ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಆರ್ಥಿಕ ನೆರವನ್ನು ಸೋಮವಾರ ಬಿಡುಗಡೆ ಮಾಡಿದ್ದು, ರಾಜ್ಯದ 50.36 ಲಕ್ಷ ರೈತರಿಗೆ 1007.26 ಕೋಟಿ ರೂಪಾಯಿ ಸಹಾಯಧನ ವರ್ಗಾವಣೆ ಮಾಡಲಾಗಿದೆ.
ಈ ಯೋಜನೆಯ ಪ್ರಮುಖ ಅಂಶಗಳು: ಇಲ್ಲಿಯವರೆಗೆ, ಕೇಂದ್ರ ಸರ್ಕಾರದಿಂದ 53.83 ಲಕ್ಷ ರೈತ ಕುಟುಂಬಗಳು ಕನಿಷ್ಠ ಒಂದು ಕಂತು ಪಡೆಯುವ ಮೂಲಕ ಯೋಜನೆಯ ಲಾಭವನ್ನು ಪಡೆದಿದ್ದಾರೆ. 2019ರ ಮಾರ್ಚ್‌ನಿಂದ 2022 ಜುಲೈವರೆಗೆ 53.83 ಲಕ್ಷ ರೈತ ಕುಟುಂಬಗಳು ಸರ್ಕಾರದಿಂದ ಒಟ್ಟು 9968.57 ಕೋಟಿ ರೂಪಾಯಿ ಆರ್ಥಿಕ ಸಹಾಯಧನವನ್ನು ಪಡೆದಿವೆ.
ಇದನ್ನೂ ಓದಿ | Bharat jodo | ಬಳ್ಳಾರಿಯ ಜೀನ್ಸ್ ಉದ್ಯಮದ ನೋವು ನಲಿವು ಕೇಳಿಸಿಕೊಂಡ ರಾಹುಲ್ ಗಾಂಧಿ, ಸಿಕ್ಕಿತು ಕೆಲವು ಗಿಫ್ಟ್!
2022-23ನೇ ಸಾಲಿನಲ್ಲಿ 1251.98 ಕೋಟಿ ರೂಪಾಯಿ ಆರ್ಥಿಕ ಸಹಾಯಧನ ವರ್ಗಾವಣೆಯಾಗಿದೆ. ರಾಜ್ಯ ಸರ್ಕಾರದಿಂದ ಪಿ.ಎಂ. ಕಿಸಾನ್- ಕರ್ನಾಟಕ ಯೋಜನೆಯಡಿ ಭಾರತ ಸರ್ಕಾರದಿಂದ ಅನುಮೋದಿಸಲ್ಪಟ್ಟ ರೈತ ಕುಟುಂಬಗಳಿಗೆ 2019ರಿಂದ ಇಲ್ಲಿಯವರೆಗೆ 4821.37 ಕೋಟಿ ರೂಪಾಯಿ ಸಹಾಯಧನವನ್ನು ನೀಡಲಾಗಿದೆ. 2022-23ನೇ ಸಾಲಿನಲ್ಲಿ 956.71 ಕೋಟಿ ರೂಪಾಯಿ ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಂಜೂರಾತಿ ನೀಡಲಾಗಿದೆ.
ಈ ಯೋಜನೆಯಡಿ ಎಲ್ಲಾ ಪಾವತಿಗಳನ್ನು ಸಾಧ್ಯವಾದಷ್ಟು ಆಧಾರ್ ಆಧಾರಿತ ಡಿಬಿಟಿ ಮುಖಾಂತರ ಮಾಡಬೇಕೆಂದು ಭಾರತ ಸರ್ಕಾರ ಬಯಸುತ್ತದೆ. ಎಲ್ಲಾ ರಾಜ್ಯಗಳ ಪೈಕಿ, ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೇಕಡಾವಾರು (96%) ಆಧಾರ್ ಆಧಾರಿತ ವಹಿವಾಟುಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ 2020-21 ಸಾಲಿನಲ್ಲಿ ಭಾರತ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಪ್ರಶಸ್ತಿ ದೊರೆತಿದೆ. ನಿರಂತರ ಮೇಲ್ವಿಚಾರಣೆಯ ಭಾಗವಾಗಿ ಯೋಜನೆಯ ಫಲಾನುಭವಿಗಳಾಗಿರುವ ರೈತ ಕುಟುಂಬಗಳ ಅರ್ಹತೆಯನ್ನು ನಿಯತಕಾಲಿಕವಾಗಿ ಪರಿಶೀಲಿಸುವ ಕಾರ್ಯ ನಡೆಯುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ವರ್ಷ | ಪಾವತಿ ಮೊತ್ತ (ಕೋಟಿ ರೂ.ಗಳಲ್ಲಿ) |
ಕೇಂದ್ರ ಸರ್ಕಾರ | ಕರ್ನಾಟಕ ಸರ್ಕಾರ | |
2018-19 | 3.96 | 0.00 |
2019-20 | 2769.50 | 905.75 |
2020-21 | 3113.86 | 983.80 |
2021-22 | 2829.27 | 1975.12 |
2022-23 | 1251.98 | 956.71 |
ಒಟ್ಟು | 9968.57 | 4821.37 |
ಇದನ್ನೂ ಓದಿ | PM-KISAN | ಪ್ರಧಾನಿ ಮೋದಿಯಿಂದ ಪಿಎಂ-ಕಿಸಾನ್ 12ನೇ ಕಂತು 16,000 ಕೋಟಿ ರೂ. ಬಿಡುಗಡೆ