Site icon Vistara News

Narendra Modi: ಇಂದು ಪ್ರಧಾನಿ ಮೋದಿ ಬೆಂಗಳೂರು, ತುಮಕೂರಿಗೆ ಭೇಟಿ; ಕಾರ್ಯಕ್ರಮಗಳ ವೇಳಾಪಟ್ಟಿ ಹೀಗಿದೆ

PM Modi pays tributes CRPF jawans Who lost their lives In Pulwama Attack

ಬೆಂಗಳೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫೆಬ್ರವರಿ 6 ರಂದು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರು ಹಾಗೂ ತುಮಕೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದು, ಪ್ರಧಾನಿ ಮೋದಿ ಅವರ ಒಂದು ದಿನದ ವೇಳಾಪಟ್ಟಿ ಮಾಹಿತಿ ಇಲ್ಲಿದೆ.

ಫೆ.6ರಂದು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳ ವೇಳಾಪಟ್ಟಿ

ಬೆಳಗ್ಗೆ 8:20: ದೆಹಲಿಯಿಂದ ಐಎಎಫ್ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ

10:55: ಬೆಂಗಳೂರು ಎಚ್‌ಎಎಲ್‌ ಏರ್‌ಪೋರ್ಟ್‌ಗೆ ಆಗಮನ

11:00: ಎಚ್‌ಎಎಲ್‌ ಏರ್‌ಪೋರ್ಟ್‌ನಿಂದ ಎಂಐ-17 ಹೆಲಿಕಾಪ್ಟರ್‌ ಮೂಲಕ ನಿರ್ಗಮನ

11:20 : ಎಚ್‌ಎಎಲ್‌ ಏರ್‌ಪೋರ್ಟ್‌ನಿಂದ ಎಂಐ-17 ಹೆಲಿಕಾಪ್ಟರ್‌ ಮೂಲಕ ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ (ಬಿಐಇಸಿ) ಹೆಲಿಪ್ಯಾಡ್‌ಗೆ ಆಗಮನ

11:25: ಬಿಐಇಸಿ ಹೆಲಿಪ್ಯಾಡ್‌ನಿಂದ ರಸ್ತೆ ಮೂಲಕ ಇಂಡಿಯಾ ಎನರ್ಜಿ ವೀಕ್-2023 ಕಾರ್ಯಕ್ರಮದಲ್ಲಿ ಭಾಗಿ.

11:30-2:30: ಬಿಐಇಸಿ ಆವರಣದಲ್ಲಿ ಇಂಡಿಯಾ ಎನರ್ಜಿ ವೀಕ್-2023 ಕಾರ್ಯಕ್ರಮ ಉದ್ಘಾಟನೆ ಹಾಗೂ ಭಾಷಣ

ಮಧ್ಯಾಹ್ನ 2:35: ಬಿಐಇಸಿ ಎನರ್ಜಿ ವೀಕ್-2023 ಕಾರ್ಯಕ್ರಮದಿಂದ ನಿರ್ಗಮನ

2:45: ಬೆಂಗಳೂರು ಬಿಐಇಸಿ ಹೆಲಿಪ್ಯಾಡ್‌ನಿಂದ ತುಮಕೂರಿಗೆ ಪ್ರಯಾಣ

ಸಂಜೆ 3:20: ತುಮಕೂರು ಜಿಲ್ಲೆಯ ಗುಬ್ಬಿ ಎಚ್‌ಎಎಲ್‌ ಹೆಲಿಪ್ಯಾಡ್‌ಗೆ ತಲುಪಲಿದ್ದಾರೆ

3:25: ರಸ್ತೆ ಮೂಲಕ ಗುಬ್ಬಿ ಎಚ್‌ಎಎಲ್‌ ಹೆಲಿಕಾಪ್ಟರ್‌ ಉತ್ಪಾದನಾ ಘಟಕಕ್ಕೆ ತೆರಳುತ್ತಾರೆ

3:30: ಗುಬ್ಬಿ ಎಚ್‌ಎಎಲ್‌ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ

3:30- 4:30: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ

4:40: ಗುಬ್ಬಿಯ ಎಚ್‌ಎಎಲ್‌ ಘಟಕದಿಂದ ನಿರ್ಗಮನ

5:25: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ

5:30: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮನ

ರಾತ್ರಿ 8:10 : ದೆಹಲಿ ವಿಮಾನ ನಿಲ್ದಾಣ ತಲುಪುತ್ತಾರೆ

ಇದನ್ನೂ ಓದಿ | Modi In Karnataka : ಸೋಮವಾರ ದಿನಪೂರ್ತಿ ಮೋದಿ ಹವಾ: ಒಂದೇ ದಿನ ಆರು ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಿ

Exit mobile version