ಬೆಳಗಾವಿ, ಕರ್ನಾಟಕ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಯ 13ನೇ ಕಂತು (PM-KISAN 13th Installment) ಫೆ.27ರಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಬೆಳಗಾವಿಯಲ್ಲಿ ಜಲ್ ಜೀವನ್ ಮಿಷನ್ ಕಾಮಗಾರಿ ಹಾಗೂ ಕಿಸಾನ್ ಸಮ್ಮಾನ್ ನಿಧಿ ಹಣ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, 13ನೇ ಕಂತು ಬಿಡುಗಡೆಗೆ ಚಾಲನೆ ನೀಡಿದರು. ಅರ್ಹ ರೈತರ ಖಾತೆಗೆ 2 ಸಾವಿರ ರೂ. ಜಮೆಯಾಗಲಿದೆ.
ಈ ಯೋಜನೆಯಡಿ ಕೇಂದ್ರ ಸರ್ಕಾರವು ಸುಮಾರು 16,000 ಕೋಟಿ ರೂ. ಬಿಡುಗಡೆ ಮಾಡಿದೆ. ಸುಮಾರು 8 ಕೋಟಿ ಅರ್ಹ ಫಲಾನುಭವಿಗಳಿಗೆ ಹಣ ನೇರವಾಗಿ ದೊರೆಯಲಿದೆ. ಪ್ರತಿ ವಿತ್ತ ವರ್ಷದಲ್ಲಿ ಕೇಂದ್ರ ಸರ್ಕಾರ ಅರ್ಹ ರೈತರಿಗೆ 6,000 ರೂ. ಅನುದಾನವನ್ನು ಒದಗಿಸುತ್ತದೆ. ಈ ಹಣ ನೇರ ನಗದು ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ.
16 ಸಾವಿರ ಕೋಟಿ ರೂ. ಬಿಡುಗಡೆ- ನರೇಂದ್ರ ಸಿಂಗ್ ತೋಮರ್
ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನ ಇಂದು ಪ್ರಧಾನಿ ಬಿಡುಗಡೆ ಮಾಡುತ್ತಾರೆ. 13ನೆಯ ಕಂತಿನ 16 ಸಾವಿರ ಕೋಟಿ ಹಣವನ್ನ ನೀಡಲಿದ್ದೇವೆ. ಯಾವುದೇ ಕಾರ್ಯಕ್ರಮದಲ್ಲಿ ಇಷ್ಟೊಂದು ಹಣವನ್ನ ಯಾರು ಸಹ ಖಾತೆಗೆ ಹಾಕಿರಲಿಲ್ಲ. ಆದರೆ, ನಾವು ಎಲ್ಲರ ಖಾತೆಗೆ ಹಣವನ್ನ ಹಾಕಲಿದ್ದೇವೆ ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಒಂದೇ ಬಟನ್ ಒತ್ತಿದರೆ 16 ಸಾವಿರ ಕೋಟಿ ರೂ. ಹಂಚಿಕೆಯಾಗಲಿದೆ . ಮೋದಿಯವರ ಫಸಲ್ ಭೀಮಾ ಯೋಜನೆ ಸೇರಿ ಹಲವು ಯೋಜನೆ ಈಗಾಗಲೇ ಬಿಡುಗಡೆಯಾಗಿದೆ. ಪ್ರಧಾನಿ ಮೋದಿಯವರ ಯೋಜನೆಗಳು ಎಲ್ಲರಿಗೂ ಮುಟ್ಟುತ್ತಿವೆ. ಕೇಂದ್ರ -ರಾಜ್ಯ ಸರ್ಕಾರ ರೈತರೊಂದಿಗೆ ಸೇರಿ ದೇಶದ ಉನ್ನತಿಗೆ ಶ್ರಮಿಸಲಾಗುತ್ತಿದೆ. ಸಿರಿ ಧಾನ್ಯಗಳ ಪ್ರಚಾರ ಇದೀಗ ಆಗುತ್ತಿದೆ. ಇಡೀ ಜಗತ್ತಿನಲ್ಲಿ ಸಿರಿ ಧಾನ್ಯಗಳ ಮಹತ್ವ ತಿಳಿಯುತ್ತದೆ. ಮಿಲೇಟ್ಸ್ ಗಳ ಬೆಳೆಗಳಿಂದ ದೇಶ ಮತ್ತಷ್ಟು ಮುನ್ನಡೆ ಸಾಧಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿ: PM KISAN SAMMAN| ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂಪಾಯಿ ವರ್ಗಾವಣೆ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಕಂತಿನ ಸ್ಟೇಟಸ್ ಹೇಗೆ ಚೆಕ್ ಮಾಡುವುದು?
ಮೊದಲಿಗೆ https://pmkisan.gov.in/ ವೆಬ್ಸೈಟ್ಗೆ ಭೇಟಿ ನೀಡಿ. ಪೇಮೆಂಟ್ ಸಕ್ಸೆಸ್ ಟ್ಯಾಬ್ನಲ್ಲಿ ನಿಮೆಗ ಭಾರತೀಯ ನಕಾಸೆ ದೊರೆಯುವುದು. ಬಲಗಡೆಗೆ ಯೆಲ್ಲೋ ಬಣ್ಣದ ಡ್ಯಾಶ್ ಬೋರ್ಡ್ ಟ್ಯಾ ಇದೆ. ಆ ಡ್ಯಾಶ್ಬೋರ್ಡ್ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ಮುಂದೆ ಹೊಸ ಪೇಜ್ ತೆರೆದುಕೊಳ್ಳುವುದು. ಅಲ್ಲಿ ವಿಲೇಜ್ ಡ್ಯಾಶ್ಬೋರ್ಡ್ ಕಾಣಿಸುತ್ತದೆ. ಅಲ್ಲಿ ಕೇಳುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಬೇಕು. ಬಳಿಕ ರಾಜ್ಯ, ಡಿಸ್ಟ್ರಿಕ್ಟ್, ಸಬ್ ಡಿಸ್ಟ್ರಿಕ್ಟ್ ಮತ್ತು ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳಿ. ಕೊನೆಗೆ ಶೋ ಬಟನ್ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮಗೆ ಹಣ ಬಂದಿದೆಯೋ ಇಲ್ಲವೇ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದು.