ಬೆಂಗಳೂರು: ರಾಜಧಾನಿ ಬೆಂಗಳೂರು ಹಗಲು-ರಾತ್ರಿ ಯಾವುದೇ ಸಮಯವಾದರೂ ಹೆಣ್ಮಕ್ಕಳು ಓಡಾಡಲು ಸೇಫ್ ಸಿಟಿ ಎಂಬ ಅಭಿಪ್ರಾಯವಿದೆ. ಆದರೆ ಇದೀಗ ಖಾಸಗಿ ಕಂಪೆನಿಯೊಂದರ ಯುವತಿಯೊಬ್ಬಳು ಪ್ರಜ್ಞೆ ತಪ್ಪಿಸಿ ತನ್ನ ಮೇಲೆ ಗ್ಯಾಂಗ್ ರೇಪ್ (Physical Abuse) ನಡೆದಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಕಳೆದ ಡಿ.12ರ ರಾತ್ರಿ ಸಂತ್ರಸ್ತೆ ಕೋರಮಂಗಲದ ಪಬ್‌ವೊಂದಕ್ಕೆ ಹೋಗಿದ್ದಾಳೆ. ಬಳಿಕ ಏನು ಆಯಿತೋ ಏನೋ ಆಕೆಗೆ ಪ್ರಜ್ಞೆ ಬಂದಾಗ ಆಡುಗೋಡಿಯ ದೇವೇಗೌಡ ಲೇಔಟ್ ಬಳಿ ಇದ್ದುದ್ದಾಗಿ ಹೇಳಿದ್ದಾಳೆ. ತಾನು ಅಲ್ಲಿಗೆ ಹೇಗೆ ಬಂದೆ ಎಂಬುದೇ ತಿಳಿದಿಲ್ಲ ಎಂದಿದ್ದಾಳೆ. ಕೂಡಲೇ ಸ್ಥಳೀಯರ ನೆರವಿನೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ತನ್ನ ದೇಹದ ಮೇಲೆ ತರಚು ಗಾಯಗಳಾಗಿದ್ದು, ಗ್ಯಾಂಗ್ ರೇಪ್ ಆಗಿದೆ ಎಂಬ ಶಂಕೆ ಇದೆ ಎಂದು ದೂರು ನೀಡಿದ್ದಾಳೆ.
ಯುವತಿಯೊಬ್ಬಳ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂಬ ಆರೋಪ ಹಿನ್ನೆಲೆ ದೂರು ದಾಖಲಿಸಿಕೊಂಡಿರುವ ಕೋರಮಂಗಲ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ಬೇಸಿಕ್ ಪ್ರೊಸೀಝರ್ ಮುಗಿಸಿದ್ದು, ಯುವತಿ ಹೇಳಿದ ಘಟನೆ ನಡೆದ ಸ್ಥಳದ ಸುಮಾರು 60 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Physical Assault: ಸಲ್ಮಾನ್ ಖಾನ್ ಗೆಳೆಯನಿಗೆ ರಾಡ್‌ನಿಂದ ಹಲ್ಲೆ! ಮೂವರ ವಿರುದ್ಧ ದೂರು ದಾಖಲು
ಚಲಿಸುತ್ತಿದ್ದ ರೈಲಿನಲ್ಲಿಯೇ 30 ವರ್ಷದ ಯುವತಿ ಮೇಲೆ ಅತ್ಯಾಚಾರ
ಸಾತ್ನಾ: ಚಲಿಸುತ್ತದ್ದ ಮೆಮು ರೈಲಿನಲ್ಲಿ 30 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ (Physical Abuse) ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ ) ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಸಂಜೆ ಸತ್ನಾ ಮತ್ತು ಕಟ್ನಿ ವಿಭಾಗಗಳ ನಡುವಿನ ಪಕಾರಿಯಾ ನಿಲ್ದಾಣದಲ್ಲಿ ಮಹಿಳೆ ಜಬಲ್ಪುರ್-ರೇವಾ ಮೆಮು ರೈಲನ್ನು ಹತ್ತಿದ್ದರು. ಮಾರ್ಗ ಮಧ್ಯದಲ್ಲಿ ಆರೋಪಿಯು ಅತ್ಯಾಚಾರ ಮಾಡಿದ್ದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಂಡಾ (ಉತ್ತರ ಪ್ರದೇಶ) ನಿವಾಸಿ ಪಂಕಜ್ ಕುಶ್ವಾಹ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸತ್ನಾ ಜಿಆರ್ಪಿ ಠಾಣೆಯ ಉಸ್ತುವಾರಿ ಎಲ್ ಪಿ ಕಶ್ಯಪ್ ಆರೋಪಿಯ ಬಂಧನ ಮಾಹಿತಿ ನೀಡಿದ್ದಾರೆ. ಪಂಕಜ್ ಯುವತಿಯನ್ನು ರೈಲಿನ ಶೌಚಾಲಯದಲ್ಲಿ ಅತ್ಯಾಚಾರ ಮಾಡಿದ್ದ. ತಪ್ಪಿಸಿಕೊಂಡು ಹೊರಗೆ ಬಂದಿದ್ದ ಆಕೆ ಸತ್ನಾ ನಿಲ್ದಾಣದ ಜಿಆರ್ಪಿಗೆ ಮಾಹಿತಿ ನೀಡಿದ್ದಳು. ನಂತರ ವ್ಯಕ್ತಿಯನ್ನು ಬಂಧಿಸಲು ತಂಡವನ್ನು ಕಳುಹಿಸಲಾಯಿತು ಎಂದು ಅವರು ಹೇಳಿದರು.
