ಶಿರಸಿ: ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಪದೆ ಪದೇ ದೈಹಿಕ ದೌರ್ಜನ್ಯ ನಡೆಸಿ ಅತ್ಯಾಚಾರಕ್ಕೆ ಬಳಸಲು ಪ್ರಯತ್ನಿಸುತ್ತಿದ್ದ ಆರೋಪದಡಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಈ ಕುರಿತು ಪಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯ ಮೇಲೆ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ (POCSO Case) ಅಡಿ ಪ್ರಕರಣ ದಾಖಲಾಗಿದೆ.
ರಾಯಚೂರು ಮೂಲದ ಶಿವ ರಾಮಯ್ಯ (26) ಎಂಬಾತನೇ ಈ ಕೃತ್ಯ ನಡೆಸಿದ್ದು ಆತನನ್ನು ಬಂಧಿಸಲಾಗಿದೆ. ಈತ ನಾಲ್ಕು ವರ್ಷದ ಬಾಲಕಿಯ ಮೇಲೆ ನಿರಂತರ ದೈಹಿಕ ಹಿಂಸೆ ನೀಡಿ ಆಕೆಯನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಹೊಂದಲು ಪ್ರಯತ್ನ ಪಡುತ್ತಿದ್ದ. ಇದನ್ನು ಅರಿತ ಪಾಲಕರು ಆತನ ಮೇಲೆ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಈಗ ಆರೋಪಿಯ ಮೇಲೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿದ್ದಾರೆ.
ಮಾರುಕಟ್ಟೆ ಪೊಲೀಸ್ ಠಾಣೆಯ ಪಿ.ಎಸ್.ಐ. ಭೀಮಾಶಂಕರ ಪ್ರಕರಣ ದಾಖಲಿಸಿಕೊಂಡಿದ್ದು ಸಿ.ಪಿ.ಐ. ರಾಮಚಂದ್ರ ನಾಯಕ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Video Viral: ಸರ್ಕಾರಿ ಬಸ್ಸಲ್ಲಿ ಮಹಿಳೆಯರ ಪಾರುಪಥ್ಯ; ಸೀಟ್ ಹಿಡಿಯೋಕೆ ಡ್ರೈವರ್ ಸೀಟ್‌ನಿಂದ ನುಗ್ಗಿದ ಗಂಡಸರು!
ಲಿಫ್ಟ್‌ನಲ್ಲಿ ಸಿಕ್ಕ ಬಾಲಕಿಗೆ ಲೈಂಗಿಕ ದೌರ್ಜನ್ಯ; ಫುಡ್ ಡೆಲಿವರಿ ಹುಡುಗ ಸೆರೆ
ಬೆಂಗಳೂರು: ಫುಡ್ ಡೆಲಿವರಿ ಕೊಡಲು (Food Delivery Boy) ಬಂದಿದ್ದ ಯುವಕನೊಬ್ಬ , ಲಿಫ್ಟ್‌ನಲ್ಲಿ ಸಿಕ್ಕ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಈಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ತಲಘಟ್ಟಪುರ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್ಮೆಂಟ್ನ 13ನೇ ಮಹಡಿಯಲ್ಲಿರುವ ಫ್ಲಾಟ್ನಲ್ಲಿರುವವರಿಗೆ ಫುಡ್ ಡೆಲಿವರಿ ಕೊಡಲು ಹೋಗಿದ್ದವ ಒಂಟಿಯಾಗಿ ಸಿಕ್ಕ ಬಾಲಕಿ ಮೇಲೆ ಕ್ರೌರ್ಯ ತೋರಿಸಿದ್ದಾನೆ.
13ನೇ ಮಹಡಿಗೆ ಚೇತನ್ ಲಿಫ್ಟ್‌ನಲ್ಲಿ ಹೋಗುತ್ತಿದ್ದ. ಆಗ 10 ವರ್ಷದ ಬಾಲಕಿಯೂ ಅಲ್ಲಿ ಇದ್ದಳು. ಚೇತನ್ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಲಿಫ್ಟ್ನಿಂದ ಹೊರಬಿದ್ದು ಮನೆಗೆ ಹೋದ ಹುಡುಗಿ ಅಮ್ಮನಿಗೆ ವಿಷಯ ತಿಳಿಸಿದ್ದಾಳೆ. ಆಕೆಯ ತಾಯಿ ತಕ್ಷಣವೇ ಅಪಾರ್ಟ್ಮೆಂಟ್ನ ಸೆಕ್ಯೂರಿಟಿಗೆ ವಿಷಯ ಮುಟ್ಟಿಸಿದಳು. ಯುವಕ ಫುಡ್ ಡೆಲಿವರಿ ಕೊಟ್ಟು ವಾಪಸ್ ಹೋಗುವುದರೊಳಗೆ ಅಪಾರ್ಟ್ಮೆಂಟ್ನ ಇತರ ನಿವಾಸಿಗಳು, ಸೆಕ್ಯೂರಿಟಿ ಎಲ್ಲ ಸೇರಿ ಅವನನ್ನು ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಚೇತನ್ ವಿರುದ್ಧ ಸದ್ಯ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Free Bus Service: ಹೆಚ್ಚಿದ ನಾರಿ ಶಕ್ತಿ! 166 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿರುವ ಶಕ್ತಿ ಸ್ಕೀಂ!
ಇನ್ನು ಲಿಫ್ಟ್‌ನಲ್ಲಿ ಹಾಕಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಫುಡ್ ಡೆಲಿವರಿ ಬಾಯ್ ಕೃತ್ಯ ಸೆರೆಯಾಗಿದೆ. ಪೊಲೀಸರು ಚೇತನ್ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಅಪಾರ್ಟ್ಮೆಂಟ್ಗಳಲ್ಲಿ ಹೀಗೆ ಮಕ್ಕಳೂ ಕೂಡ ಒಬ್ಬೊಬ್ಬರೇ ಲಿಫ್ಟ್‌ನಲ್ಲಿ ಓಡಾಡುವುದು ಸಾಮಾನ್ಯ. ಆದರೆ ಈ ಘಟನೆ ಅಲ್ಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಹೀಗೆ ಮಕ್ಕಳನ್ನು ಒಬ್ಬೊಬ್ಬರನ್ನೇ ಕಳಿಸುವ ಮುನ್ನ ಯೋಚಿಸುವಂತೆ ಮಾಡಿದೆ.