Site icon Vistara News

SWAMIH Fund ಅಡಿ ಪೂರ್ಣಗೊಂಡ ಬೆಂಗಳೂರಿನ ಮೊದಲ ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್, ಮೋದಿ ಶುಭಾಶಯ

Tejashvi Surya

ಬೆಂಗಳೂರು, ಕರ್ನಾಟಕ: ಬೆಂಗಳೂರಿನಲ್ಲಿ ಮೊದಲ ಬಾರಿಗೆ SWAMIH Fund ಅಡಿಯಲ್ಲಿ ಪೂರ್ಣಗೊಂಡ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ಮಾಲೀಕರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಭಾಶಯ ಕೋರಿದ್ದಾರೆ. ತಮ್ಮ ಮನೆಗಳನ್ನು ಪಡೆದುಕೊಂಡವರಿಗೆ ಶುಭಾಶಯಗಳು ಎಂದು ಪ್ರಧಾನಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಕುರಿತು ಬೆಂಗಳೂರು ದಕ್ಷಿಣ ಸಂಸದ (Bengaluru South MP) ತೇಜಸ್ವಿ ಸೂರ್ಯ (Tejshwi Surya) ಅವರು ಟ್ವೀಟ್ ಮಾಡಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 3000 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಕನಸಿನ ಮನೆಗಳನ್ನು ಹೊಂದಲು ಸಹಾಯ ಮಾಡಿದ SWAMIH Fund ಅಡಿ ಬೆಂಗಳೂರಿನ ಮೊದಲ ಯೋಜನೆ ಪೂರ್ಣಗೊಂಡಿದೆ. ಈ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.

SWAMIH Fund: ತೇಜಸ್ವಿ ಸೂರ್ಯ ಟ್ವೀಟ್‌ನಲ್ಲಿ ಏನಿದೆ?

ಬೆಂಗಳೂರಿನ ಮಂತ್ರಿ ಸೆರೆನಿಟಿ ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಪ್ರದೀಪ್ ಮತ್ತು ದೀಪಾಲಿ ಪೈ ಅವರು ವಿಶೇಷ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಬಿಲ್ಡರ್ ತೊಂದರೆ ಹಾಗೂ ಹಣದ ಕೊರತೆಯಿಂದ ದಶಕಗಳಿಂದ ಈ ಪ್ರಾಜೆಕ್ಟ್ ಸ್ಥಗಿತವಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಾಗಿ ಈ ಪ್ರಾಜೆಕ್ಟ್ ಪೂರ್ಣಗೊಳ್ಳಲು ಸಾಧ್ಯವಾಯಿತು. ಕನಕಪುರ ರಸ್ತೆಯಲ್ಲಿರುವ ಈ ರೆಸಿಡೆನ್ಷಿಯಲ್ ಪ್ರಾಜೆಕ್ಟ್‌‌ನಲ್ಲಿ 2012ರಲ್ಲಿ ಬುಕ್ಕಿಂಗ್ ಶುರವಾಗಿತ್ತು. 2016ರ ವೇಳೆಗೆ ಮಾಲೀಕರಿಗೆ ಮನೆಗಳನ್ನು ಹಸ್ತಾಂತರಿಸುವ ಯೋಜನೆಯಿತ್ತು.

ಒಂದೆಡೆ, ಮನೆ ಖರೀದಿದಾರರು, ಎಲ್ಲಾ ಮಧ್ಯಮ ವರ್ಗದ ತೆರಿಗೆದಾರರು ಮನೆ ಬಾಡಿಗೆಯನ್ನು ಪಾವತಿಸುತ್ತಿದ್ದರು. ಮತ್ತೊಂದೆಡೆ ಅವರು ಗೃಹ ಸಾಲದ ಇಎಂಐ ಕೂಡ ನೀಡಬೇಕಾಗಿತ್ತು. 2018ರಲ್ಲಿ ಈ ಪ್ರಾಜೆಕ್ಟ್ ಸಂಪೂರ್ಣವಾಗಿ ಸ್ಥಗಿತಗೊಂಡ ಬಳಿಕ ಅವರೆಲ್ಲರೂ ಆತಂಕಕ್ಕೀಡಾಗಿದ್ದರು.

ಈ ರೀತಿಯ ಅರ್ಧಕ್ಕೆ ನಿಂತ ಹೋಮ್ ಪ್ರಾಜೆಕ್ಟ್‌ಗಳಿಗೆ ನೆರವು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲಿ SWAMIH Fund ಆರಂಭಿಸಿದ್ದರು. ನನ್ನ ವಿನಂತಿಯ ಮೇರೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು SWAMIH Fund ಅಡಿ ಪ್ರಾಜೆಕ್ಟ್‌ ಪೂರ್ಣಗೊಳಿಸಲು ನೆರವು ನೀಡುವಂತೆ ಎಸ್‌ಬಿಐ ಅಧಿಕಾರಿಗಳಿಗೆ ಸೂಚಿಸಿದರು.

ಈ ಸುದ್ದಿಯನ್ನೂ ಓದಿ: Video Viral: ವೇದಿಕೆ ಮೇಲೆ ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಮಿಸಿದ ಅಮೆರಿಕ ಗಾಯಕಿ; ತಲೆಬಾಗಿದ ನಮೋ

ಈ ಪ್ರಾಜೆಕ್ಟ್‌ ಪೂರ್ಣಗೊಂಡು ಫ್ಲ್ಯಾಟ್ ಓನರ್ಸ್ ಮನೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರೊಂದಿಗೆ SWAMIH Fund ಅಡಿ ನಿರ್ಮಾಣವಾದ ಬೆಂಗಳೂರಿನ ಮೊದಲ ಹೋಮ್ ಪ್ರಾಜೆಕ್ಟ್ ಎಂದು ಗುರುತಿಸಿಕೊಂಡಿದೆ. ಅಲ್ಲದೇ, 3000 ಕುಟುಂಬಗಳಿಗೆ ಸಹಾಯವಾಗಿದೆ. ಇದೇ ರೀತಿ, ದೇಶಾದ್ಯಂತ SWAMIH ಪ್ರಾಜೆಕ್ಟ್ ಅಡಿ 20,557 ಮನೆಗಳು ಪೂರ್ಣಗೊಂಡಿವೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version