Site icon Vistara News

Physical Abuse : 7 ವರ್ಷದ ಬಾಲಕಿ ಮೇಲೆ ಎರಗಿದ ಶಾಲಾ ಶಿಕ್ಷಕ ಅರೆಸ್ಟ್‌!

Physical abuse to girl

Woman Jailed For 40 Years For Letting Lover Rape Her Minor Daughter

ದಾವಣಗೆರೆ : ಅಕ್ಷರ ಕಲಿಸುವ ಶಿಕ್ಷಕನೇ ಭಕ್ಷಕನಾದರೆ ಮಕ್ಕಳ ಗತಿಯೇನು. ಇಂತಹದೊಂದು ಪ್ರಶ್ನೆ ಕಾಡದೆ ಇರದು. ಕಾಮುಕ ಶಿಕ್ಷಕನೊಬ್ಬ ಅಪ್ರಾಪ್ತೆ ಮೇಲೆ ಎರಗಿ, ನಿರಂತರವಾಗಿ ಅತ್ಯಾಚಾರವೆಸಗಿರುವ (Physical Abuse) ಘಟನೆ ಬೆಳಕಿಗೆ ಬಂದಿದೆ. ದಾವಣಗೆರೆ ನಗರದ ಸರ್ಕಾರಿ ಶಾಲೆಯೊಂದರಲ್ಲಿ ಈ ಕೃತ್ಯ ನಡೆದಿದೆ.

ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಯಾರಿಗೂ ಹೇಳದಂತೆ ಕಾಮುಕ ಶಿಕ್ಷಕ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಎರಡು ದಿನಗಳ ಹಿಂದೆ ಬಾಲಕಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲು ಆದಾಗ ಪ್ರಕರಣ ಬೆಳಕಿಗೆ ಬಂದಿದೆ.

ವೈದ್ಯರ ತಪಾಸಣೆ ವೇಳೆ ಅತ್ಯಾಚಾರವಾಗಿರುವುದು ತಿಳಿದು ಬಂದಿದೆ. ಸದ್ಯ ಕಾಮುಕ ಶಿಕ್ಷಕನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಪೋಕ್ಸೋ ಪ್ರಕರಣದಡಿ ಕಾಮುಕ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಂದ ಕಟುಕ; ಮಾಡಿದ ತಪ್ಪಾದರೂ ಏನು?

ಮನೆಗೆಲಸಕ್ಕೆ ಬಂದ ದಲಿತ ಮಹಿಳೆ ಮೇಲೆ ಅತ್ಯಾಚಾರ; ದೇಹ ತುಂಡರಿಸಿದ ಕಟುಕರು

ಲಖನೌ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ದಲಿತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಎಸಗುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ (Uttar Pradesh) ಬಾಂಡಾ ಜಿಲ್ಲೆಯಲ್ಲಿ ಮನೆಗೆಲಸಕ್ಕೆ ಬಂದ ದಲಿತ ಮಹಿಳೆಯೊಬ್ಬರ (Dalit Woman) ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಅಷ್ಟೇ ಅಲ್ಲ, ದಲಿತ ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ದುರುಳರು, ತಲೆಮರೆಸಿಕೊಂಡಿದ್ದಾರೆ.

ಬಾಂಡಾ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರು ಮಂಗಳವಾರ (ನವೆಂಬರ್‌ 2) ರಾಜ್‌ಕುಮಾರ್‌ ಶುಕ್ಲಾ ಎಂಬಾತನ ಮನೆಗೆ ಕೆಲಸಕ್ಕೆಂದು ಹೋಗಿದ್ದಾರೆ. ಇದೇ ವೇಳೆ ಮಹಿಳೆಯ ಪುತ್ರಿಯು ಅಲ್ಲಿಗೇ ಬಂದಿದ್ದಾರೆ. ಆಗ ಕೋಣೆಯೊಂದರಲ್ಲಿ ತಾಯಿ ಕಿರುಚುತ್ತಿದ್ದನ್ನು ನೋಡಿ ಗಾಬರಿಗೊಂಡಿದ್ದಾರೆ. ಬಾಗಿಲು ಚಿಲಕ ಹಾಕಿದ ಕಾರಣ ದಲಿತ ಮಹಿಳೆಯ ಪುತ್ರಿಯು ಬಾಗಿಲು ತೆರೆಯಲು ಆಗಿಲ್ಲ. ಕೆಲ ಹೊತ್ತಿನ ಬಳಿಕ ಬಾಗಿಲು ತೆರೆದ ದುರುಳರು ಓಡಿಹೋಗಿದ್ದಾರೆ. ಮಗಳು ಹೋಗಿ ನೋಡಿದಾಗ ತಾಯಿಯ ದೇಹ ತುಂಡಾಗಿ ಬಿದ್ದಿತ್ತು ಎಂದು ತಿಳಿದುಬಂದಿದೆ.

ಘಟನೆ ಖಂಡಿಸಿದ ಅಖಿಲೇಶ್‌ ಯಾದವ್‌

ಇದನ್ನೂ ಓದಿ: Ujjain Horror: ಉಜ್ಜಯಿನಿಯಲ್ಲಿ ಇನ್ನೊಂದು ಬರ್ಬರ ಕೃತ್ಯ;‌ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಮಹಿಳೆ ಮೇಲೆ ರಾಜ್‌ಕುಮಾರ್‌ ಶುಕ್ಲಾ, ಆತನ ಸಹೋದರರಾದ ಬೌವಾ ಶುಕ್ಲಾ ಹಾಗೂ ರಾಮಕೃಷ್ಣ ಶುಕ್ಲಾ ಅವರು ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳ ವಿರುದ್ಧವೂ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಖಂಡಿಸಿದ್ದು, “ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯರು, ಯುವತಿಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತ ಮಹಿಳೆಯರಿಗಿಲ್ಲ ರಕ್ಷಣೆ

ಕೆಲ ತಿಂಗಳಷ್ಟೇ ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆ ಮೇಲೆ ಪೊಲೀಸ್‌ ಅಧಿಕಾರಿಯೇ ಅತ್ಯಾಚಾರ ಎಸಗಿದ್ದ. ಪ್ರಯಾಗರಾಜ್‌ ಜಿಲ್ಲೆಯ ಝಂಘಾಯಿ ಪೊಲೀಸ್‌ ಠಾಣೆ ಎಸ್‌ಐ ಆಗಿರುವ ಸುಧೀರ್‌ ಕುಮಾರ್‌ ಎಂಬಾತನು ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಸೆಪ್ಟೆಂಬರ್‌ 21ರಂದು ಮಹಿಳೆಯೊ ಪೊಲೀಸ್‌ ಠಾಣೆಗೆ ಬಂದಿದ್ದಾರೆ. ಆಕೆಯ ದೂರು ದಾಖಲಿಸಿಕೊಂಡು, ನ್ಯಾಯ ಒದಗಿಸಬೇಕಾದ ಎಸ್‌ಐ, ಮಹಿಳೆಗೆ ಮತ್ತು ಬರುವ ಔಷಧ ಇರುವ ಪಾನೀಯ ನೀಡಿ, ಬಳಿಕ ಕಾರಿನಲ್ಲಿ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಎಂದು ತಿಳಿದುಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ಕ್ಲಿಕ್‌ ಮಾಡಿ

Exit mobile version