ಯುವತಿ ದೂರು ನೀಡುತ್ತಿದ್ದಂತೆ ಬೆದರಿದ ಅರೋಪಿ ರೈಲಿನ ಶೌಚಾಲಯದಲ್ಲಿಯೇ ಬಾಗಿಲು ಹಾಕಿ ಬಚ್ಚಿಟ್ಟುಕೊಂಡಿದ್ದ. ರೈಲು ರೇವಾ ತಲುಪಿದಾಗ ಬೀಗ ಅಧಿಕಾರಿಗಳು ಮುರಿದು ಆತನನ್ನು ಬಂಧಿಸಿದ್ದಾರೆ. ಆರೋಪಿಗಳ ಕ್ರಿಮಿನಲ್ ದಾಖಲೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸಾರಿಕಾ ಪಾಂಡೆ ಹೇಳಿದ್ದಾರೆ.
ಎಸಿ ಕೋಚ್ ಏರಿದ್ದ ಮಹಿಳೆ
ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಪಕಾರಿಯ ರೈಲು ನಿಲ್ದಾಣದಲ್ಲಿ ಪಕ್ಕದಲ್ಲಿ ನಿಂತಿದ್ದ ವಿಶೇಷ ರೈಲಿನ ಒಳಗೆ ನುಗ್ಗಿದ್ದರು. ಅವರು ಶೌಚಕ್ಕಾಗಿ ಅಲ್ಲಿಗೆ ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಕಮಲೇಶ್ ನಿರ್ಜನವಾಗಿದ್ದ ಎಸಿ ಕೋಚ್ ಬಾಗಿಲು ಹಾಕಿ ಅತ್ಯಾಚಾರವೆಸಗಿದ್ದಾನೆ.
40 ಕಿಲೋಮೀಟರ್ ವರೆಗೂ ರೈಲು ಚಲಿಸಿದ್ದು, ಸತ್ನಾ ನಿಲ್ದಾಣದಲ್ಲಿ ನಿಂತಾಗ ಯುವತಿ ರೈಲಿನಿಂದ ಹಾರಿ ರೈಲ್ವೆ ಪೊಲೀಸ್ ಠಾಣೆಗೆ ತೆರಳಿ ವಿಷಯವನ್ನು ವಿವರಿಸಿದ್ದಾರೆ. ಕೂಡಲೇ ರೈಲ್ವೆ ಪೊಲೀಸ್ ಒಬ್ಬರು ವಿಶೇಷ ರೈಲಿನ ಎಸಿ ಕೋಚ್ ಏರಿದ್ದು, ಈ ಸಂದರ್ಭದಲ್ಲಿ ಕಮಲೇಶ್, ಬಾಗಿಲು ಹಾಕಿಕೊಂಡು ಅಡಗಿ ಕುಳಿತಿದ್ದಾನೆ. ಅಷ್ಟರೊಳಗೆ ಇತರೆ ನಿಲ್ದಾಣಗಳ ರೈಲ್ವೆ ಪೊಲೀಸರಿಗೂ ಮಾಹಿತಿ ತಲುಪಿದ್ದು, ಅಂತಿಮವಾಗಿ ಎಸಿ ಕೋಚ್ ಬಾಗಿಲು ಮುರಿದು ಆರೋಪಿಯನ್ನು ಬಂಧಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.