ಬೆಂಗಳೂರು: ಜೈಲಿನಲ್ಲಿ ಇದ್ದುಕೊಂಡೆ ಆರೋಪಿಯೊಬ್ಬ ಹೊರಗೆ ತನ್ನ ಸಹಚರರನ್ನು ಬಿಟ್ಟು ವೇಶ್ಯಾವಾಟಿಕೆ ದಂಧೆ (Prostitutes Case) ನಡೆಸುತ್ತಿರುವ ಪ್ರಕರಣವು ಬೆಳಕಿಗೆ ಬಂದಿದೆ. ಮಂಜುನಾಥ್ ಅಲಿಯಾಸ್ ಸಂಜು ಎಂಬಾತ ವೇಶ್ಯಾವಾಟಿಕೆಯನ್ನೇ ಫುಲ್ ಟೈಂ ಜಾಬ್ ಮಾಡಿಕೊಂಡಿದ್ದಾನೆ.
ಲೊಕ್ಯಾಂಟೋ ಆ್ಯಪ್ ಮುಖಾಂತರವೇ ಬ್ಯುಸಿನೆಸ್ ಮಾಡುವ ಈತ ತನ್ನ ಸಹಚರರಾದ ಅರುಣ ಅಲಿಯಾಸ್ ಹೊಟ್ಟೆ, ರಾಜೇಶ್ ಅಲಿಯಾಸ್ ರಾಜು ಹಾಗೂ ರಾಘವೇಂದ್ರ ಅಲಿಯಾಸ್ ರಾಘು, ದರ್ಶನ್ ಎಂಬುವವರ ಜತೆಗೂಡಿ ದಂಧೆ ನಡೆಸುತ್ತಿದ್ದ.
ಸುದ್ಗುಂಟೆಪಾಳ್ಯದಲ್ಲಿ ಲೊಕ್ಯಾಂಟೋ ಆ್ಯಪ್ ಮೂಲಕ ವೇಶ್ಯಾವಾಟಿಕೆ ಮಾಡುವ ಸಿಕ್ಕಿಬಿದ್ದಿದ್ದ. ಮಂಜುನಾಥ್ ಜೈಲಿನಿಂದಲೇ ಲೊಕ್ಯಾಂಟೋ ಆಪ್ ಮುಖಾಂತರ ಹುಡುಗಿಯರನ್ನು ವೇಶ್ಯಾವಾಟಿಕೆಗೆ ಪ್ರಚೋದನೆ ಮಾಡುತ್ತಿದ್ದ. ಹೊರ ರಾಜ್ಯದಿಂದ ಕೆಲಸ ಅರಸಿ ಬರುವ ಹುಡುಗಿಯರನ್ನೇ ಈತನ ಸಹಚರರು ಟಾರ್ಗೆಟ್ ಮಾಡುತ್ತಿದ್ದರು.
ಹೊರ ರಾಜ್ಯದ ಹುಡುಗಿಯರನ್ನು ಕರೆತಂದು ಬಾಡಿಗೆ ಮನೆ ಮಾಡಿ ಇಟ್ಟುಕೊಂಡಿದ್ದರು. ತಮ್ಮ ಸಹಚರರಿಂದ ಗಿರಾಕಿಗಳಿಗೆ ಕರೆ ಮಾಡಿ, ವಾಟ್ಸ್ ಆ್ಯಪ್ ಕಾಲ್‌ಗಳ ಮೂಲಕ ಹಣದ ವ್ಯವಹಾರವನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು. ಬಳಿಕ ಗಿರಾಕಿಗಳು ಕಳುಹಿಸುವ ಲೊಕೇಷನ್‌ಗಳಿಗೆ ಹುಡುಗಿಯರನ್ನು ಕಳಿಸುತ್ತಿದ್ದರು.
ಹೊರರಾಜ್ಯದಿಂದ ಅಕ್ರಮವಾಗಿ ಕರೆತಂದಿರುವ ಹುಡುಗಿಯರಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದ ಹಾಗೂ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಸಿಕ್ಕಿತ್ತು. ಹುಳಿಮಾವು ಬಳಿ ಇರುವ ಬಾಡಿಗೆ ಮನೆ ಮೇಲೆ ದಾಳಿ ಮಾಡಿದಾಗ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದವರನ್ನು ಬಂಧಿಸಿದ್ದಾರೆ.
ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಸಿಸಿಬಿ ಪೊಲೀಸರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಜೈಲಿನಲ್ಲಿರುವ ಮಂಜುನಾಥ್ ಅಲಿಯಾಸ್ ಸಂಜು ಬಿಟ್ಟು ಉಳಿದವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಬಾಡಿ ವಾರೆಂಟ್ ಪಡೆದು ಮಂಜುನಾಥ್‌ನನ್ನೂ ಕೂಡ ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ: Assault Case : ಜಗಳ ಬಿಡಿಸಲು ಹೋದ ಕಾನ್ಸ್‌ಟೇಬಲ್‌ಗೆ ಬೈದು ಕೆನ್ನೆಗೆ ಬಾರಿಸಿದ!
ದಾರಿ ಬಿಡಿ ಎಂದಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ
ರಸ್ತೆ ಬಳಿ ಸಿಗರೇಟ್ ಸೇದುತ್ತಿದ್ದಾಗ ದಾರಿ ಬಿಡಿ ಎಂದಿದ್ದಕ್ಕೆ ವ್ಯಕ್ತಿಗಳಿಬ್ಬರು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಸಂಜಯನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಳೆದ 10ರಂದು ವಿದ್ಯಾರ್ಥಿ ಪ್ರಜ್ವಲ್ ಎಂಬಾತ ಸಂಜಯನಗರದ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ.
ಭೂಪಸಂದ್ರದ ಮುಖ್ಯ ರಸ್ತೆ ಮೂಲಕ ಕಾಲೇಜಿಗೆ ಹೋಗುವಾಗ ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡು ಅಸಾದುಲ್ಲಾಖಾನ್ ಮತ್ತು ಮುಸೈಬುಲ್ಲಾಖಾನ್ ಎಂಬುವವರು ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಪ್ರಜ್ವಲ್ ಹಾರ್ನ್ ಮಾಡಿ ದಾರಿ ಬಿಡಿ ಎಂದಿದ್ದ. ಇಷ್ಟಕ್ಕೆ ಕೋಪಗೊಂಡ ಅಸಾದುಲ್ಲಾಖಾನ್ ಮತ್ತು ಮುಸೈಬುಲ್ಲಾಖಾನ್ ಎಂಬುವವರು ಪ್ರಜ್ವಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪ್ರಜ್ವಲ್ ತಂದೆ ಸಂಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಇಬ್ಬರನ್ನು ಬಂಧಿಸಿ ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