ಹುಬ್ಬಳ್ಳಿ: ನಗರದ ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಜ.12 ಹಮ್ಮಿಕೊಂಡಿರುವ ʼರಾಷ್ಟ್ರೀಯ ಯುವಜನೋತ್ಸವʼಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆಗಮಿಸಲಿದ್ದು, ಸಂಜೆ 4 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರ ರಾಜ್ಯ ಪ್ರವಾಸದ ವೇಳಾಪಟ್ಟಿ ಇಂತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸದ ವಿವರ
- 3:45ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ
- ಗೋಕುಲ ರಸ್ತೆ, ಹೊಸೂರು ವೃತ್ತ, ದೇಶಪಾಂಡೆ ನಗರ, ಹಳೇ ಕೋರ್ಟ್ ವೃತ್ತದಿಂದ ರೈಲ್ವೇ ಮೈದಾನಕ್ಕೆ ಪ್ರಯಾಣ, ಮಾರ್ಗ ಮಧ್ಯ ಜನರ ಭೇಟಿ
- 4 ಗಂಟೆಗೆ ಕೇಶ್ವಾಪುರದ ರೈಲ್ವೆ ಮೈದಾನದ ವೇದಿಕೆ ತಲುಪಲಿರುವ ಪ್ರಧಾನಿ ಮೋದಿ
- ಸಂಜೆ 4 ಗಂಟೆಯಿಂದ 4.03 ಗಂಟೆವರೆಗೆ ನಾಡಗೀತೆ.
- 4:03 ರಿಂದ 4:06 ರವರೆಗೆ ಪ್ರಧಾನ ಮಂತ್ರಿಗಳಿಗೆ ಸ್ವಾಗತ ಹಾಗೂ ಅಭಿನಂದನೆ.
- 4:06 ರಿಂದ 4:08ರವರೆಗೆ 26ನೇ ರಾಷ್ಟ್ರೀಯ ಯುವ ಉತ್ಸವದ ಉದ್ಘಾಟನೆ (ಬಟನ್ ಒತ್ತುವ ಮೂಲಕ) ( ವರ್ಣರಂಜಿತ ಸಂಭ್ರಮ ಮತ್ತು ಡೋಲು ಬಾರಿಸುವುದರೊಂದಿಗೆ)
- 4:08 ರಿಂದ 4:13 ರವರೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಂದ ಸ್ವಾಗತ ಭಾಷಣ.
- 4:13 ರಿಂದ 4:18 ರವರೆಗೆ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರ ಭಾಷಣ.
- 4:18 ರಿಂದ 4:25 ರವರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾಷಣ.
- 4:25 ರಿಂದ 4:35ರವರೆಗೆ ಸಾಂಸ್ಕೃತಿಕ ತಂಡಗಳ ಪಥ ಸಂಚಲನ
- 4:35 ರಿಂದ 4:45 ರವರೆಗೆ ಸಾಂಸ್ಕೃತಿಕ ಪ್ರದರ್ಶನ (ಯೋಗ ಹಾಗೂ ಮಲ್ಲಕಂಬ ಪ್ರದರ್ಶನ)
- 4:45 ರಿಂದ 5:15 ರವರೆಗೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣ.
- ನಂತರ 5:16ಕ್ಕೆ ಪ್ರಧಾನಿ ನರೇಂದ್ರ ಮೋದಿ ನಿರ್ಗಮನ
- ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಪ್ರಯಾಣ
ಇದನ್ನೂ ಓದಿ | Youth Festival | ಮೋದಿ ಕಾರ್ಯಕ್ರಮಕ್ಕೆ ಪ್ರತಿ ಕಾಲೇಜಿನಿಂದ 100 ವಿದ್ಯಾರ್ಥಿಗಳನ್ನು ಕರೆತರಬೇಕು ಎಂಬ ಸುತ್ತೋಲೆ ವಾಪಸ್