Site icon Vistara News

ಇಂದು ಬೆಂಗಳೂರಿಗೆ ಮೋದಿ; ಬೋಯಿಂಗ್ ಇಂಡಿಯಾ ಕಾರ್ಯಕ್ರಮದಲ್ಲಿ ಪಿಎಂ ಜತೆ ಸಿಎಂ ಭಾಗಿ

PM Narendra Modi wishes new cm Nitish kumar

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜನವರಿ 19, ಶುಕ್ರವಾರ ಬೆಂಗಳೂರಿಗೆ (Bengaluru) ಆಗಮಿಸಲಿದ್ದಾರೆ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸ್ವಾಗತಿಸಲಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ದೇವನಹಳ್ಳಿಯಲ್ಲಿ ಮೂಡಿಬಂದಿರುವ ಬೋಯಿಂಗ್‌ನ ಹೊಸ ಅತ್ಯಾಧುನಿಕ ಜಾಗತಿಕ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಆವಿಷ್ಕಾರ ಕ್ಯಾಂಪಸ್ ಅನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಅವರು ವೇಗವಾಗಿ ಬೆಳೆಯುತ್ತಿರುವ ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ಎಲ್ಲಾ ಹಂತಗಳಿಂದಲೂ ಭಾರತೀಯ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಪರಿವರ್ತನೆಯ ಬೋಯಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರ ಜತೆಗೆ ಸಿಎಂ ಸಿದ್ದರಾಮಯ್ಯ ಅವರೂ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಪ್ರಧಾನಿ ಮೋದಿ ಅವರನ್ನು ಸಂಜೆ 3.55ಕ್ಕೆ ಬೀಳ್ಕೊಡಲಿದ್ದಾರೆ ಎಂದು ತಿಳಿದು ಬಂದಿದೆ.

ಏರೋಸ್ಪೇಸ್ ದೊಡ್ಡ ಕ್ಯಾಂಪಸ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 43 ಎಕರೆ ವಿಶಾಲ ಪ್ರದೇಶದಲ್ಲಿ ಅಂತರಿಕ್ಷಯಾನ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಕ್ಯಾಂಪಸ್ ತಲೆ ಎತ್ತಿದೆ. ಬೋಯಿಂಗ್ ಸಹಭಾಗಿತ್ವದ ಏರೋಸ್ಪೇಸ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕೇಂದ್ರ 2018ರಲ್ಲಿ ಕಾರ್ಯಾರಂಭಿಸಿದೆ. ಭಾರತದಲ್ಲಿ ಅಂತರಿಕ್ಷಯಾನ ವಾಣಿಜ್ಯಿಕ ಮತ್ತು ರಕ್ಷಣಾ ಕ್ಷೇತ್ರವು ವಿಪುಲ ಅವಕಾಶಗಳನ್ನು ಸೃಷ್ಟಿಸಿದ್ದು, ಕಳೆದ ವರ್ಷವಷ್ಟೇ 1600 ಕೋಟಿ ರೂ ಬಂಡವಾಳವನ್ನು ಹೂಡಿಕೆ ಬಿಐಇಟಿಸಿ ಸಾಮರ್ಥ್ಯ ವಿಸ್ತರಿಸಿದ್ದು, ಅಂದಾಜು ಐದು ಸಾವಿರ ಉದ್ಯೋಗಳ ಅವಕಾಶಗಳು ಸೃಷ್ಟಿಯಾಗಿವೆ.

ಪ್ರಧಾನಿ ಸ್ವಾಗತಕ್ಕೆ ಬಿಜಪಿ ಕಾರ್ಯಕರ್ತರು?

ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇದೇ ಶುಕ್ರವಾರ (ಜನವರಿ 19) ಬೆಂಗಳೂರಿಗೆ (Bengaluru) ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಸ್ವಾಗತಕ್ಕೆ ಕಾರ್ಯಕರ್ತರಿಗೆ ಅವಕಾಶ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಉದ್ದೇಶಿಸಿದ್ದು, ಪ್ರಮುಖರ ಜತೆ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ ಲೋಕಸಭಾ ಚುನಾವಣೆ (Lok Sabha Election 2024) ಸಮೀಪ ಇರುವ ಕಾರಣ, ಮೋದಿ ರೋಡ್‌ ಶೋ (Modi roadshow) ನಡೆಸುವ ಬಗ್ಗೆಯೂ ಚಿಂತನೆ ನಡೆಸಿದ್ದು, ಪ್ರಧಾನಿ ಕಾರ್ಯಾಲಯದಿಂದ ಒಪ್ಪಿಗೆಗೆ ಕಾಯಲಾಗುತ್ತಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Ram Mandir: ಶ್ರೀರಾಮನ ಜೀವನ ಸಾರುವ ಸ್ಟ್ಯಾಂಪ್‌ ಬಿಡುಗಡೆ ಮಾಡಿದ ಮೋದಿ; ಏನಿದರ ವೈಶಿಷ್ಟ್ಯ?

Exit mobile version