳೆಯ ಬಜೆಟ್ ಕೂಡ ಮಂಡನೆ ಮಾಡಿದ್ದಾರೆ. ಅದರ‌ ಆಧಾರದಲ್ಲಿ ಚರ್ಚೆಯಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ನಾವು ಗೆದ್ದೆ ಗೆಲ್ಲುತ್ತೇವೆ. ಬಿಜೆಪಿ ಪರವಾದ ವಾತವಾರಣವಿದೆ ಎಂದು ಹೇಳಿದರು.

ಯುವಕರು ಚುನಾವಣೆಗೆ ನಿಂತು ಗೆದ್ದು ಬರಬೇಕು: ಬಿಎಸ್‌ವೈ

ನಮಗೆ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕರಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವುದೇ ನಾಯಕರಿಲ್ಲ. ನೂರಕ್ಕೆ ನೂರರಷ್ಟು ನಾವು ಬಹುಮತದಿಂದ ಸರ್ಕಾರ ರಚಿಸುತ್ತೇವೆ ಎಂದ ಅವರು, ಇದು ನನ್ನ ಕೊನೇ ಅಧಿವೇಶನ. ಸಾಕಷ್ಟು ವರ್ಷದಿಂದ ವಿಧಾನಮಂಡಲದಲ್ಲಿ ಕೆಲಸ ಮಾಡಿದ್ದೇನೆ. ಇದು ಸಮಾಧಾನ, ತೃಪ್ತಿ ತಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಆಯ್ಕೆಯಾಗಿ ಬರಬೇಕು ಎಂಬ ಆಶಯವಿದೆ. ರಾಜ್ಯವನ್ನು ಆಳುವ ಶಕ್ತಿ ಯುವಕರಿಗೆ ಬರಬೇಕು. ಚುನಾವಣೆಗೆ ನಿಂತು ಯುವಕರು ಗೆದ್ದು ಬರಬೇಕು. ಯುವಕರಿಗೆ ಒಳ್ಳೆಯದಾಗಲಿ ಎಂದು ಶುಭ ಕೋರುವುದಾಗಿ ತಿಳಿಸಿದರು.

ಇದನ್ನೂ ಓದಿ | Karnataka Election: ಎಲ್ಲ ಪಕ್ಷಗಳಲ್ಲಿ ಕುಟುಂಬ ರಾಜಕಾರಣವಿದೆ, ಆದ್ರೆ ಬಿಜೆಪಿಗೆ ಕಾರ್ಯಕರ್ತರೇ ಕುಟುಂಬ: ಜೆ.ಪಿ.ನಡ್ಡಾ

Exit mobile version