Site icon Vistara News

Physical abuse : 12 ವರ್ಷದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಪಾಪಿ ತಂದೆ

Sexual abuse

ಬೀದರ್: ಈ ಜಗತ್ತಿನಲ್ಲಿ ಹೆಣ್ಣು ಮಕ್ಕಳು (Problems of Girl children) ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎನ್ನುವುದೇ ಒಂದು ದೊಡ್ಡ ಪ್ರಶ್ನೆ. ಯಾರು ತಮ್ಮ ರಕ್ಷಕರೋ ಅವರೇ ಭಕ್ಷಕರಾಗಿ ಬಿಡುವ ಕ್ರೌರ್ಯದ ಜಗತ್ತು ಅವರನ್ನು ಕಾಡುತ್ತಿದೆ. ಇದಕ್ಕೆ ಒಂದು ಉದಾಹರಣೆ ಬೀದರ್‌ನಲ್ಲಿ ನಡೆದಿರುವ ಈ ಭಯಾನಕ ಘಟನೆ. ಇಲ್ಲಿ ವ್ಯಕ್ತಿಯೊಬ್ಬ ತನ್ನ 12 ವರ್ಷದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ (Physical abuse) ನಡೆಸುತ್ತಿದ್ದ ಅತ್ಯಂತ ಕ್ರೂರ ವಿದ್ಯಮಾನ (Man rapes his own daughter) ಇದು.

ಬೀದರ್‌ ಜಿಲ್ಲೆಯ ಬಸವ ಕಲ್ಯಾಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಠಲ ಮೇತ್ರೆ (35) ಎಂಬಾತ ತನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಕಳೆದ ಹಲವು ಸಮಯದಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ಈಗ ಬೆಳಕಿಗೆ ಬಂದಿದೆ.

ಈ ನಿರಂತರ ಅತ್ಯಾಚಾರ ಯಾವಾಗ ಆರಂಭವಾಯಿತು ಎನ್ನುವ ಬಗ್ಗೆ ಎರಡು ಅಭಿಪ್ರಾಯಗಳಿವೆ. ಕಳೆದ ಕೊರೊನಾ ಕಾಲದಲ್ಲಿ ಮಗಳು ಮನೆಯಲ್ಲೇ ಇದ್ದಾಗ ಅಪ್ಪ ಆಕೆಯ ಮೇಲೆ ಮೊದಲ ಬಾರಿಗೆ ಅತ್ಯಾಚಾರ ನಡೆಸಿದ್ದ ಎಂದು ಹೇಳಲಾಗಿದೆ. ಆ ಬಳಿಕ ಆಕೆಯನ್ನು ಕೆಲವೊಮ್ಮೆ ಪುಸಲಾಯಿಸಿ, ಇನ್ನು ಕೆಲವೊಮ್ಮೆ ಹೆದರಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಇದನ್ನು ದಿನ ನಿತ್ಯದ ಚಾಳಿಯಾಗಿ ಮಾಡಿಕೊಂಡ ಈ ಧೂರ್ತ ಮನೆಯಲ್ಲಿ ಎಲ್ಲರೂ ನಿದ್ದೆ ಮಾಡಿದಾಗ ಮಗಳ ಮೇಲೆಯೇ ದೌರ್ಜನ್ಯ ನಡೆಸುತಿದ್ದ ಎನ್ನಲಾಗಿದೆ. ಆದರೆ ಕೆಲವು ದಿನಗಳಲ್ಲಿ ಅವನ ಕಾಮ ನೆತ್ತಿಗೇರಿ ಹಗಲಿನಲ್ಲೇ ಆಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಕೆಲವು ದಿನದ ಹಿಂದೆ ಆತ ಹಗಲಿನಲ್ಲೇ ತನ್ನ ಮಗಳನ್ನು ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿರುವುದು ಬಾಲಕಿಯ ಅಜ್ಜಿಯ ಗಮನಕ್ಕೆ ಬಂದಿತು. ಅದು ಬಳಿಕ ತಾಯಿ ಗಮನಕ್ಕೆ ಬಂತು. ತಾಯಿ ಆಕೆಯನ್ನು ಗದರಿಸಿ ವಿಚಾರಿಸಿದಾಗ ಅಪ್ಪನ ಚಾಳಿಯ ಪೂರ್ಣ ವಿವರ ಬೆಳಕಿಗೆ ಬಂದಿದೆ. ಇದನ್ನು ಆಕೆ ಪ್ರಶ್ನಿಸಿದಾಗ ಗಂಡ ಆಕೆಗೇ ಹಲ್ಲೆ ನಡೆಸಿದ್ದಾನೆ.

ಈ ನಡುವೆ ವಿಚಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಿಬ್ಬಂದಿಗೆ ತಲುಪಿದಾಗ ಅವರು ಹುಡುಗಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ಅಪ್ಪನ ದೌರ್ಜನ್ಯದ ಕರುಣ ಕಥೆಗಳು ಹೊರಬಂದವು. ಯಾರಿಗಾದರೂ ಹೇಳಿದರೆ ನಿನ್ನನ್ನೂ, ನಿನ್ನ ತಾಯಿಯನ್ನು ಕೊಲ್ಲುವುದಾಗಿ ಆತ ಬೆದರಿಸಿ ತನ್ನ ಕಾರ್ಯ ಸಾಧಿಸುತ್ತಿದ್ದ ಎನ್ನಲಾಗಿದೆ.

ಈಗ ಬಸವಕಲ್ಯಾಣ ಪೊಲೀಸರು ಆರೋಪಿ ತಂದೆಯ ಮೇಲೆ ಪೋಸ್ಕೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆಯೇ ಈ ಧೂರ್ತ ನಾಪತ್ತೆಯಾಗಿದ್ದಾನೆ.

ರಾಜ್ಯದ ನಾನಾ ಭಾಗಗಳಲ್ಲಿ ಪುಟ್ಟ ಹೆಣ್ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ : Physical Abuse: ಸೋಶಿಯಲ್‌ ಮೀಡಿಯಾದಲ್ಲಿ ಗೆಳೆತನ; ಪ್ರೀತಿಯ ನಾಟಕವಾಡಿ ವಿದ್ಯಾರ್ಥಿನಿಯ ಗ್ಯಾಂಗ್‌ರೇಪ್

Exit mobile version