Site icon Vistara News

Physical Abuse : ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ; ಮಗಳಿಗಾದ ಅನ್ಯಾಯಕ್ಕೆ ವಿಷ ಸೇವಿಸಿದ ತಾಯಿ

physical abuse

ಹಾಸನ: ಕಾಮ ಪಿಶಾಪಿಗಳಿಗೆ ಒಂದಲ್ಲ ಒಂದು ಕಡೆ ಹೆಣ್ಮಕ್ಕಳು ಬಲಿಯಾಗುತ್ತಾಲೇ ಇದ್ದಾರೆ. ಮೊಮ್ಮಗಳ ವಯಸ್ಸಿನ ಬಾಲಕಿ ಮೇಲೆ ಕಣ್ಣು ಹಾಕಿದ ವೃದ್ಧನೊಬ್ಬ ಪೈಶಾಚಿಕ ಕೃತ್ಯ (Physical Abuse) ಎಸಗಿದ್ದಾನೆ. ಹಾಸನದ (Hassan News) ಸಕಲೇಶಪುರದಲ್ಲಿ ವೃದ್ಧನೊಬ್ಬ ಅಪ್ರಾಪ್ತೆ ಮೇಲೆ ಎರಗಿ ಅತ್ಯಾಚಾರ ಮಾಡಿದ್ದಾನೆ.

ಮೀಸೆ ಮಂಜಯ್ಯ (73) ಅತ್ಯಾಚಾರ ಮಾಡಿದ ಕೀಚಕ. 13 ವರ್ಷದ ಬಾಲಕಿ ಈಗ ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆ. ಈ ದುಷ್ಟ ವೃದ್ಧ ಸಾಮಾಜಿಕ ಕಾರ್ಯಕರ್ತನೆಂದು ಬಿಂಬಿಸಿಕೊಂಡು ಇಂತಹ ಹೇಯ ಕೃತ್ಯ ಎಸಗಿದ್ದಾನೆ. ವಿಧವಾವೇತನ, ಪಿಂಚಣಿ ಹಣ ಕೊಡಿಸುವುದಾಗಿ ಹಲವು ಮಹಿಳೆಯರನ್ನು ಎಮೋಷನಲ್ ಬ್ಲಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ.

ವಿಷ ಸೇವಿಸಿದ ಬಾಲಕಿಯ ತಾಯಿ

ಮಗಳಿಗಾದ ಅನ್ಯಾಯದಿಂದ ಮನನೊಂದ ತಾಯಿ ವಿಷ ಸೇವಿಸಿದ್ದಾರೆ. ಬಾಲಕಿ ತಾಯಿ ಹಾಸನದ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ‌‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿ ಮೀಸೆ ಮಂಜಯ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್ ಮಾಡಿ

Exit mobile version