Site icon Vistara News

ಜಾನುವಾರುಗಳ ಪ್ರಾಣಕ್ಕೆ ಕುತ್ತು ತಂದ ವಿಷದ ಹುಲ್ಲು; ಬಲೆಗೆ ಬಿದ್ದ ಚಿರತೆ, ಮುಂದುವರಿದ ಕಾಡಾನೆ ದಾಂಧಲೆ

cows death

cows death

ಶಿವಮೊಗ್ಗ/ ಚಾಮರಾಜನಗರ/ ರಾಮನಗರ: ಶಿವಮೊಗ್ಗದ ಸೊರಬ ತಾಲೂಕಿನ ಕೆರೆಕೊಪ್ಪದಲ್ಲಿ ವಿಷದ ಹುಲ್ಲನ್ನು (Poisonous grass) ಸೇವಿಸಿ‌ 10ಕ್ಕೂ ಹೆಚ್ಚು ಹಸುಗಳು (cows Death) ಮೃತಪಟ್ಟಿವೆ. ದ್ಯಾವರಾಯಪ್ಪ ಹಾಗು ರಾಮಣ್ಣ ಎಂಬುವರಿಗೆ ಸೇರಿದ ಹಸುಗಳು ಹುಲ್ಲು ಮೇಯಲು ಹೋದಾಗ ವಿಷದ ಗಿಡವನ್ನು ಸೇವಿಸಿದ್ದು, ಕ್ಷಣಾರ್ಧದಲ್ಲೇ ಪ್ರಾಣಬಿಟ್ಟಿವೆ. ಜೀವನಕ್ಕೆ ಆಧಾರವಾಗಿದ್ದ ಜಾನುವಾರು ಮೃತಪಟ್ಟಿದ್ದರಿಂದ ಮಾಲೀಕರು ಕಂಗಾಲಾಗಿದ್ದಾರೆ.

ಕಾಡಾನೆ ದಾಂಧಲೆ

ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದ ಕಾಡಾನೆಗಳು

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕುರುಬರ ಹುಂಡಿಯಲ್ಲಿ ಕಾಡಾನೆಗಳು ಹೊಲ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ‌ ನಷ್ಟ ಮಾಡಿದೆ. ಗ್ರಾಮದ ಶಿವರಾಜು ಎಂಬುವವರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು ತೆಂಗು, ಮಾವಿನ ಮರವನ್ನು ತುಳಿದು ಹಾಳು ಮಾಡಿವೆ. ಕಳೆದ ಒಂದು ವಾರದಿಂದ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸುತ್ತಿದ್ದು ರೈತರು ಕಂಗಾಲಾಗಿದ್ದಾರೆ.

ಮಾವಿನ ಮರವನ್ನು ನಾಶ ಮಾಡಿರುವ ಕಾಡಾನೆಗಳು

ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾರು ಸ್ಥಳಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ. ಬಂಡೀಪುರ ಅರಣ್ಯದ ಓಂಕಾರ ವಲಯದಿಂದ ಕಾಡಾನೆಗಳು ಬರುತ್ತಿದ್ದು, ಕಾಡಂಚಿನ ಜಮೀನು ಹೊಂದಿರುವ ರೈತರು ಭೀತಿಯಲ್ಲಿದ್ದಾರೆ.

ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಜನತೆ

ರಾಮನಗರದಲ್ಲಿ ಹಾರೋಹಳ್ಳಿ ತಾಲೂಕಿನ ಅರೆಗಡಕಲು ಗ್ರಾಮದಲ್ಲಿ ಗಂಡು ಚಿರತೆಯೊಂದು ಬೋನಿಗೆ ಬಿದ್ದಿದೆ. ಹಲವು ದಿನಗಳಿಂದ ಅರೆಗಡಕಲು ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿತ್ತು. ಇದರಿಂದ ಭಯಗೊಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಬೋನು ಇಡಲು ಮನವಿ ಮಾಡಿದರು.

ಬೋನಿಗೆ ಬಿದ್ದ ಚಿರತೆ

ಇದನ್ನೂ ಓದಿ: Weather Report : ರಾಮನಗರ, ಮೈಸೂರು ಸೇರಿ ಹಲವೆಡೆ ಗುಡುಗು ಮಳೆ; ಯಾವ ಜಿಲ್ಲೆಗಳಲ್ಲಿ ಉರಿ ಬಿಸಿಲು?

ಹೀಗಾಗಿ ಎರಡು ದಿನದ ಹಿಂದೆ ಅರೆಗಡಕಲು ಗ್ರಾಮದಲ್ಲಿನ ತೋಟವೊಂದರಲ್ಲಿಅರಣ್ಯ ಇಲಾಖಾ ಸಿಬ್ಬಂದಿ ಬೋನು ಇರಿಸಿದರು. ಮಂಗಳವಾರ ಬೆಳಗ್ಗೆ ಚಿರತೆ ಬೋನಿಗೆ ಬಿದ್ದಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ.

Exit mobile version