Site icon Vistara News

Physical Abuse : ಹೋಟೆಲ್‌ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ; ತೆಲಂಗಾಣ ಕಾಂಗ್ರೆಸ್ ನಾಯಕನ ವಿರುದ್ಧ ಎಫ್‌ಐಆರ್‌

FIR against Telangana Congress leader Kumbham Shivakumar Reddy

ಬೆಂಗಳೂರು: ಮಹಿಳೆಯ ಮೇಲೆ ಎರಗಿದ ತೆಲಂಗಾಣ ಕಾಂಗ್ರೆಸ್‌ ನಾಯಕನ (Telangana Congress leader) ವಿರುದ್ಧ ಅತ್ಯಾಚಾರ (Physical Abuse) ಪ್ರಕರಣವೊಂದು ದಾಖಲಾಗಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ (Cubbon Park Police) ಠಾಣೆಯಲ್ಲಿ ಕುಂಭಂ ಶಿವಕುಮಾರ್ ರೆಡ್ಡಿ ಎಂಬಾತನ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

ನಗರದ ಪ್ರತಿಷ್ಟಿತ ಖಾಸಗಿ ಹೋಟೆಲ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿದೆ. ಕುಂಭಂ ಶಿವಕುಮಾರ್ ರೆಡ್ಡಿ ತೆಲಂಗಾಣದ ನಾರಾಯಣ್ ಪೇಟ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಕಳೆದ ಬಾರಿ ಎಂಎಲ್ಎ ಅಭ್ಯರ್ಥಿಯಾಗಿ ಸೋತಿದ್ದರು.

ನಗರದ ಖಾಸಗಿ ಹೋಟೆಲ್‌ಗೆ ಕರೆದುಕೊಂಡು ಬಂದು ಎರಗಿ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಇದೆ. ಈ ಹಿಂದೆ ಹೈದರಾಬಾದ್ ಪಂಜಾಗುಟ್ಟ ಠಾಣೆಯಲ್ಲಿ ಈತನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈಗ ಬೆಂಗಳೂರಿನಲ್ಲೂ ಎಫ್ಐಆರ್ ದಾಖಲಾಗಿದೆ. ಸದ್ಯ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

ಕುಡಿತದ ಅಮಲಿನಲ್ಲಿ ಕೈಯನ್ನೇ ಬ್ಲೇಡ್‌ನಿಂದ ಕತ್ತರಿಸಿಕೊಂಡ ಯುವಕ ಸಾವು

ಕುಡಿತದ ಅಮಲಿನಲ್ಲಿ (Alcohol Effect) ಕಂಡ ಕಂಡವರ ಮೇಲೆ ಹಲ್ಲೆ ಮಾಡುವವರನ್ನು ನೋಡಿದ್ದೇವೆ, ಕೊಲೆ ಮಾಡುವವರನ್ನು ನೋಡಿದ್ದೇವೆ. ಕುಡಿದ ಮೇಲೆ ಅವರಿಗೆ ತಾವು ಏನು ಮಾಡುತ್ತಿದ್ದೇವೆ ಅನ್ನೋದೇ ತಿಳಿಯದೆ ಈ ರೀತಿ ಮಾಡುತ್ತಾರೆ ಅಂತೇವೆ. ಆದರೆ, ಇಲ್ಲೊಬ್ಬ ಕುಡಿತದ ಅಮಲಿನಲ್ಲಿ ಏನು ಮಾಡುತ್ತಿದ್ದೇನೆ ಎನ್ನುವ ಅರಿವೇ ಇಲ್ಲದೆ, ತನ್ನನ್ನೇ ತಾನು ಬ್ಲೇಡಿನಿಂದ (Man injures hand with blade) ಕೊಯ್ದುಕೊಂಡಿದ್ದಾನೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ನಿವಾಸಿಯಾಗಿರುವ ಪರಶುರಾಮ ತೇಲಸಂಗ (32) ಎಂಬಾತನೇ ಕುಡಿತದ ಅಮಲಿನಲ್ಲಿ ಬ್ಲೇಡಿನಿಂದ ಕೊಯ್ದುಕೊಂಡವನು. ಅವನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಅತಿಯಾದ ರಕ್ತಸ್ರಾವದಿಂದ ಪ್ರಾಣ ಕಳೆದುಕೊಂಡಿದ್ದಾನೆ.

ಪರಶುರಾಮ ತೇಲಸಂಗನಿಗೆ ಕುಡಿತದ ಹುಚ್ಚು ಜೋರಾಗಿತ್ತು. ಕುಡಿದು ಕಂಡ ಕಂಡಲ್ಲಿ ಬೀಳುತ್ತಿದ್ದ. ಅವರಿವರ ಜತೆ ಜಗಳ ಮಾಡುತ್ತಿದ್ದ. ಈ ನಡುವೆ ಕುಡಿದ ಮತ್ತಿನಲ್ಲೇ ಆತ ಭಾನುವಾರ ರಾತ್ರಿ ದೇವಸ್ಥಾನಕ್ಕೂ ಹೋಗಿದ್ದ!

ಭಾನುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಚೆನ್ನಾಗಿ ಕುಡಿದುಕೊಂಡು ಗ್ರಾಮದ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿದ್ದ. ಅಲ್ಲಿ ಆತನ ಬ್ಲೆಡ್‌ನಿಂದ ಕೈ ಕೊರೆದುಕೊಂಡಿದ್ದ. ಯಾರಿಗೋ ಸವಾಲು ಹಾಕಿ ಆತ ಈ ರೀತಿ ಬ್ಲೇಡ್‌ನಿಂದ ಕೊಯ್ದುಕೊಂಡಿದ್ದ ಎಂದು ಹೇಳಲಾಗಿದೆ. ಕೊಯ್ದುಕೊಂಡಾಗ ರಕ್ತ ಛಿಲ್ಲನೆ ಚಿಮ್ಮಿದೆ. ಇದನ್ನು ನೋಡಿದ ಸ್ಥಳೀಯರು ಆತನನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಸಾವು ಸಂಭವಿಸಿದೆ.

ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಡಿತ ಮತ್ತು ಮಾದಕ ವಸ್ತುಗಳ ಮತ್ತಿನಲ್ಲಿ ಕೆಲವರಿಗೆ ಬ್ಲೇಡಿನಿಂದ ಕೊಯ್ದುಕೊಂಡರೂ ನೋವಿನ ಅರಿವೇ ಆಗುವುದಿಲ್ಲವಂತೆ. ಹಾಗಂತ ರಕ್ತಸ್ರಾವ ಶುರುವಾದರೆ ನಿಲ್ಲುತ್ತದಾ? ನಿಲ್ಲುವುದಿಲ್ಲ. ಹೀಗಾಗಿ ಆತ ಪ್ರಾಣ ಕಳೆದುಕೊಂಡಿದ್ದಾನೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version