Site icon Vistara News

Heart attack | ಫೋಟೊ ಕ್ಲಿಕ್‌ ಮಾಡುವಾಗಲೇ ಜೀವ ಹಿಂಡಿದ ಹೃದಯ; ಫೋಟೊಗ್ರಾಫರ್‌ ಕುಸಿದುಬಿದ್ದು ಸಾವು

heart attack photographer death

ಸಾಗರ: ನಗರದ ವೃತ್ತಿನಿರತ ಫೋಟೊಗ್ರಾಫರ್ ಒಬ್ಬರು ಕಾರ್ಯಕ್ರಮವೊಂದರಲ್ಲಿ ಫೋಟೊ ತೆಗೆಯುತ್ತಿರುವಾಗಲೇ ಹೃದಯಾಘಾತದಿಂದ (Heart attack) ಕುಸಿದುಬಿದ್ದು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.

ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ಹೆಬ್ಬೈಲಿನ ಸೋಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಇಲ್ಲಿನ ರಾಮನಗರದ ನಿವಾಸಿ ಚಂದ್ರು(42) ಮೃತ ಪಟ್ಟ ದುರ್ದೈವಿ.

ಕಾರ್ಯಕ್ರಮದಲ್ಲಿ ಫೋಟೊ ತೆಗೆಯುವ ವೇಳೆ ಚಂದ್ರು ಕುಸಿದು ಬಿದ್ದರು. ತಕ್ಷಣ ಅವರನ್ನು ನಗರದ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತಾದರೂ ಆ ವೇಳೆಗೆ ಕೊನೆಯುಸಿರೆಳೆದಿದ್ದರು. ನಗರದ ಶಿಲ್ಪ ಸ್ಟುಡಿಯೋ ಮಾಲೀಕರಾಗಿದ್ದ ಚಂದ್ರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದುದರಿಂದ ದೊಡ್ಡ ಸಂಖ್ಯೆಯ ಸ್ನೇಹಿತರ ಬಳಗ ಅವರದಾಗಿತ್ತು.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಎನ್ನುವುದು ಸರ್ವೇ ಸಾಮಾನ್ಯ ಎಂಬಂತಾಗಿದ್ದು, ಏಕಾಏಕಿ ಪ್ರಾಣ ಕಸಿಯುತ್ತಿದೆ. ಮಕ್ಕಳು, ಯುವಕರು ಕೂಡಾ ಬಲಿಯಾಗುತ್ತಿದ್ದಾರೆ. ಭಾನುವಾರ ರಾತ್ರಿ ರಾಜ್ಯಪಾಲರ ಕಾರು ಚಾಲಕರೊಬ್ಬರು ಇದೇ ರೀತಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ | Heart attack | ರಾಜ್ಯಪಾಲರ ಕರೆದೊಯ್ಯಲು ಏರ್‌ಪೋರ್ಟ್‌ಗೆ ಹೋಗಿದ್ದ ಕಾರು ಚಾಲಕ ಅಲ್ಲೇ ಹೃದಯಾಘಾತದಿಂದ ನಿಧನ

Exit mobile version