Site icon Vistara News

Modi in Karnataka: ಮೋದಿಗೆ ತಲೆ ಸವರಿ ಆಶೀರ್ವದಿಸಿದ ಪದ್ಮಶ್ರೀ ಪುರಸ್ಕೃತರು; ಸುಕ್ರಿ ಬೊಮ್ಮಗೌಡ ಹೇಳಿದ್ದೇನು?

pm modi seeks blessings of padmashri awardee sukri bommagowda and tulsi gowda modi in karnataka updates

ಕಾರವಾರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು (Modi in Karnataka), ಇಬ್ಬರು ಪದ್ಮಶ್ರೀ ಪುರಸ್ಕೃತರಿಂದ ಆಶೀರ್ವಾದ ಪಡೆದುಕೊಂಡ ಅಪರೂಪದ ಕ್ಷಣಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸಾಕ್ಷಿಯಾಯಿತು. ಪ್ರಧಾನಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಕ್ಕೆ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಲೂಕಿನ‌ ಹಟ್ಟಿಕೇರಿಯ ಗೌರಿಕೆರೆ ಪ್ರದೇಶದಲ್ಲಿ ಬುಧವಾರ ಆಯೋಜಿಸಲಾಗಿದ್ದ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಲು ಆಗಮಿಸಿದ್ದ ವೇಳೆ ಆಶೀರ್ವಾದ ಪಡೆದುಕೊಂಡರು. ಮಂಗಳೂರಿನ ಮೂಲ್ಕಿಯಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆ ಬಳಿಕ ಅಂಕೋಲಾಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಜಿಲ್ಲೆಯ ಬಿಜೆಪಿ ನಾಯಕರು ಸ್ವಾಗತಿಸಿದರು.

ಇದನ್ನೂ ಓದಿ: Karnataka Election : ಕಾಂಗ್ರೆಸ್‌ ಪ್ರಣಾಳಿಕೆ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಕಟ್‌ ಆ್ಯಂಡ್ ಪೇಸ್ಟ್‌ ಎಂದ ತೇಜಸ್ವಿಸೂರ್ಯ

ಈ ವೇಳೆ ಪದ್ಮಶ್ರೀ ಪುರಸ್ಕೃತರಾದ ಜಿಲ್ಲೆಯ ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ಹಾಗೂ ವೃಕ್ಷಮಾತೆ ತುಳಸಿ ಗೌಡ ಅವರನ್ನು ಪ್ರಧಾನಿ ಭೇಟಿಯಾದರು. ಸಾರ್ವಜನಿಕ ಸಭೆಗೂ ಮುನ್ನ ಪದ್ಮಶ್ರೀಗಳನ್ನು ಭೇಟಿಯಾದ ಪ್ರಧಾನಿ ಮೋದಿ ಅವರಿಗೆ ನಮಸ್ಕರಿಸುವ ಮೂಲಕ ಗೌರವಿಸಿದರು. ಈ ವೇಳೆ ಸುಕ್ರಿ ಬೊಮ್ಮಗೌಡ ಹಾಗೂ ತುಳಸಿ ಗೌಡ ಅವರ ಕಾಲಿಗೆರಗಿ ಅವರಿಂದ ಆಶೀರ್ವಾದವನ್ನು ಪಡೆದುಕೊಂಡರು. ಆಗ ಇಬ್ಬರೂ ಪದ್ಮಶ್ರೀ ಪುರಸ್ಕೃತರು ಪ್ರಧಾನಿ ನರೇಂದ್ರ ಮೋದಿ ಅವರ ತಲೆ ಸವರಿ ಆಶೀರ್ವಾದ ನೀಡಿದರು.

ಪದ್ಮಶ್ರೀ ಪುರಸ್ಕೃತರಾದ ಉತ್ತರ ಕನ್ನಡ ಜಿಲ್ಲೆಯ ಜಾನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ಹಾಗೂ ವೃಕ್ಷಮಾತೆ ತುಳಸಿ ಗೌಡ ಅವರ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

ನಂತರ ಸಮಾವೇಶ ಉದ್ದೇಶಿಸಿ ಮಾತನಾಡುವ ವೇಳೆ ಈ ಕುರಿತು ಪ್ರಸ್ತಾಪಿಸಿದ ಪ್ರಧಾನಿ‌ ಮೋದಿ, ದೇಶದ ಜನತೆಯ ಆಶೀರ್ವಾದ ನನಗೆ ಶಕ್ತಿ ತುಂಬುತ್ತಿದೆ. ಇಂದೂ ಸಹ ಇಲ್ಲಿಗೆ ಆಗಮಿಸಿದಾಗ ಇಬ್ಬರು ಮಾತೆಯರು ನನಗೆ ಆಶೀರ್ವಾದ ಮಾಡಿದ್ದು ಹೃದಯತುಂಬಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಕ್ಕೆ ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Election 2023: ಕಾಂಗ್ರೆಸ್‌ ಸೇರ್ಪಡೆ ಚರ್ಚೆಗೆ ಸವದಿ ಸಭೆ; ಕೈ ಎತ್ತಿ ಬೆಂಬಲ ಸೂಚಿಸಿದ ಕಾರ್ಯಕರ್ತರು

ಪ್ರಧಾನಿ ಭೇಟಿಯಿಂದ ಖುಷಿಯಾಯಿತು

ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ನಿವಾಸಿಯಾಗಿರುವ ಹಾಲಕ್ಕಿ ಸಮುದಾಯದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಗೌಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಭೇಟಿಯಿಂದ ಖುಷಿಯಾಯಿತು. ದೆಹಲಿಯಿಂದ ಅಂಕೋಲಾಕ್ಕೆ ಆಗಮಿಸಿದ ವೇಳೆ ನಮ್ಮನ್ನು ಭೇಟಿಯಾಗಿ ಅವರು ಆಶೀರ್ವಾದ ಪಡೆದುಕೊಂಡಿದ್ದಲ್ಲದೆ, ನಮ್ಮನ್ನು ನೋಡಿ ಅವರೂ ಖುಷಿಪಟ್ಟರು. ಅವರದ್ದು ಸರಳ ವ್ಯಕ್ತಿತ್ವ” ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

Exit mobile version