ಮಂಡ್ಯ: ಇಂದು ಮಹಾಲಯ ಅಮಾವಾಸ್ಯೆ ಹಿನ್ನೆಲೆ, ಶ್ರೀರಂಗಪಟ್ಟಣದ ಕಾವೇರಿ ನದಿ ದಡದಲ್ಲಿ ಜನಜಾತ್ರೆಯೇ ನೆರದಿದೆ. ಪಿತೃ ತರ್ಪಣ ನೀಡುವ ಸಲುವಾಗಿ ಇಲ್ಲಿನ ಪಶ್ಚಿಮ ವಾಹಿನಿ, ಸ್ನಾನಘಟ್ಟ, ಗೋಸಾಯಿ ಘಾಟ್ ಮತ್ತು ಸಂಗಮಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದಾರೆ. ಅಲ್ಲೀಗ ಟ್ರಾಫಿಕ್ ಜಾಮ್ ಉಂಟಾಗಿದೆ.
ಸಾಮಾನ್ಯವಾಗಿ ಪ್ರತಿವರ್ಷ ಮಹಾಲಯ ಅಮಾವಾಸ್ಯೆ ದಿನ ಶ್ರೀರಂಗಪಟ್ಟಣದಲ್ಲಿ ಅಪಾರ ಜನರು ಸೇರುತ್ತಾರೆ. ತಮ್ಮ ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಈ ಮಹಾಲಯ ಅಮಾವಾಸ್ಯೆ ದಿನ ತಿಲ ತರ್ಪಣ ನೀಡಿದರೆ ಅವರ ಆತ್ಮಕ್ಕೆ ಶಾಂತಿ ಮತ್ತು ಸ್ವರ್ಗ ಪ್ರಾಪ್ತಿಯಾಗುತ್ತದೆ. ಪಿತೃಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯಂದು ಪೂರ್ವಿಕರು ವಸು-ರುದ್ರ-ಆದಿತ್ಯ ರೂಪದಲ್ಲಿ ಬಂದು ನಮ್ಮ ಕೃತಜ್ಞತೆ ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ ಈ ದಿನ ವಿಶೇಷವಾಗಿ ಆಯಾ ಪುಣ್ಯಕ್ಷೇತ್ರಗಳಿಗೆ ಹೋಗಿಯೇ ತರ್ಪಣ ನೀಡಲಾಗುತ್ತದೆ.
ಕೆಲವರು ಹಿರಿಯರ ಹಬ್ಬದಂದು ಹಿರಿಯರು ಬಹಳವಾಗಿ ಇಷ್ಟಪಡುತ್ತಿದ್ದ ಆಹಾರ, ಬಟ್ಟೆ, ಇನ್ನಿತರ ವಸ್ತುಗಳನ್ನು ವಿಶೇಷವಾಗಿ ಸಿದ್ಧಪಡಿಸಿ ಹಿರಿಕರಿಗೆ ಒಪ್ಪಿಸುತ್ತಾರೆ. ಅವರನ್ನು ತಮ್ಮದೇ ಆದ ಶೈಲಿಯಲ್ಲಿ ಉಪಚರಿಸುತ್ತಾರೆ. ಈ ನೆಪದಲ್ಲಿ ಕುಟುಂಬದವರೆಲ್ಲರೂ ಒಂದೆಡೆ ಸೇರಿ, ಪೂರ್ವಿಕರನ್ನು ನೆನಪಿಸಿಕೊಳ್ಳುತ್ತಾರೆ.
ಇದನ್ನೂ ಓದಿ: Mahalaya 2022 | ಮಹಾಲಯದ ದಿನ ಹಿರಿಯರ ಪೂಜೆ ಹೇಗೆ? ಯಾರನ್ನೆಲ್ಲಾ ನೆನೆಯಬೇಕು?